ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ದರ್ಶನ್ & ಗ್ಯಾಂಗ್ ಜೈಲು ಸೇರಿದ್ದಾರೆ. ಪ್ರಕರಣದ ತನಿಖೆಯನ್ನು ಈಗಾಗಲೇ ಪೊಲೀಸರು ಚರುಕುಗೊಳಿಸುವ ಮೂಲಕ ಮಹತ್ವದ ಸಾಕ್ಷ್ಯಗಳನ್ನು ಕಲೆಹಾಕುವ ಕೆಲಸವನ್ನು ಮಾಡುತ್ತಿದ್ದಾರೆ. ದರ್ಶನ್ ಗ್ಯಾಂಗ್ ಕ್ರೌರ್ಯ ಬಗೆದಷ್ಟೂ ಬಯಲಾಗ್ತಿದೆ.
ದರ್ಶನ್ ಗ್ಯಾಂಗ್ ರೇಣುಕಾಸ್ವಾಮಿಗೆ ಸಾಯುವಂತೆ ಬಡಿದು ಅಪಾಲಜಿ ವಿಡಿಯೋ ಮಾಡಲು ಯತ್ನಿಸಿದೆ. ರೇಣುಕಾಸ್ವಾಮಿ ಬಳಿ ಕ್ಷಮೆ ಕೇಳಿಸಿ ವಿಡಿಯೋ ಮಾಡಿ, ಕ್ಷಮಾಪಣೆ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಲು ಪ್ಲಾನ್ ಮಾಡಿಕೊಂಡಿದ್ದರು. ಆದರೆ ಭೀಕರವಾಗಿ ಹಲ್ಲೆ ಮಾಡಿದ್ದರಿಂದ ರೇಣುಕಾಸ್ವಾಮಿಗೆ ಮಾತ್ನಾಡಲೂ ಆಗಿಲ್ಲ. ನಿತ್ರಾಣನಾಗಿ ಬಿದ್ದಿದ್ದ ರೇಣುಕಾಸ್ವಾಮಿಯನ್ನು ಇಬ್ಬರು ಹಿಡಿದು ಕೂರಿಸಿದ್ರು.
ಮತ್ತೊಬ್ಬ ಆರೋಪಿ ಎದುರುಗಡೆ ಮೊಬೈಲ್ ಫೋನ್ ಹಿಡಿದು ನಿಂತಿದ್ದ. ಮುಂದೆ ಈ ರೀತಿ ಮಾಡಲ್ಲ ಎಂದು ಕ್ಷಮೆ ಕೇಳುವಂತೆ ಬಲವಂತ ಮಾಡುತ್ತಿದ್ದ. ಅಶ್ಲೀಲ ಮೆಸೇಜ್, ಫೋಟೋ ಕಳಿಸಲ್ಲ ಎಂದು ಕ್ಷಮೆ ಕೇಳುವಂತೆ ಗ್ಯಾಂಗ್ ಒತ್ತಡ ಹಾಕಿದೆ. ನಿಲ್ಲಲೂ-ಕೂರಲೂ, ಮಾತ್ನಾಡಲೂ ಆಗದಂತೆ ರೇಣುಕಾ ನಿತ್ರಾಣಗೊಂಡಿದ್ದ. ಹಾಗಾಗಿ ನಾಳೆ ಹೇಳಿಸೋಣ ಬಿಡ್ರೋ ಅಂತೇಳಿ ಆರೋಪಿಗಳು ಸುಮ್ಮನಾಗಿದ್ದರು.
ತೀವ್ರ ಅಸ್ವಸ್ಥನಾಗಿದ್ದ ರೇಣುಕಾಸ್ವಾಮಿಯನ್ನ ಸೆಕ್ಯುರಿಟಿ ರೂಂಗೆ ಹಾಕಿದ್ರು. ಕೆಲಹೊತ್ತಲ್ಲೇ ರೇಣುಕಾಸ್ವಾಮಿ ಸಾವನ್ನಪ್ಪಿದ್ದ, ಕೂಡಲೇ ದರ್ಶನ್ಗೂ ತಿಳಿಸಿದ್ರು. ಪೊಲೀಸ್ ತನಿಖೆ ವೇಳೆ ಅಪಾಲಜಿ ಸರ್ಕಸ್ ಮಾಹಿತಿ ಬಹಿರಂಗವಾಗಿದೆ. ಆರೋಪಿಗಳ ಮೊಬೈಲ್ ಪರಿಶೀಲಿಸಿ ರಿಟ್ರೀವ್ ಮಾಡಲು ಪೊಲೀಸರು ಯತ್ನಿಸಿದ್ದಾರೆ.
ಇದನ್ನೂ ಓದಿ : ಬೆಂಗಳೂರಿನ ಜನರಿಗೆ ಗುಡ್ ನ್ಯೂಸ್ - ಶೀಘ್ರವೇ ಪೀಣ್ಯ ಫ್ಲೈ ಓವರ್ ಮೇಲೆ ಭಾರೀ ವಾಹನಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್..!