Download Our App

Follow us

Home » ರಾಷ್ಟ್ರೀಯ » ಕೇಂದ್ರ ಬಜೆಟ್​​ನಲ್ಲಿ ಗ್ರಾಹಕರಿಗೆ ಗುಡ್​ ನ್ಯೂಸ್ – ಮೊಬೈಲ್, ಚಿನ್ನ ಸೇರಿ ಕೆಲ ವಸ್ತುಗಳು ಅಗ್ಗ, ಯಾವುದು ದುಬಾರಿ?

ಕೇಂದ್ರ ಬಜೆಟ್​​ನಲ್ಲಿ ಗ್ರಾಹಕರಿಗೆ ಗುಡ್​ ನ್ಯೂಸ್ – ಮೊಬೈಲ್, ಚಿನ್ನ ಸೇರಿ ಕೆಲ ವಸ್ತುಗಳು ಅಗ್ಗ, ಯಾವುದು ದುಬಾರಿ?

ನವದೆಹಲಿ : ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸುತ್ತಿದ್ದು, ಚಿನ್ನ ಪ್ರಿಯರಿಗೆ ಗುಡ್​ ನ್ಯೂಸ್​ ಸಿಕ್ಕಿದೆ. ಚಿನ್ನ, ಬೆಳ್ಳಿ ಮೇಲಿನ ಕಸ್ಟಮ್ಸ್ ತೆರಿಗೆ ಶೇ 6ರಷ್ಟು ಕಡಿತ ಮಾಡುವುದಾಗಿ ಘೋಷಿಸಿದ್ದಾರೆ. ಏರುಗತಿಯಲ್ಲಿ ಹೋಗ್ತಾ ಇದ್ದ ಚಿನ್ನ-ಬೆಳ್ಳಿ ದರಕ್ಕೆ ಇದೀಗ ಕಡಿವಾಣ ಬಿದ್ದಿದೆ. ಇದರೊಂದಿಗೆ ಪ್ಲಾಟಿನಂ ಮೇಲಿನ ಶುಲ್ಕ 6.01ರಷ್ಟು ಇಳಿಕೆಯಾಗಿದೆ.

ಇದರೊಂದಿಗೆ ಮೊಬೈಲ್​​​ ಬಳಕೆದಾರರಿಗೂ ಸಿಹಿ ಸುದ್ದಿ ದೊರೆತಿದ್ದು, ಮೊಬೈಲ್​​ ಬಿಡಿಭಾಗಗಳ ಮೇಲಿನ ತೆರಿಗೆ ಇಳಿಕೆಯಾಗಿದೆ. ಇವುಗಳ ಮೇಲೆ ಇರುವ ಕಸ್ಟಮ್ಸ್ ಡ್ಯೂಟಿಯನ್ನು ಸುಮಾರು ಶೇಕಡಾ 15 ರಷ್ಟು ಕಡಿಮೆ ಮಾಡಲಾಗಿದೆ. ಮೊಬೈಲ್​​ ಚಾರ್ಜರ್​​​, ಇಯರ್​​ ಫೋನ್ಸ್​ , ಸೋಲಾರ್​​ ಪ್ಯಾನಲ್​​​​ಗಳ ದರ ಇಳಿಕೆಯಾಗಿದೆ.

ಪ್ರಮುಖವಾಗಿ, ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವವರಿಗೆ ಕೇಂದ್ರ ಸರ್ಕಾರ ಈ ಬಾರಿ ಕೊಂಚ ನಿರಾಳ ನೀಡಿದೆ. ಕ್ಯಾನ್ಸರ್ ಔಷಧಿಗಳ ಮೇಲೆ ಕಸ್ಟಮ್ಸ್ ಡ್ಯೂಟಿ ಇಳಿಕೆ ಮಾಡುವ ಮೂಲಕ, ಕ್ಯಾನ್ಸರ್​ನ ಮೂರು ಪ್ರಮುಖ ಔಷಧಿಗಳು ಇನ್ಮುಂದೆ ಕೈಗೆಟುಕುವ ದರದಲ್ಲಿ ಸಿಗಲಿವೆ. ಇನ್ನು 20 ರೀತಿಯ ಖನಿಜಗಳ ಮೇಲಿನ ತೆರಿಗೆ ಇಳಿಕೆ ಹಾಗೂ ಲೀಥಿಯಂ ಬ್ಯಾಟರಿಗಳ ಮೇಲಿನ ದರ ಕಡಿತ ಮಾಡುವುದಾಗಿ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.

ಇವು ದುಬಾರಿಯಾಗಲಿವೆ– PVC ಫ್ಲೆಕ್ಸ್ ಬ್ಯಾನರ್‌ಗಳನ್ನು ಆಮದು ಮಾಡಿಕೊಳ್ಳುವುದು ದುಬಾರಿಯಾಗಲಿದೆ. ಕೆಲವು ಟೆಲಿಕಾಂ ಉಪಕರಣಗಳ ಆಮದು ದುಬಾರಿಯಾಗಲಿದೆ. ಮೇಕ್ ಇನ್ ಇಂಡಿಯಾ ಅಡಿಯಲ್ಲಿ ದೇಶದಲ್ಲಿ ತಯಾರಿಸಿದ ಅಗ್ಗದ ದೇಶೀಯ ಉತ್ಪನ್ನಗಳನ್ನು ಉತ್ತೇಜಿಸಲು ಸರ್ಕಾರದ ಘೋಷಣೆ. -ಒಂದು ವರ್ಷಕ್ಕೂ ಹೆಚ್ಚು ಕಾಲ ಹೊಂದಿರುವ ಈಕ್ವಿಟಿ ಹೂಡಿಕೆಗಳು ದುಬಾರಿಯಾಗುತ್ತವೆ. -ತೆರಿಗೆಯನ್ನು 15% ರಿಂದ 20% ಕ್ಕೆ ಹೆಚ್ಚಿಸಲಾಗಿದೆ. ಒಂದು ವರ್ಷಕ್ಕಿಂತ ಹೆಚ್ಚು ಕಾಲ ಹೊಂದಿರುವ ಷೇರುಗಳು ದುಬಾರಿಯಾಗುತ್ತವೆ. 10ರಿಂದ 12.5ಕ್ಕೆ ತೆರಿಗೆ ಹೆಚ್ಚಿಸಲಾಗಿದೆ.

ಇದನ್ನೂ ಓದಿ : ಇಂದು ಮೋದಿ 3.0 ಸರ್ಕಾರದ ಮೊದಲ ಬಜೆಟ್​ – ಈ ಬಾರಿ ರಾಜ್ಯಕ್ಕೆ ಬಂಪರ್ ಗಿಫ್ಟ್​​ ಕೊಡ್ತಾರಾ ನಮೋ?

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here