ಕುಡಿದ ಮತ್ತಲ್ಲಿ ಹೆತ್ತ ತಾಯಿಯನ್ನೇ ಕತ್ತು ಸೀಳಿ ಹತ್ಯೆಗೈದ ಪಾಪಿ ಮಗ!

ಬಾಗಲಕೋಟೆ : ಕ್ಷುಲ್ಲಕ ಕಾರಣಕ್ಕೆ ಕುಡಿದ ಮತ್ತಿನಲ್ಲಿ ಪಾಪಿ ಮಗನೊಬ್ಬ ಹೆತ್ತ ತಾಯಿಯನ್ನೇ ಬರ್ಬರವಾಗಿ ಹತ್ಯೆ ಮಾಡಿರುವ ಅಮಾನವೀಯ ಘಟನೆ ಬಾಗಲಕೋಟೆ ತಾಲೂಕಿನ ತುಳಸಿಗೇರಿ ಗ್ರಾಮದಲ್ಲಿ ನಡೆದಿದೆ. ವೆಂಕಟೇಶ್ ತಾಯಿಯನ್ನೇ ಕೊಲೆಗೈದ ಮಗ.

ಕುಡಿತದ ವಿಚಾರಕ್ಕೆ ತಾಯಿ-ಮಗನ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಹಣ ಕೊಡದ ಕಾರಣಕ್ಕೆ ತಾಯಿ (ಶ್ಯಾವಕ್ಕ) ಬಾಯಿಗೆ ಬಟ್ಟೆ ತುರುಕಿ, ಕೈ ಕಾಲು ಕಟ್ಟಿ ಕತ್ತು ಸೀಳಿ ಕೊಲೆಗಡುಕ ಮಗ ಪರಾರಿಯಾಗಿದ್ದಾನೆ. ರಕ್ತದ ಮಡುವಿನಲ್ಲಿ ಒದ್ದಾಡಿ ತಾಯಿ ಶ್ಯಾವಕ್ಕ ಕೊನೆಯುಸಿರೆಳೆದಿದ್ದಾರೆ.

ಘಟನಾ ಸ್ಥಳಕ್ಕೆ ಕಲಾದಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಇದನ್ನು ಓದಿ : ಬೆಂಗಳೂರಿನಲ್ಲಿ ಯುವತಿಯ ಬರ್ಬರ ಕೊಲೆ – ಯಾಮಿನಿ ಹತ್ಯೆಗೆ 6 ತಿಂಗಳ ಹಿಂದೆಯೇ ಪ್ಲ್ಯಾನ್ ಮಾಡಿದ್ದ ಕೀಚಕ.. ತನಿಖೆಯಲ್ಲಿ ಬಯಲು!

Btv Kannada
Author: Btv Kannada

Read More