ಕಾಟೇರ ಚಿತ್ರದ ಡೈರೆಕ್ಟರ್ ತರುಣ್ ಸುಧೀರ್ ತಮ್ಮ ಜೀವನ ಸಂಗಾತಿ ಯಾರು ಅನ್ನೋದನ್ನ ಅಧಿಕೃತವಾಗಿಯೇ ಅನೌನ್ಸ್ ಮಾಡಿದ್ದಾರೆ. ಪ್ರತಿ ಸಿನಿಮಾದಲ್ಲಿಯೂ ತಮ್ಮ ಕ್ರಿಯೆಟಿವಿಟಿ ಮೂಲಕ ಪ್ರೇಕ್ಷಕರ ಮುಂದೆ ಹೊಸ ಹೊಸ ಕಥೆ ತರುವ ನಿರ್ದೇಶಕ ತರುಣ್ ಸುಧೀರ್ ಈಗ ತಮ್ಮ ಜೀವನದ ರಿಯಲ್ ನಾಯಕಿಯನ್ನ ಆಯ್ಕೆ ಮಾಡಿಕೊಂಡಿದ್ದಾರೆ. ಈ ವಿಚಾರವನ್ನ ತಮ್ಮದೇ ಸ್ಟೈಲ್ನಲ್ಲಿ ಕ್ರಿಯೆಟಿವ್ ಆಗಿ ಅಭಿಮಾನಿಗಳು ಮತ್ತು ಸ್ನೇಹಿತರ ಮುಂದೆ ಪ್ರೆಸೆಂಟ್ ಮಾಡ್ತಿದ್ದಾರೆ.
ಯೆಸ್ ತರುಣ್ ಸುಧೀರ್ ಮತ್ತು ಸೋನಾಲ್ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಈ ವಿಚಾರವನ್ನ ಬ್ಯೂಟಿಫುಲ್ ಆಗಿರೋ ವಿಡಿಯೋ ಮೂಲಕ ತಿಳಿಸುತ್ತಿದ್ದಾರೆ. ತರುಣ್ ಮತ್ತು ಸೋನಾಲ್ ಇಬ್ಬರು ಸಿನಿಮಾ ಇಂಡಸ್ಟ್ರೀಯವರೇ ಆಗಿರೋದ್ರಿಂದ ತಮ್ಮ ಪ್ರೀವೆಡ್ಡಿಂಗ್ ವಿಡಿಯೋವನ್ನ ಥಿಯೇಟರ್ ನಲ್ಲಿಯೇ ಶೂಟ್ ಮಾಡಿದ್ದಾರೆ. ನವರಂಗ್ ಥಿಯೇಟರ್ನಲ್ಲಿ ಈ ವಿಡಿಯೋ ಶೂಟ್ ಮಾಡಿದ್ದು, ಸಿನಿಮಾ ಸೀನ್ ರೀತಿಯೇ ತರುಣ್ ಮತ್ತು ಸೋನಾಲ್ ವಿಡಿಯೋ ಮೂಡಿ ಬಂದಿದೆ. ಸಿನಿಮಾಟೋಗ್ರಾಫರ್ ಎ ಜೆ ಶೆಟ್ಟಿ ಈ ವಿಡಿಯೋ ಶೂಟ್ ಮಾಡಿದ್ದಾರೆ. ಆಗಸ್ಟ್ 11ರಂದು ಬೆಂಗಳೂರಿನ ಕೆಂಗೇರಿ ಬಳಿ ಇರೋ ಪೂರ್ಣಿಮಾ ಫ್ಯಾಲೆಸ್ ನಲ್ಲಿ ವಿವಾಹ ಜರುಗಲಿದೆ.
ಸಾಮಾನ್ಯವಾಗಿ ಪ್ರೀವೆಡ್ಡಿಂಗ್ ಅಂದ್ರೆ ಜನರು ಸಿನಿಮಾ ಸ್ಟೈಲ್ ನಲ್ಲಿ ಇರಬೇಕು ಅಂತ ಸಿನಿಮ್ಯಾಟಿಕ್ ಆಗಿ ಶೂಟ್ ಮಾಡ್ತಾರೆ. ಆದ್ರೆ ತರುಣ್ ಮತ್ತು ಸೋನಾಲ್ ಇಬ್ಬರೂ ಸಿನಿಮಾದವ್ರೇ ಆಗಿರೋದ್ರಿಂದ ಬೇರೆಯದ್ದೇ ಸ್ಟೈಲ್ ನಲ್ಲಿ ಇರಲಿ ಅಂತ ಥಿಯೇಟರ್ ನಲ್ಲಿ ಶೂಟ್ ಮಾಡಿದ್ದಾರೆ. ಅದಷ್ಟೇ ಅಲ್ಲದೆ ಸಿನಿಮಾ ಅಂದ್ರೆ ಸಿಂಗಲ್ ಸ್ಕ್ರೀನ್ ಥಿಯೇಟರ್ ಅದ್ರಲ್ಲೂ ನಿರ್ದೇಶಕ ತರುಣ್ ಚಿಕ್ಕ ವಯಸ್ಸಿನಿಂದಲೂ ನವರಂಗ್ ಥಿಯೇಟರ್ ನಲ್ಲಿ ಸಿನಿಮಾಗಳನ್ನ ನೋಡಿಕೊಂಡು ಬಂದವ್ರು, ಈಗ ತಮ್ಮ ನಿರ್ದೇಶನದ ಸಿನಿಮಾಗಳು ನವರಂಗ್ ಥಿಯೇಟರ್ ನಲ್ಲಿ ಶತದಿನೋತ್ಸವ ಪೂರೈಸಿವೆ. ಹಾಗಾಗಿ ನವರಂಗ್ ಥಿಯೇಟರ್ ನಲ್ಲೇ ತಮ್ಮ ಪ್ರೀವೆಡ್ಡಿಂಗ್ ಶೂಟ್ ಮಾಡಿಸಿದ್ದಾರೆ.
ಇನ್ನು ಪ್ರೀವೆಡ್ಡಿಂಗ್ ಶೂಟ್ ನಲ್ಲಿ ತರುಣ್ ಮತ್ತು ಸೋನಾಲ್ ಬ್ಲಾಕ್ ಅಂಡ್ ಬ್ಲಾಕ್ ಔಟ್ ಫಿಟ್ ನಲ್ಲಿ ಕಾಣಿಸಿಕೊಂಡಿದ್ದು ತರುಣ್ ಅವ್ರಿಗೆ ಡಿಸೈನರ್ ಚೇತನ್ ಕಾಸ್ಟ್ಯೂಮ್ಸ್ ಡಿಸೈನ್ ಮಾಡಿದ್ದು, ಸೋನಾಲ್ ಅವ್ರಿಗೆ ರಶ್ಮಿ ಅವ್ರು ಡಿಸೈನ್ ಮಾಡಿದ್ದಾರೆ. ಸದ್ಯ ತರುಣ್ ಮತ್ತು ಸೋನಾಲ್ ಮದುವೆ ಸಂಭ್ರಮ ಜೋರಾಗಿದ್ದು, ಇಷ್ಟು ದಿನ ಹೀರೋಯಿನ್ ಮತ್ತು ಡೈರೆಕ್ಟರ್ ಆಗಿದ್ದ ಸೋನಾಲ್ ಮತ್ತು ತರುಣ್ ಇನ್ನು ಕೆಲವೇ ದಿನಗಳಲ್ಲಿ ಸತಿ-ಪತಿಗಳಾಗಿ ಜೀವನ ಶುರು ಮಾಡಲಿದ್ದಾರೆ.
ಇದನ್ನೂ ಓದಿ : ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ‘ಕೃಷ್ಣಂ ಪ್ರಣಯ ಸಖಿ’ ಚಿತ್ರದ ಮೂರನೇ ಸಾಂಗ್ ರಿಲೀಸ್..!