ಬೆಂಗಳೂರು : ರಾಜಸ್ಥಾನದಿಂದ ನಾಯಿ ಮಾಂಸ ತುಂಬಿರುವ ಬಾಕ್ಸ್ಗಳು ಬಂದಿವೆ ಎಂದು ಹೇಳಿ ಹಿಂದೂ ಪರ ಸಂಘಟನೆಗಳ ನಾಯಕ ಪುನೀತ್ ಕೆರೆಹಳ್ಳಿ ಹಾಗೂ ತಂಡ ಪ್ರತಿಭಟನೆ ಮಾಡಿದ್ದರು. ಈ ಸಂಬಂಧ ಪುನೀತ್ ಕೆರೆಹಳ್ಳಿಯನ್ನು ಬಂಧಿಸಿ ಲಾಕಪ್ನಲ್ಲಿ ಬಟ್ಟೆ ಬಿಚ್ಚಿ ಮನಸ್ಸು ಇಚ್ಛೆ ಹಲ್ಲೆ ಮಾಡಿದ್ದರು ಎಂದು ACP ಚಂದನ್ ವಿರುದ್ಧ ಪುನೀತ್ ಕೆರೆಹಳ್ಳಿ ಗಂಭೀರ ಆರೋಪ ಮಾಡಿದ್ದರು.
ಪುನೀತ್ ಕೆರೆಹಳ್ಳಿ ಬಂಧನ ವಿರೋಧಿಸಿ ಇಂದು ಎಸಿಪಿ ಕಚೇರಿಗೆ ಹಿಂದೂ ಕಾರ್ಯಕರ್ತರ ಸಮೇತ ಮಾಜಿ ಸಂಸದ ಪ್ರತಾಪ್ ಸಿಂಹ ಭೇಟಿ ನೀಡಿದ್ದರು. ವಿಜಯನಗರ ACP ಕಚೇರಿಯಲ್ಲಿ DCP ಶೇಖರ್ ಟೆಕ್ಕಣ್ಣವರ್ ಭೇಟಿ ಮಾಡಿ, ಎಸಿಪಿ ಚಂದನ್ ಕುಮಾರ್ ದೌರ್ಜನ್ಯದ ಬಗ್ಗೆ ದೂರು ನೀಡಿದ್ದಾರೆ. ಈ ವೇಳೆ ಶಾಸಕ ಹರೀಶ್ ಪೂಂಜಾ, ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಸಾಥ್ ನೀಡಿದ್ದರು.
ಸೆಂಟ್ರಲ್ DCP ಮುಂದೆ ಮೂರು ಬೇಡಿಕೆ ಇಟ್ಟ ಮಾಜಿ ಸಂಸದ ಪ್ರತಾಪ್ ಸಿಂಹ ಅವರು, ಕಳಪೆ ಮಾಂಸ ಪೂರೈಸ್ತಿರೋ ಅಬ್ದುಲ್ ರಜಾಕ್ ಮೇಲೆ FIR ಆಗ್ಬೇಕು. ಪುನೀತ್ ಕೆರೆಹಳ್ಳಿ ಮೇಲೆ ದೌರ್ಜನ್ಯ ಮಾಡಿದ ವಿಜಯನಗರ ಉಪವಿಭಾಗ ACP ಚಂದನ್ ವಿರುದ್ಧ ತನಿಖೆ ಆಗ್ಬೇಕು.ಪೊಲೀಸರು ವಶಕ್ಕೆ ಪಡೆದ ಮಾಂಸದ ಸತ್ಯಾಸತ್ಯತೆ ಬಯಲು ಮಾಡ್ಬೇಕು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ‘ನೈಸ್ ರೋಡ್’ ಸಿನಮಾಗೆ ಕಂಟಕ – ನಿರ್ಮಾಪಕರಿಗೆ ನೋಟಿಸ್, ಅಷ್ಟಕ್ಕೂ ಆಗಿದ್ದೇನು?