ಬೆಂಗಳೂರು : ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಮಾಜಿ ಸಚಿವ ಬಿ. ನಾಗೇಂದ್ರ ಅವರಿಗೆ ಆಗಸ್ಟ್ 3ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ.
ಕಸ್ಟಡಿ ಅವಧಿ ಅಂತ್ಯವಾದ ಹಿನ್ನೆಲೆಯಲ್ಲಿ ನಾಗೇಂದ್ರ ಅವರನ್ನು ಇಂದು ಜಾರಿ ನಿರ್ದೇಶನಾಲಯ ಅಧಿಕಾರಿಗಳು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ನಾಗೇಂದ್ರ ಅವರನ್ನು ಇಡಿ ಅಧಿಕಾರಿಗಳು ಕಸ್ಟಡಿಗೆ ಕೇಳಿದ್ದಾರೆ. ಇದೇ ವೇಳೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ಸತ್ಯನಾರಾಯಣ ವರ್ಮಾ ಅವರನ್ನೂ ಸಹ ಕಸ್ಟಡಿಗೆ ಕೇಳಿ ಮನವಿ ಸಲ್ಲಿಸಿದ್ದಾರೆ. ಬಾಡಿ ವಾರೆಂಟ್ ಮೂಲಕ ಇಡಿ ಕಸ್ಟಡಿಗೆ ಕೇಳಿದೆ.
ಸತ್ಯನಾರಾಯಣ ವರ್ಮಾ ಅವರ ಬಗ್ಗೆ ಇಡಿ ಪರ ವಕೀಲರು ವಿಶೇಷ ಕೋರ್ಟ್ಗೆ ಮಾಹಿತಿ ನೀಡಿದ್ದಾರೆ. ತೆಲಂಗಾಣದಲ್ಲಿರುವ ವರ್ಮಾ ಬ್ಯಾಂಕ್ಗೆ ಹಣ ಬಂದಿತ್ತು, ಕೋಟಿ-ಕೋಟಿ ಹಣ ಫಸ್ಟ್ ಫೈನಾನ್ಸ್ ಸೊಸೈಟಿಗೆ ಬಂದಿತ್ತು. ನಂತರ ಈ ಹಣ ಬೇನಾಮಿ ಅಕೌಂಟ್ಗಳಿಗೆ ವರ್ಗಾವಣೆ ಆಗಿತ್ತು. ಚಿನ್ನದ ವ್ಯಾಪಾರಿ, ಹೋಟೆಲ್, ಬಾರ್ ಮಾಲೀಕರಿಗೆ ಬಂದಿತ್ತು. ಬೇನಾಮಿ ಅಕೌಂಟ್ಗಳಿಂದ ನಗದಾಗಿ ಪರಿವರ್ತನೆ ಆಗಿತ್ತು. ನಿಗಮದ ಹಣದಲ್ಲೇ ವರ್ಮಾ ಲ್ಯಾಂಬೋರ್ಗಿನಿ ಕಾರ್ ಖರೀದಿಸಿದ್ದ ಎಂದು ಇಡಿ ಪರ ವಕೀಲರು ವಿಶೇಷ ಕೋರ್ಟ್ಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ತರುಣ್–ಸೋನಾಲ್ ಮದುವೆ ಡೇಟ್ ಫಿಕ್ಸ್ – ಸ್ಪೆಷಲ್ ವಿಡಿಯೋದಲ್ಲಿ ಕಪಲ್ಸ್ ಸಖತ್ ಮಿಂಚಿಂಗ್..!