ಬೆಂಗಳೂರು : ಕರ್ನಾಟಕ ವಿಧಾನ ಮಂಡಲ ಮುಂಗಾರು ಅಧಿವೇಶನ ಆರಂಭವಾಗಿದ್ದು, ಎರಡನೇ ದಿನಕ್ಕೆ ಕಾಲಿಟ್ಟಿದೆ. ಮೊದಲ ದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗಣ್ಯರಿಗೆ ಸಂತಾಪ ಸೂಸಚಿಸಿದರು. ಅಧಿವೇಶನ ಮೊದಲ ದಿನದಂದಲೇ ಎರಡೂ ಮನೆಗಳಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ ಸದ್ದು ಮಾಡಿತು.
ಈ ಮಧ್ಯೆ ವಿಧಾನಸೌಧ ಬಳಿ ಹೆಚ್ಡಿಕೆಗೆ ಡಿಸಿಎಂ ಡಿಕೆಶಿ ಪಂಥಾಹ್ವಾನ ನೀಡಿದ್ದಾರೆ. ನನ್ನ ಕಂಡರೆ ಹೆಚ್ಡಿಕೆಗೆ ಅಸೂಯೆ, ಮೊದಲಿನಿಂದಲೂ ನನ್ನ ಕಂಡ್ರೆ ಅವರಿಗೆ ಆಗಲ್ಲ. ಪಬ್ಲಿಕ್ ಡಿಬೇಟ್ಗೆ ಬಾರಪ್ಪ ಅಂದಿದ್ದೆ ಅದಕ್ಕೂ ಬರ್ಲಿಲ್ಲ, ಸೆಷನ್ಗೆ ಬರ್ತಾರೆ ಅಂದುಕೊಂಡಿದ್ದೆ ಈಗ ಅದೂ ಆಗಲ್ಲ, ಹೋಗ್ಲಿ ಪಬ್ಲಿಕ್ ಪ್ಲೇಸ್ನಲ್ಲಾದ್ರೂ ಡಿಬೇಟ್ಗೆ ಬರಲಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಡಿಸಿಎಂ ಡಿಕೆಶಿ ಮಾತನಾಡಿ, ಗೋಡಂಬಿ ತಿನ್ನೋಕೆ ಸಭೆಗೆ ಹೋಗಬೇಕಿತ್ತಾ ಅಂತಾ ಹೆಚ್ಡಿಕೆ ಹೇಳಿದ್ದಾರೆ. ಕಾವೇರಿ ಸರ್ವ ಪಕ್ಷ ಸಭೆ ಮಾಡಿದ್ದು ನಾಡಿನ ಹಿತಕ್ಕಾಗಿ, ಕುಮಾರಸ್ವಾಮಿ ಫಿಲ್ಮಿ ಸ್ಟೈಲ್ನಲ್ಲಿ ಮಾತ್ನಾಡೋಕೆ ಫೇಮಸ್. ನಾವು ಗೋಡಂಬಿ, ದ್ರಾಕ್ಷಿ ತಿನ್ನೋಕೆ ಕರೀತಾ ಇದ್ವಾ ..? ಹಾಗಿದ್ರೆ ಅವರ ಪಾರ್ಟಿಯವರನ್ನು ಯಾಕೆ ಸಭೆ ಕಳಿಸಿದ್ರು ಎಂದು ಪ್ರಶ್ನಿಸಿದ್ದಾರೆ.
ರಾಜಕಾರಣ ಬಿಟ್ಟರೇ ಕುಮಾರಸ್ವಾಮಿಗೆ ಇನ್ನೇನೂ ಗೊತ್ತಿಲ್ಲ, ರಾಜ್ಯದ ಹಿತ ಹಾಗೂ ಕಾವೇರಿ ಬಗ್ಗೆ ಅವರು ತಲೆ ಕೆಡಿಸಿಕೊಂಡಿಲ್ಲ. ಹಿಟ್ ಅಂಡ್ ರನ್ ಮಾಡೋದಷ್ಟೇ ಹೆಚ್ಡಿಕೆ ಚಾಳಿ, ಹೆಚ್ಡಿಕೆ ಬಹಿರಂಗ ಚರ್ಚೆಗೆ ಬರಲಿ ಎಂದು ಡಿಕೆಶಿ ಹೇಳಿದ್ದಾರೆ.
ಇದನ್ನೂ ಓದಿ : ಕಾಮಿಡಿಗೆ ಫುಲ್ ಸ್ಟಾಪ್ ಹಾಕಿ ಖಳನಾಯಕನಾದ ಮಿತ್ರ – ‘ಕರಾವಳಿ’ಯಲ್ಲಿ ಹೊಸ ಲುಕ್..!