ಶ್ರೀಲಂಕಾ : 2024ರ ಮಹಿಳಾ ಏಷ್ಯಾಕಪ್ ಟಿ20 ಟೂರ್ನಿಗೆ ಇಂದು ಅದ್ದೂರಿ ಚಾಲನೆ ಸಿಗಲಿದೆ. ಶ್ರೀಲಂಕಾದಲ್ಲಿ ನಡೆಯಲಿರುವ ಈ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಯುಎಇ ಮತ್ತು ನೇಪಾಳ ತಂಡಗಳು ಮುಖಾಮುಖಿಯಾಗಲಿದೆ. ಮಧ್ಯಾಹ್ನ 2 ಗಂಟೆಗೆ ಮೊದಲ ಪಂದ್ಯ ನಡೆಯಲಿದ್ದು, ರಾತ್ರಿ 7 ಗಂಟೆಗೆ ಆರಂಭವಾಗುವ ಎರಡನೇ ಪಂದ್ಯದಲ್ಲಿ ಬದ್ಧ ವೈರಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಹೈವೋಲ್ಟೇಜ್ ಕದನ ನಡೆಯಲಿದೆ.
ದಂಬುಲ್ಲಾದ ರಂಗಿರಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿದ್ದು, ಹರ್ಮನ್ಪ್ರೀತ್ ಕೌರ್ ನಾಯಕತ್ವದಲ್ಲಿ ಭಾರತ ತಂಡ ಸೆಣೆಸಲು ಸಜ್ಜಾಗಿದೆ. ಹಾಲಿ ಚಾಂಪಿಯನ್ ಆಗಿರುವ ಭಾರತ, ಈ ಬಾರಿ ಕೂಡ ಕಪ್ ಗೆಲ್ಲುವ ಫೇವರಿಟ್ ತಂಡವಾಗಿದೆ. ಮತ್ತೊಂದೆಡೆ ಹಾಲಿ ಚಾಂಪಿಯನ್ನರಿಗೆ ಸವಾಲು ಹಾಕಲು ಪಾಕಿಸ್ತಾನ ಕೂಡ ಸಜ್ಜಾಗಿದೆ. ಇನ್ನು ಈವರೆಗೆ ಟಿ20 ಕ್ರಿಕೆಟ್ನಲ್ಲಿ ಭಾರತ-ಪಾಕಿಸ್ತಾನ ಮಹಿಳಾ ತಂಡಗಳು 13 ಬಾರಿ ಮುಖಾಮುಖಿಯಾಗಿವೆ. ಇದ್ರಲ್ಲಿ ಭಾರತ 10 ಪಂದ್ಯ ಗೆದ್ದು ಪ್ರಾಬಲ್ಯ ಸಾಧಿಸಿದೆ. ಪಾಕಿಸ್ತಾನ ಕೇಲವ 3 ಪಂದ್ಯವಷ್ಟೇ ಗೆದ್ದಿದೆ.
ಮೊಬೈಲ್ನಲ್ಲಿ ಉಚಿತವಾಗಿ ಪಂದ್ಯ ನೋಡುವುದೇಗೆ?
ಭಾರತ ಮತ್ತು ಪಾಕಿಸ್ತಾನ ನಡುವಿನ ಮಹಿಳಾ ಏಷ್ಯಾ ಕಪ್ ಟಿ20 ಪಂದ್ಯದ ನೇರಪ್ರಸಾರವನ್ನು ಭಾರತದಲ್ಲಿ ಡಿಸ್ನಿ+ಹಾಟ್ಸ್ಟಾರ್ ಅಪ್ಲಿಕೇಶನ್ ಉಚಿತವಾಗಿ ವೀಕ್ಷಿಸಬಹುದು. ಜೊತೆಗೆ ನೇರ ಪ್ರಸಾರವನ್ನು ಟಿವಿಯಲ್ಲಿ ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್ನಲ್ಲಿ ಸಂಜೆ 7 ಗಂಟೆಯಿಂದ ವೀಕ್ಷಿಸಬಹುದು.
ಇದನ್ನೂ ಓದಿ : ಕೊನೆಗೂ ನತಾಶಾ ಜೊತೆಗಿನ 4 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ ಹಾರ್ದಿಕ್ – ಫ್ಯಾನ್ಸ್ಗೆ ವಿಶೇಷ ಮನವಿ..!