ಬೆಂಗಳೂರು : ಮುಡಾ ಹಗರಣವನ್ನೇ ಅಸ್ತ್ರವಾಗಿಸಿಕೊಂಡಿರುವ ಬಿಜೆಪಿ ಆಗಸ್ಟ್ 3ರಿಂದ ಬೆಂಗಳೂರು TO ಮೈಸೂರಿಗೆ ಪಾದಯಾತ್ರೆ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಆದರೆ ಪಾದಯಾತ್ರೆಗೆ ಬಿಜೆಪಿಯಲ್ಲೇ ಭಾರೀ ಅಪಸ್ವರ ಕೇಳಿಬಂದಿದ್ದು, ಇದೀಗ ಪಾದಯಾತ್ರೆ ಬಿಕ್ಕಟ್ಟಿನ ಮಧ್ಯೆ ವಿಜಯೇಂದ್ರಗೆ ಹೈಕಮಾಂಡ್ ಬುಲಾವ್ ನೀಡಿದೆ. ಹೀಗಾಗಿ ಪ್ರವಾಹ ಪ್ರವಾಸ ರದ್ದುಗೊಳಿಸಿ ವಿಜಯೇಂದ್ರ ದೆಹಲಿಗೆ ತೆರಳಿದ್ದಾರೆ.
ಪಾದಯಾತ್ರೆಗೆ ಬಿಜೆಪಿಯಲ್ಲೇ ಭಾರೀ ಅಪಸ್ವರ ಕೇಳಿಬಂದಿದೆ. ಉತ್ತರದಲ್ಲಿ ಪ್ರತ್ಯೇಕ ಯಾತ್ರೆಗೆ ರಮೇಶ್ ಜಾರಳಿಹೊಳಿ, ಯತ್ನಾಳ್ ಸಜ್ಜಾಗಿದ್ದಾರೆ. ಇತ್ತ ಪಾದಯಾತ್ರೆ ಮುಂದೂಡುವಂತೆ ಮಿತ್ರ ಜೆಡಿಎಸ್ನಿಂದಲೂ ಒತ್ತಡ ಕೇಳಿ ಬಂದಿದ್ದು, ಕುಮಾರಸ್ವಾಮಿ ಬರದಿದ್ರೆ ಪಾದಯಾತ್ರೆ ಸಕ್ಸಸ್ ಆಗಲ್ಲ ಎನ್ನುತ್ತಿದ್ದಾರೆ.
ಅಷ್ಟೇ ಅಲ್ಲದೇ ಬಿಜೆಪಿಯ ಒಕ್ಕಲಿಗ ಮುಖಂಡರಿಂದಲೂ ತಕ್ಷಣ ಯಾತ್ರೆಗೆ ವಿರೋಧ ವ್ಯಕ್ತವಾಗಿದ್ದು, ತರಾತುರಿಯಲ್ಲಿ ವಿಜಯೇಂದ್ರ ಪಾದಯಾತ್ರೆ ಮಾಡುತ್ತಿದ್ದಾರೆ. ಒಬ್ಬರೇ ಕ್ರೆಡಿಟ್ ತೆಗೆದುಕೊಳ್ಳಲು ಹೊರಟಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಇದೆಲ್ಲದರ ಮಧ್ಯೆ ವಿಜಯೇಂದ್ರಗೆ ಅಮಿತ್ ಶಾ ಬುಲಾವ್ ಕೊಟ್ಟಿದ್ದಾರೆ. ಇಂದು ಪ್ರವಾಹ ಪೀಡಿತ ಪ್ರದೇಶಕ್ಕೆ ವಿಜಯೇಂದ್ರ ಒಂದು ತಂಡ ಕರೆದೊಯ್ಯಬೇಕಿದ್ದರು. ಆದರೆ ಹೈಕಮಾಂಡ್ ಬುಲಾವ್ ನೀಡಿದ ಹಿನ್ನಲೆಯಲ್ಲಿ ವಿಜಯೇಂದ್ರ ಟೀಮ್ ನಿನ್ನೆ ರಾತ್ರಿ ದಿಢೀರ್ ದೆಹಲಿಗೆ ಹೊರಟಿದ್ದಾರೆ.
ಇದನ್ನೂ ಓದಿ : ವಯನಾಡು ಭೂಕುಸಿತ ದುರಂತದಲ್ಲಿ ಕರ್ನಾಟಕದ ನಾಲ್ವರು ಸಾವು, ಹಲವರು ನಾಪತ್ತೆ..!