Download Our App

Follow us

Home » ಅಪರಾಧ » ನಟ ದರ್ಶನ್​​​ಗೆ ಕಂಟಕದ ಮೇಲೆ ಕಂಟಕ – ಶವ ಸಾಗಿಸಿದ ವಾಹನ ತೊಳೆದವರೂ ಈಗ ಸಾಕ್ಷ್ಯ..!

ನಟ ದರ್ಶನ್​​​ಗೆ ಕಂಟಕದ ಮೇಲೆ ಕಂಟಕ – ಶವ ಸಾಗಿಸಿದ ವಾಹನ ತೊಳೆದವರೂ ಈಗ ಸಾಕ್ಷ್ಯ..!

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರೋ ನಟ ದರ್ಶನ್​​​ಗೆ ಕಂಟಕದ ಮೇಲೆ ಕಂಟಕ ಎದುರಾಗುತ್ತಿದೆ. ಈ ಕೊಲೆ ಕೇಸ್​ನಲ್ಲಿ ಸಾಕ್ಷ್ಯದ ಮೇಲೆ ಸಾಕ್ಷ್ಯ ಸಿಗುತ್ತಿದೆ. ಶವ ಸಾಗಿಸಿದ ವಾಹನ ತೊಳೆದವರು ಕೂಡ ಈಗ ಸಾಕ್ಷ್ಯವಾಗಿದ್ದಾರೆ.

ಹೌದು, ಸ್ಕಾರ್ಪಿಯೋ ಕಾರ್​​ ತೊಳೆದವರನ್ನೂ ಪೊಲೀಸರು ಸಾಕ್ಷಿ ಮಾಡಿದ್ದಾರೆ. ಪಟ್ಟಣಗೆರೆ ಶೆಡ್​ನಿಂದ ಸ್ಕಾರ್ಪಿಯೋದಲ್ಲಿ ರೇಣುಕಾ ಶವ ಸಾಗಿಸಲಾಗಿತ್ತು, ನಂತರ ಆರೋಪಿಗಳು ಸ್ಕಾರ್ಪಿಯೋ ಕಾರ್​​ ವಾಟರ್ ಸರ್ವೀಸ್ ಮಾಡಿಸಿದ್ದರು. ಇಬ್ಬರು ಹುಡುಗರು ಈ ವಾಹನವನ್ನ ವಾಟರ್ ಸರ್ವೀಸ್ ಮಾಡಿದ್ರು.

ಇಬ್ಬರು ಹುಡುಗರು ವಾಟರ್ ಸರ್ವೀಸ್​ನಲ್ಲಿ ಕೆಲಸ ಮಾಡುತ್ತಿದ್ದರು. ಇದೀಗ ಕಾರಿನಲ್ಲಿ ರಕ್ತದ ಕಲೆಗಳು ಇದ್ದ ಬಗ್ಗೆ ಹುಡುಗರು ಸಾಕ್ಷಿ ನುಡಿದಿದ್ದಾರೆ. ಸಾಕ್ಷ್ಯ ನಾಶಕ್ಕೆ ಸಂಬಂಧಿಸಿದಂತೆ ಇಬ್ಬರನ್ನೂ ಪೊಲೀಸರು ಸಾಕ್ಷಿ ಮಾಡಿದ್ದಾರೆ.

ಇದನ್ನೂ ಓದಿ : ಅಧಿವೇಶನಕ್ಕೆ ಆಗಮಿಸೋ ಶಾಸಕರಿಗೆ ಭಾಗ್ಯದ ಮೇಲೆ ಭಾಗ್ಯ – ಊಟ, ತಿಂಡಿ ಜೊತೆಗೆ ನಿದ್ದೆಗೂ ವಿಶೇಷ ಕುರ್ಚಿ ವ್ಯವಸ್ಥೆ ಮಾಡಿದ ಸ್ಪೀಕರ್..!

Leave a Comment

DG Ad

RELATED LATEST NEWS

Top Headlines

ಶಾಲಾ ಮಕ್ಕಳ ಕ್ಷೀರ ಭಾಗ್ಯಕ್ಕೆ ಕನ್ನ ಹಾಕಿದ ಹೆಡ್​​ ಮಾಸ್ಟರ್ – ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು..!

ಗುಲ್ಬರ್ಗ : ಅಕ್ಷರ ದಾಸೋಹ ಯೋಜನೆಯ ಕ್ಷೀರ ಭಾಗ್ಯಕ್ಕೆ ಹೆಡ್​​ ಮಾಸ್ಟರರೇ ಕನ್ನ ಹಾಕಿರುವ ಘಟನೆಯೊಂದು ನಡೆದಿದೆ. ಗುಲ್ಬರ್ಗದ ಅಫಜಲಪುರ ತಾಲ್ಲೂಕಿನ ಸ್ಟೇಷನ್ ಗಾಣಗಾಪುರ ಗ್ರಾಮದ ಸರ್ಕಾರಿ

Live Cricket

Add Your Heading Text Here