ಚಿತ್ರದುರ್ಗ : ಆಕಸ್ಮಿಕವಾಗಿ ಬೆಂಕಿ ತಗುಲಿ ಮೂರು ಗುಡಿಸಲುಗಳು ಸುಟ್ಟು ಕರಕಲಾಗಿರುವ ಘಟನೆ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಮುಂಗುಸುವಳ್ಳಿ ಗ್ರಾಮದಲ್ಲಿ ನಡೆದಿದೆ.
ಮನೆಯಲ್ಲಿ ಯಾರು ಇಲ್ಲದ ವೇಳೆ ಬೆಂಕಿ ತಗುಲಿ ಈ ದುರ್ಘಟನೆ ಜರುಗಿದೆ. ಗ್ರಾಮದ ಗೋವಿಂದಪ್ಪ ಹಾಗೂ ಲಕ್ಷ್ಮಮ್ಮ ಎಂಬುವವರ ಗುಡಿಸಲುಗಳು ಸುಟ್ಟು ಭಸ್ಮವಾಗಿದೆ. ಇನ್ನು ಗುಡಿಸಲಿನ ಒಳ ಭಾಗದಲ್ಲಿದ್ದ ಗೃಹೋಪಯೋಗಿ ವಸ್ತುಗಳು ಸುಟ್ಟು ಕರಕಲಾಗಿದೆ.
ಕುರಿ, ಹಸುವಿಗೂ ಬೆಂಕಿ ತಗುಲಿ ಸಣ್ಣ ಗಾಯಗಳಾಗಿದೆ. ಕುಟುಂಬಸ್ಥರು ಜಮೀನಿಗೆ ಹೋಗಿದ್ದ ವೇಳೆ ಘಟನೆ ಜರುಗಿದ್ದು, ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿದ್ದಾರೆ. ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬಾರದ ಹಿನ್ನೆಲೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಕೇರಳ ದುರಂತದಲ್ಲಿ 9 ಕನ್ನಡಿಗರು ಸಾವು.. ಹಲವರು ನಾಪತ್ತೆ – ರಕ್ಷಣೆಗೆ ಧಾವಿಸಿದ ರಾಜ್ಯ ಸರ್ಕಾರ..!
Post Views: 32