Download Our App

Follow us

Home » ರಾಜ್ಯ » ಭರ್ತಿಯಾಯ್ತು ಜೀವನಾಡಿ ಕನ್ನಂಬಾಡಿ – ರೈತರು ಫುಲ್​ ಖುಷ್​, ಇಂದು KRS ಡ್ಯಾಮ್​​​ ನೀರಿನ ಮಟ್ಟ ಎಷ್ಟಿದೆ ಗೊತ್ತಾ?

ಭರ್ತಿಯಾಯ್ತು ಜೀವನಾಡಿ ಕನ್ನಂಬಾಡಿ – ರೈತರು ಫುಲ್​ ಖುಷ್​, ಇಂದು KRS ಡ್ಯಾಮ್​​​ ನೀರಿನ ಮಟ್ಟ ಎಷ್ಟಿದೆ ಗೊತ್ತಾ?

ಮಂಡ್ಯ : ಕಾವೇರಿ ಜಲಾನಯನ ಪ್ರದೇಶದಲ್ಲಿ ಧಾರಕಾರವಾಗಿ ಮಳೆ ಸುರಿಯುತ್ತಿದ್ದು, ಕನ್ನಂಬಾಡಿ ಅಣೆಕಟ್ಟೆಗೆ ಬಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಹೀಗಾಗಿ ಹಳೆ ಮೈಸೂರು ಭಾಗದ ಜನರ ಜೀವನಾಡಿ, ಕೆಆರ್​ಎಸ್ ಜಲಾಶಯ ಬಹುತೇಕ ಭರ್ತಿಯಾಗಿದೆ. ಈ ಬಾರಿ ಮಳೆಯ ಆಶೀರ್ವಾದಿಂದ ಮುಂಗಾರು ಆರಂಭದಲ್ಲೇ ಕೆಆರ್​ಎಸ್ ತುಂಬಿದ್ದು, ಭಾರಿ ಪ್ರಮಾಣದಲ್ಲಿ ನೀರು ಹೊರಬಿಡಲಾಗುತ್ತಿದೆ.

ಕೆಆರ್‌ಎಸ್ ಜಲಾಶಯ ಭರ್ತಿಯ ಹಂತ ತಲುಪಿರುವುದರಿಂದ ಭಾನುವಾರ ಬೆಳಗ್ಗೆಯಿಂದಲೇ ಅಣೆಕಟ್ಟೆಯಿಂದ 52,162 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಜಲಾಶಯದ ಒಳಹರಿವಿನ ಪ್ರಮಾಣ ಹೆಚ್ಚಾದಂತೆ ಹೊರಹರಿವಿನ ಪ್ರಮಾಣವನ್ನು ಹೆಚ್ಚಿಸಲಾಗಿದೆ.  ಜಲಾಶಯದ ಗರಿಷ್ಠ ಮಟ್ಟ 124.80 ಅಡಿಗಳಾಗಿದ್ದು, ಈಗಾಗಲೇ ಜಲಾಶಯದ ನೀರಿನ ಮಟ್ಟ 123.10 ಅಡಿಗೆ ತಲುಪಿದೆ. ಕೆಆರ್​ಎಸ್​ ಡ್ಯಾಂಗೆ 70,850 ಕ್ಯುಸೆಕ್ ನೀರು ಹರಿದುಬರುತ್ತಿದೆ. ಅಣೆಕಟ್ಟೆಯಲ್ಲಿ ನೀರಿನ ಒತ್ತಡವನ್ನು ಕಡಿಮೆ ಮಾಡಲು ಜಲಾಶಯದಿಂದ 52,162 ಕ್ಯೂಸೆಕ್ ನೀರು ನದಿಗೆ ಹರಿಬಿಡಲಾಗಿದೆ.

ನದಿಗೆ ಹೆಚ್ಚಿನ ಪ್ರಮಾಣದ ನೀರನ್ನು ಹರಿಯಬಿಟ್ಟಿರುವುದರಿಂದ ಕಾವೇರಿ ನದಿ ಪಾತ್ರದಲ್ಲಿ ಪ್ರವಾಹದ ಭೀತಿ ಸೃಷ್ಟಿಯಾಗಿದ್ದು, ಜನರು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಮುನ್ಸೂಚನೆ ನೀಡಿದೆ. ಶ್ರೀರಂಗಪಟ್ಟಣ ಸೇರಿದಂತೆ ಚಾಮರಾಜನಗರದ ಹಲವು ಭಾಗಗಳಲ್ಲೂ ಪ್ರವಾಹ ಭೀತಿ ಸೃಷ್ಟಿಯಾಗಿದೆ.

ಇಂದಿನ ಕೆಆರ್‌ಎಸ್ ನೀರಿನ ಮಟ್ಟ

ಗರಿಷ್ಠ ಮಟ್ಟ – 124.80 ಅಡಿ.
ಇಂದಿನ ಮಟ್ಟ – 123.10 ಅಡಿ.
ಗರಿಷ್ಠ ಸಾಮರ್ಥ್ಯ – 49.452 ಟಿಎಂಸಿ.
ಇಂದಿನ ಸಾಮರ್ಥ್ಯ – 46.567 ಟಿಎಂಸಿ
ಒಳ ಹರಿವು – 70,850 ಕ್ಯೂಸೆಕ್
ಹೊರ ಹರಿವು – 52,162 ಕ್ಯೂಸೆಕ್ (ನದಿ, ನಾಲೆ, ಕುಡಿಯುವ ನೀರು ಸೇರಿ)

ಇದನ್ನೂ ಓದಿ : ಕನ್ನಡಿಗರ ಆಕ್ರೋಶಕ್ಕೆ ಮಣಿದು ಕ್ಷಮೆ ಕೇಳಿದ ಫೋನ್​ ಪೇ CEO ಸಮೀರ್​​ ನಿಗಮ್..​​!

 

 

 

Leave a Comment

DG Ad

RELATED LATEST NEWS

Top Headlines

ಸರ್ಜರಿ ಬಳಿಕ ನಟ ಶಿವಣ್ಣ ರಿಲ್ಯಾಕ್ಸ್ – ಸಮುದ್ರ ತಟದಲ್ಲಿ ಪತ್ನಿ ಜೊತೆ ಜಾಲಿ ರೌಂಡ್ಸ್​​!

ಕರುನಾಡ ಚಕ್ರವರ್ತಿ ಡಾ. ಶಿವರಾಜ್‌ಕುಮಾರ್ ಅವರು ಸರ್ಜರಿ ಬಳಿಕ ಅಮೆರಿಕಾದಲ್ಲಿ ರಿಲ್ಯಾಕ್ಸ್ ಮೂಡ್​ನಲ್ಲಿದ್ದಾರೆ. ಶಸ್ತ್ರಚಿಕಿತ್ಸೆ ನಂತ್ರ ಚೇತರಿಕೆ ಕಂಡಿರುವ ಹ್ಯಾಟ್ರಿಕ್ ಹೀರೋ ಪತ್ನಿ ಜೊತೆ ಅಮೆರಿಕದ ಕಡಲ

Live Cricket

Add Your Heading Text Here