ಬೆಂಗಳೂರು : ಕಾಂಗ್ರೆಸ್ ಜೊತೆ ವಿಜಯೇಂದ್ರ, ಆರ್. ಅಶೋಕ್ ಒಳಒಪ್ಪಂದ ಮಾಡಿಕೊಂಡಿದ್ದಾರೆ ಎಂದು 20ಕ್ಕೂ ಹೆಚ್ಚು ಬಿಜೆಪಿ ಮುಖಂಡರು ನಿನ್ನೆ ದೆಹಲಿ ವರಿಷ್ಠರಿಗೆ ದೂರು ನೀಡಿದ್ದರು. ಹೈಕಮಾಂಡ್ಗೆ ದೂರು ಕೊಟ್ಟ ಬೆನ್ನಲ್ಲೇ ಇದೀಗ ವಿಜಯೇಂದ್ರ, ಆರ್. ಅಶೋಕ್ ಮತ್ತೊಂದು ಶಾಕ್ ಎದುರಾಗಿದೆ.
ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಆಗ್ರಹಿಸಿ ಆಗಸ್ಟ್ 3ರಿಂದ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ನಡೆಸಲು ತೀರ್ಮಾನಿಸಿದೆ. ಮೈಸೂರು ಪಾದಯಾತ್ರೆಯ ರೂಪುರೇಷೆ ಸಂಬಂಧ ಮೈತ್ರಿ ನಾಯಕರು ನಿನ್ನೆ ಜಂಟಿ ಸಭೆ ನಡೆಸಿ ಈ ತೀರ್ಮಾನ ಕೈಗೊಂಡಿದ್ದಾರೆ. ಆದರೆ ಪಾದಯಾತ್ರೆಗೆ ಸ್ವಪಕ್ಷದಲ್ಲೇ ಅಪಸ್ವರ ಎದಿದ್ದು, ಪರ್ಯಾಯ ಪಾದಯಾತ್ರೆಗೆ ರಮೇಶ್ ಜಾರಕಿಹೊಳಿ, ಯತ್ನಾಳ್ ಸಜ್ಜಾಗಿದ್ದಾರೆ.
ವಿಜಯೇಂದ್ರ, ಆರ್.ಅಶೋಕ್ಗೆ ಠಕ್ಕರ್ ನೀಡಲು ತಯಾರಾಗಿರುವ ರಮೇಶ್ ಜಾರಕಿಹೊಳಿ, ಯತ್ನಾಳ್ ಬಳ್ಳಾರಿಗೆ ಪಾದಯಾತ್ರೆ ಮಾಡಲು ಸಜ್ಜಾಗಿದ್ದಾರೆ. ಕೂಡಲಸಂಗಮದಿಂದ ಬಳ್ಳಾರಿಗೆ ಪ್ರತ್ಯೇಕ ಪಾದಯಾತ್ರೆ ಮಾಡಲು ಹೈಕಮಾಂಡ್ ಬಳಿ ದಿನಾಂಕ ಕೇಳಿದ್ದಾರೆ.
ಹೈಕಮಾಂಡ್ ಬಳಿ ದಿನಾಂಕ ಕೇಳಿರುವ ಯತ್ನಾಳ್, ಜಾರಕಿಹೊಳಿ ಅವರು, ವಿಜಯೇಂದ್ರರನ್ನು ನಾವು ನಾಯಕ ಅಂತಾ ಒಪ್ಪಿಕೊಂಡಿಲ್ಲ. ನಮಗೆ ಹೈಕಮಾಂಡ್ನವರೇ ನಾಯಕರು, ಅವರು ಹೇಳಿದ್ರೆ ಸಾಕು. ಬಳ್ಳಾರಿ ಪಾದಯಾತ್ರೆಗೆ ರಾಜ್ಯನಾಯಕರ ಅನುಮತಿ ಬೇಕಾಗಿಲ್ಲ. ವಾಲ್ಮೀಕಿ ಹಗರಣ ರಾಜ್ಯದ ಅತ್ಯಂತ ದೊಡ್ಡ ಹಗರಣ. ವಿಜಯೇಂದ್ರ ಮತ್ತಿತರರು ಬರಲಿ ಬಿಡಲಿ ವಾಲ್ಮೀಕಿ ಪಾದಯಾತ್ರೆ ಫಿಕ್ಸ್. ನಮ್ಮ ಜೊತೆ ತುಂಬಾ ಶಾಸಕರಿದ್ದಾರೆ, ಈಗ ಹೆಸರು ಹೇಳಲ್ಲ ಎಂದಿದ್ದಾರೆ.
ಇದನ್ನೂ ಓದಿ : ಬೆಂಗಳೂರು : ಗಂಡನ ಅಕ್ರಮ ಸಂಬಂಧಕ್ಕೆ ಬೇಸತ್ತ ಪತ್ನಿ ಲೈವ್ ವಿಡಿಯೋ ಮಾಡಿ ಸೂಸೈಡ್..!