ಜಾಲಿವುಡ್ ಸ್ಟುಡಿಯೋಸ್​ನಿಂದ ಪರಿಸರ ನಿಯಮ ಉಲ್ಲಂಘನೆ – ಪಿ.ಎಂ ನರೇಂದ್ರಸ್ವಾಮಿಗೆ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ದೂರು!

ಬೆಂಗಳೂರು : ಇತ್ತೀಚಿಗೆ ಪರಿಸರ ನಿಯಮ ಉಲ್ಲಂಘನೆ ಆರೋಪದಡಿ ಬಿಡದಿಯಲ್ಲಿರುವ ಜಾಲಿವುಡ್​ ಸ್ಟುಡಿಯೋಸ್​ಗೆ ಅಧಿಕಾರಿಗಳು ಬೀಗ ಜಡಿದಿದ್ದರು. ನಂತರ ಒಂದೇ ದಿನದಲ್ಲಿ ಜಾಲಿವುಡ್​ ಸ್ಟುಡಿಯೋವನ್ನು ಮರುಪ್ರಾರಂಭ ಮಾಡಿದ್ದರು. ಇದೀಗ ಜಾಲಿವುಡ್ ಸ್ಟುಡಿಯೋಸ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾಮೂಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ ನರೇಂದ್ರಸ್ವಾಮಿಗೆ ದೂರು ನೀಡಿದ್ದಾರೆ.

ಜಾಲಿವುಡ್​ ಸ್ಟುಡಿಯೋ ಮರುಪ್ರಾರಂಭ ಮಾಡಿಸಿರೋದು ಸುಪ್ರೀಂ ಕೋರ್ಟ್ ಮತ್ತು NGT ಆದೇಶಗಳಿಗೆ, ಪರಿಸರ ನ್ಯಾಯ ತತ್ವಗಳಿಗೆ ಧಕ್ಕೆ. ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದೆ, ಅಧಿಕಾರ ದುರುಪಯೋಗ ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸಿರುವ ಕುರಿತು ತುರ್ತು ಕಾನೂನು ಕ್ರಮ ಕೈಗೊಳ್ಳುವಂತೆ ಸಾಮೂಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಮನವಿ ಮಾಡಿದ್ದಾರೆ.

ದೂರಿನಲ್ಲಿ ಏನಿದೆ ?

ಮೆಸ್ಟರ್ನ್ ವೆಲ್ಸ್ ಸ್ಟುಡಿಯೋಸ್ ಅಂಡ್ ಎಂಟರ್‌ಟೈನ್ಮೆಂಟ್ ಪ್ರೈವೇಟ್ ಲಿಮಿಟೆಡ್ (ಮೆಸ್ಸರ್ಸ್ ಜಾಲಿವುಡ್ ಸ್ಟುಡಿಯೋಸ್ & ಅನ್ವೆಂಚರ್ಸ್) ಎಂಬ ಘಟಕವು ಪ್ಲಾಟ್ ನಂ. 24 ಮತ್ತು 26, ಬಿಡದಿ ಕೈಗಾರಿಕಾ ಪ್ರದೇಶದಲ್ಲಿ ಸ್ಥಾಪನೆಯಾಗಿದ್ದು, 1974ರ ನೀರು (ಮಾಲಿನ್ಯ ತಡೆ ಮತ್ತು ನಿಯಂತ್ರಣ) ಕಾಯ್ದೆಯ ಸೆಕ್ಷನ್ 25 ಹಾಗೂ 1981ರ ವಾಯು (ಮಾಲಿನ್ಯ ತಡೆ ಮತ್ತು ನಿಯಂತ್ರಣ) ಕಾಯ್ದೆಯ ಸೆಕ್ಷನ್ 21 ಅಡಿಯಲ್ಲಿ ಅನಿವಾರ್ಯವಾಗಿ ಪಡೆಯಬೇಕಿರುವ ಸಂಸ್ಥಾಪನೆಯ ಅನುಮತಿ ಹಾಗೂ ಕಾರ್ಯಾಚರಣಾ ಅನುಮತಿಯಿಲ್ಲದೆ ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿರುವುದು ಸ್ಪಷ್ಟವಾಗಿದೆ.

ಈ ಘಟಕವು ಶುದ್ದೀಕರಣ ವ್ಯವಸ್ಥೆಗಳನ್ನು ನಿಷ್ಕ್ರಿಯಗೊಳಿಸಿ. ಯಾವುದೇ ಸಂಸ್ಕರಣೆಯಿಲ್ಲದೆ ತ್ಯಾಜ್ಯ ನೀರನ್ನು ಭೂಗತ ಜಲಮಾರ್ಗಗಳಿಗೆ ಹೊರಹಾಕುವ ಮೂಲಕ ಪರಿಸರ, ಮಣ್ಣು, ನೀರು ಹಾಗೂ ಸಾರ್ವಜನಿಕ ಆರೋಗ್ಯಕ್ಕೆ ಅಪಾರ ಹಾನಿ ಉಂಟುಮಾಡುತ್ತಿದೆ. ಇದು ನೇರವಾಗಿ Article 21 of Constitution (Right to Life and Clean Environment) ಉಲ್ಲಂಘನೆಗೆ ಕಾರಣವಾಗಿದೆ. ಘಟಕದ ವಿರುದ್ಧ RO-ರಾಮನಗರದಿಂದ ಹಲವು ಬಾರಿ ಶೋಕಾಸ್ ನೋಟಿಸ್. NPD, ಮತ್ತು ನಂತರ ಮಂಡಳಿಯಿಂದ Closure Directions ಹೊರಡಿಸಲ್ಪಟ್ಟಿದ್ದರೂ, ಘಟಕವು ಇಂದಿಗೂ ಅಕ್ರಮ ಕಾರ್ಯಾಚರಣೆಯನ್ನು ಮುಂದುವರಿಸಿದೆ.

ಯಾವುದೇ ಲಿಖಿತ ಆದೇಶವಿಲ್ಲದೆ, ಕೇವಲ ಮೌಖಿಕ ನಿರ್ದೇಶನದ ಆಧಾರದ ಮೇಲೆ ಘಟಕವನ್ನು ಮರುಪ್ರಾರಂಭ ಮಾಡಿರುವುದು ಕಾನೂನು ಬಾಹಿರ ಮಾತ್ರವಲ್ಲದೆ, ಸರ್ವೋಚ್ಚ ನ್ಯಾಯಾಲಯದ ಆದೇಶಗಳಿಗೆ ವಿರುದ್ಧವಾಗಿದೆ. ಸುಪ್ರೀಂಕೋರ್ಟ್ ಮತ್ತು NGT ತೀರ್ಪುಗಳನ್ನು ಉಲ್ಲಂಘಿಸುವುದು, ಕಾನೂನು ಮತ್ತು ಪರಿಸರ ಹಿತಾಸಕ್ತಿ ವಿರುದ್ಧದ ಗಂಭೀರ ಉಲ್ಲಂಘನೆಯಾಗಿದೆ.

ಮಾನ್ಯ ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ಜಾರಿಮಾಡಿದ Closure Direction ಅನ್ನು ತಕ್ಷಣ ಮರುಸ್ಥಾಪನೆ ಮಾಡಬೇಕು ಮತ್ತು ಘಟಕವನ್ನು sealed ಮಾಡಿ. ಯಾವುದೇ ಕಾರ್ಯನಿರ್ವಹಣೆಯನ್ನು ಸಂಪೂರ್ಣ ನಿಷೇಧ ಮಾಡುವಂತೆ ಕಠಿಣ ಆದೇಶ ಹೊರಡಿಸಬೇಕು. BESCOM ಅಧಿಕಾರಿಗಳು ಕಾನೂನುಬಾಹಿರವಾಗಿ ವಿದ್ಯುತ್ ಸಂಪರ್ಕ ಒದಗಿಸಿರುವುದು ದೃಢಪಟ್ಟಲ್ಲಿ ಅವರ ವಿರುದ್ಧ ಆಕ್ಷನ್ ಕೈಗೊಳ್ಳಬೇಕು. ಘಟಕದಿಂದ ಉಂಟಾದ ಪರಿಸರ ಮಾಲಿನ್ಯಕ್ಕಾಗಿ “Environmental Compensation” ವಸೂಲು ಮಾಡಬೇಕು, ಸಂಬಂಧಿತ ವೆಚ್ಚವನ್ನು ಲೆಕ್ಕ ಹಾಕುವಂತೆ ಕ್ರಮ ಜರುಗಿಸಬೇಕು. closure direction ಅನ್ನು ಉಲ್ಲಂಘಿಸುವ ಯಾವುದೇ ಕ್ರಮವು ಕಾನೂನಿನ ದೃಷ್ಟಿಯಲ್ಲಿ ಅಮಾನ್ಯ ಎಂದು ಘೋಷಿಸಲ್ಪಡಬೇಕು. ಸಾರ್ವಜನಿಕ ಹಿತಾಸಕ್ತಿಯನ್ನು ಕಾಪಾಡಲು ಮತ್ತು ಪರಿಸರ ಹಾನಿಯನ್ನು ತಡೆಯಲು ತುರ್ತು ಆದೇಶ ಹೊರಡಿಸಿ ಸೂಕ್ತವಾದ ಕಾನೂನು ಕ್ರಮ ಕೈಗೊಳ್ಳುವಂತೆ ದಿನೇಶ್ ಕಲ್ಲಹಳ್ಳಿ ಅವರು++ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ ನರೇಂದ್ರಸ್ವಾಮಿಗೆ ದೂರು ನೀಡಿದ್ದಾರೆ.

ಇದನ್ನೂ ಓದಿ : ಜೊತೆಯಲ್ಲಿದ್ದ ಆಪ್ತ ಸ್ನೇಹಿನಿಂದಲೇ ರಾಬರಿ – ದೂರು ಸತ್ಯವೋ-ಸುಳ್ಳೋ? ತಲೆಕೆರೆದುಕೊಂಡು ಕೇಸಿನ ಮೂಲ ಹುಡುಕ್ತಿರೊ ಪೊಲೀಸರು!

Btv Kannada
Author: Btv Kannada

Read More