Download Our App

Follow us

Home » ರಾಜಕೀಯ » ಪಾದಯಾತ್ರೆಗೆ ನಾನೇಕೆ ಬರಲಿ – ಬಿಜೆಪಿ ನಾಯಕರ ವಿರುದ್ಧ ಹೆಚ್​ಡಿಕೆ ಗರಂ..!

ಪಾದಯಾತ್ರೆಗೆ ನಾನೇಕೆ ಬರಲಿ – ಬಿಜೆಪಿ ನಾಯಕರ ವಿರುದ್ಧ ಹೆಚ್​ಡಿಕೆ ಗರಂ..!

ದೆಹಲಿ : ಮೂಡಾ ಮತ್ತು ವಾಲ್ಮೀಕಿ ಹಗರಣ ವಿರುದ್ಧವಾಗಿ ಬಿಜೆಪಿ ಹಮ್ಮಿಕೊಂಡಿದ್ದ ಪಾದಯಾತ್ರೆ ಕುರಿತಂತೆ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ಪಾದಯಾತ್ರೆಗೆ ನಾನೇಕೆ ಬರಲಿ. ಈ ಪಾದಯಾತ್ರೆಯಿಂದ ಸಾಧನೆ ಏನ್​ ಮಾಡ್ತೀರಾ ? ನನ್ನನ್ನು ನಡೆಸಿಕೊಂಡ ಬಗ್ಗೆ ತುಂಬಾ ನೋವಾಗಿದೆ ಎಂದಿದ್ದಾರೆ.

ಈ ಬಗ್ಗೆ ದೆಹಲಿಯಲ್ಲಿ ಹೆಚ್‌ಡಿ ಕುಮಾರಸ್ವಾಮಿ ಮಾತನಾಡಿ, ಪಾದಯಾತ್ರೆಗೆ ನಮ್ಮನ್ನು ವಿಶ್ವಾಸಕ್ಕೆ ತಗೆದುಕೊಂಡಿಲ್ಲ, ಬೆಂಗಳೂರಿನಿಂದ ಮೈಸೂರುವರೆಗೆ ನಮ್ಮ ಶಕ್ತಿ ಇದೆ. ಇಷ್ಟೆಲ್ಲಾ ಇದ್ದು ವಿಶ್ವಾಸಕ್ಕೆ ತೆಗೆದುಕೊಳ್ಳದ ಮೇಲೆ ಬೆಂಬಲ ಯಾಕೆ ? ಈ ಪಾದಯಾತ್ರೆಗೆ ಮುಖ್ಯಸ್ಥ ಯಾರು..? WHO IS THAT ಪ್ರೀತಂ ಗೌಡ.. ? ದೇವೇಗೌಡರ ಕುಟುಂಬವನ್ನೇ ಸರ್ವನಾಶ ಮಾಡಲು ಹೋದವನು. ಇಂತಹವರ ಜೊತೆ ನನ್ನನ್ನೂ ಕೂರಿಸಿ ಸಭೆ ಮಾಡುತ್ತಾರೆ, ಇದ್ನೆಲ್ಲಾ ಸಹಿಸಿಕೊಳ್ಳೋಕೆ ಆಗುತ್ತಾ..? ನನಗೂ ಇತಿ-ಮಿತಿಗಳಿವೆ ಎಂದಿದ್ದಾರೆ.

ಪೆನ್​ಡ್ರೈವ್​​ಗಳನ್ನು ಬೀದಿಯಲ್ಲಿ ಹಂಚಲು ಯಾರು ಕಾರಣ..? ನಮ್ಮ ಕುಟುಂಬಕ್ಕೆ ವಿಷ ಹಾಕಿದವರ ಜೊತೆ ನನ್ನನ್ನು ಕೂರಿಸ್ತಾರೆ. ಹಾಸನದಲ್ಲಿ ಏನೇನಾಗಿದೆ ಅಂತ ಅವರಿಗೆ ಗೊತ್ತಿಲ್ವಾ ? ಇಡೀ ರಾಜ್ಯದಲ್ಲಿ ಪ್ರವಾಹದ ಇದೆ, ಗ್ರಾಮಗಳು ಮುಳುಗಿವೆ. ಸಾವಿರಾರು ಎಕರೆ ಭೂಮಿ ನೀರು ಪಾಲಾಗಿದೆ, ಇಂಥಾ ಹೊತ್ತಿನಲ್ಲಿ ಮುಡಾ ವಿಚಾರಕ್ಕೆ ಪಾದಯಾತ್ರೆ ಮಾಡ್ಬೇಕಾ..? ಎಂದು ಬಿಜೆಪಿಯ ರಾಜ್ಯ ನಾಯಕರ ಮೇಲೆ ಹೆಚ್​ಡಿಕೆ ಫುಲ್​ ಗರಂ ಆಗಿದ್ದಾರೆ.

ಇದನ್ನೂ ಓದಿ : ವೃಕ್ಷಮಾತೆ ಸಾಲುಮರದ ತಿಮ್ಮಕ್ಕರ ಉಪಸ್ಥಿತಿಯಲ್ಲಿ ‘ಕೋಟಿ ಕೋಟಿ ರೊಕ್ಕ ಗಳಿಸಿ’ ಹಾಡು ಬಿಡುಗಡೆ..!

Leave a Comment

DG Ad

RELATED LATEST NEWS

Top Headlines

ನಕಲಿ ನಕ್ಷೆ ಸೃಷ್ಟಿಸಿ ಕಟ್ಟಡ ನಿರ್ಮಾಣ – ಮಾಲೀಕನ ವಿರುದ್ಧ FIR ದಾಖಲು..!

ಬೆಂಗಳೂರು : ಬಾಬುಸಾಬ್ ಪಾಳ್ಯ ಕಟ್ಟಡ ಕುಸಿತ ದುರಂತದ ಬೆನ್ನಲ್ಲೇ ಬಿಬಿಎಂಪಿ ಎಚ್ಚೆತ್ತುಕೊಂಡಿದೆ. ನಕಲಿ ನಕ್ಷೆ ತಯಾರಿಸಿ ಕಟ್ಟಡ ನಿರ್ಮಿಸಿರುವ ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ರಾಜರಾಜೇಶ್ವರಿನಗರ

Live Cricket

Add Your Heading Text Here