ಮಂಡ್ಯ : MUDA ಅಕ್ರಮದ ಬಗ್ಗೆ ತನಿಖೆ ಆಗ್ಲೇ ಬೇಕು. MUDAದಲ್ಲಿ ಅಕ್ರಮ ನಡೆದಿರೋದು ರಾಜೀವ್ ಅವಧಿಯಲ್ಲೇ. ರಾಜೀವ್ MUDA ಅಧ್ಯಕ್ಷರಾಗಿದ್ದಾಗ ಅಕ್ರಮ ನಡೆದಿದೆ ಎಂದು ಸಚಿವ ಚಲುವರಾಯಸ್ವಾಮಿ ಸ್ಫೋಟಕೆ ಹೇಳಿಕೆ ನೀಡಿದ್ದಾರೆ.
ಮಂಡ್ಯದಲ್ಲಿ ಮೂಡ ಅಕ್ರಮದ ಬಗ್ಗೆ ಮಾತನಾಡಿದ ಸಚಿವ ಚಲುವರಾಯಸ್ವಾಮಿ ಅವರು, ಆಗ ರಾಜೀವ್ ಬಿಜೆಪಿಯಲ್ಲಿದ್ರು, ಸರ್ಕಾರ ಬಿಜೆಪಿಯದ್ದಿತ್ತು. ಈಗ ತಪ್ಪು ಮುಚ್ಚಿ ಹಾಕಲು ಸಿದ್ದರಾಮಯ್ಯ ಹೆಸರು ತರುತ್ತಿದ್ದಾರೆ ಎಂದು ಗುಡುಗಿದ್ದಾರೆ.
ಇನ್ನು ತಪ್ಪು ಮಾಡಿದರೆ ಕಾನೂನಿನ ಮುಂದೆ ಎಲ್ಲರೂ ಒಂದೇ. ತಪ್ಪು ಯಾರೇ ಮಾಡಿರಲಿ, ಶಿಕ್ಷೆ ಆಗಬೇಕು. ಬಿಜೆಪಿಯವರು ರಾಜೀವ್ ವಿರುದ್ಧ ಹೋರಾಡಲಿ ಎಂದು ಮಂಡ್ಯದಲ್ಲಿ ಸಚಿವ ಚಲುವರಾಯಸ್ವಾಮಿ ತಿಳಿಸಿದ್ದಾರೆ.
ಇದನ್ನೂ ಓದಿ : ಕರ್ನಾಟಕ ವಕ್ಫ್ ಮಂಡಳಿಯಲ್ಲಿ ಕೋಟಿಕೋಟಿ ಗೋಲ್ಮಾಲ್ – FIR ದಾಖಲು..!
Post Views: 117