ಬೆಂಗಳೂರು : ಲೋಕಾ ರೇಡ್ ವೇಳೆ ಅಧಿಕಾರಿಯೊಬ್ಬರು ನೌಟಂಕಿ ಆಟ ಆಡಿದ್ದಾರೆ. ಲೋಕಾ ಅಧಿಕಾರಿಗಳನ್ನು ಕಂಡು ಭ್ರಷ್ಟ ಅಧಿಕಾರಿ ಅತ್ಹರ್ ಅಲಿ ಚಿನ್ನದ ಬ್ಯಾಗ್ನ್ನು ಕಿಟಕಿಯಿಂದ ಹೊರಗೆ ಎಸೆದಿದ್ದಾರೆ. ಅತ್ಹರ್ ಅಲಿ ಕಾನೂನು ಮಾಪನ ಇಲಾಖೆ ಡೆಪ್ಯೂಟಿ ಕಂಟ್ರೋಲರ್ ಆಗಿದ್ದು, ಇವರ ಬೆಂಗಳೂರಿನ ಕಲ್ಯಾಣನಗರದ ಮನೆ ಮೇಲೆ ರೇಡ್ ನಡೆದಿದೆ.
ಲೋಕಾಯುಕ್ತ ಪರಿಶೀಲನೆ ವೇಳೆ ಅಧಿಕಾರಿ ಚಿನ್ನದ ಬ್ಯಾಗ್ನ್ನು ಪಕ್ಕದ ಮನೆಗೆ ಎಸೆದಿದ್ದಾರೆ. ಪಕ್ಕದ ಮನೆಗೆ ಎಸೆದಾಗ ಸೌಂಡ್ ಬಂದಿತ್ತು. ಪಕ್ಕದ ಮನೆಯವರು ಲೋಕಾಯುಕ್ತ ಅಧಿಕಾರಿಗಳಿಗೆ ಮಾಹಿತಿ ನೀಡಿದ್ರು, ಕೂಡಲೇ ಲೋಕಾ ಟೀಂ ಪಕ್ಕದ ಮನೆಗೆ ತೆರಳಿ ಚಿನ್ನ ವಶಕ್ಕೆ ಪಡೆದಿದ್ದಾರೆ. ಲೋಕಾಯುಕ್ತ ಅಧಿಕಾರಿ SP ವಂಶಿಕೃಷ್ಣ ಅವರು ಚಿನ್ನ ತುಂಬಿದ್ದ ಬ್ಯಾಗ್ ಎಸೆದಿರೋದನ್ನು ಖಚಿತ ಪಡಿಸಿದ್ದಾರೆ.
ಕಲ್ಯಾಣ ನಗರದ HRBR ಲೇಔಟ್ನಲ್ಲಿರುವ ಅತ್ಹರ್ ಅಲಿ ಮನೆ ಮೇಲೆ ಇಂದು ಮುಂಜಾನೆಯಿಂದ ಲೋಕಾ ಟೀಂ ರೇಡ್ ಮಾಡ್ತಿದೆ. 12 ಅಧಿಕಾರಿಗಳ ಮನೆ ಮೇಲೆ ಬೆಳಗ್ಗೆಯಿಂದಲೂ ಲೋಕಾ ದಾಳಿ ನಡೆಸುತ್ತಿದ್ದಾರೆ.
ಇದನ್ನೂ ಓದಿ : ನಟ ದರ್ಶನ್ಗೆ ಕಂಟಕದ ಮೇಲೆ ಕಂಟಕ – ಶವ ಸಾಗಿಸಿದ ವಾಹನ ತೊಳೆದವರೂ ಈಗ ಸಾಕ್ಷ್ಯ..!