ಬೆಂಗಳೂರು : ಡಿ.ದೇವರಾಜ ಅರಸು ಟ್ರಕ್ ಟರ್ಮಿನಲ್ ನಿಯಮಿತದಲ್ಲಿ (ಡಿಡಿಯುಟಿಟಿಎಲ್) ನಡೆದಿರುವ ಅಕ್ರಮ ಪ್ರಕರಣದ ತನಿಖೆಯನ್ನು ಸಿಐಡಿ ನಡೆಸುತ್ತಿದೆ. ಮಾಜಿ MLC ಡಿ.ಎಸ್.ವೀರಯ್ಯ ಅವರ ಬ್ಯಾಂಕ್ ಖಾತೆಗೆ ಗುತ್ತಿಗೆದಾರರಿಂದ 3 ಕೋಟಿ ವರ್ಗಾವಣೆ ಆಗಿರೋದು ಪತ್ತೆಯಾಗಿದೆ.
ವೀರಯ್ಯನನ್ನು CID ಅರೆಸ್ಟ್ ಮಾಡಿ ವಿಚಾರಣೆ ನಡೆಸುತ್ತಿದ್ದು, ಸಿಐಡಿ ತನಿಖೆಯಲ್ಲಿ 3 ಕೋಟಿ ರಹಸ್ಯ ಪತ್ತೆಯಾಗಿದೆ. 2023ರ ಸೆಪ್ಟೆಂಬರ್ 23ರಂದು ದಾಖಲಾಗಿದ್ದ ಪ್ರಕರಣದ ತನಿಖೆಯನ್ನು ಸಿಐಡಿ ನಡೆಸುತ್ತಿದ್ದು, ಅರಸು ಟ್ರಕ್ ಟರ್ಮಿನಲ್ ನಿಗಮದ ಅಧ್ಯಕ್ಷರಾದ ವೀರಯ್ಯ ಅವರು ನಡೆಸಿದ್ದ ಅಕ್ರಮಕ್ಕೆ ಸಂಬಂಧಿಸಿದ ಕೆಲವು ಮಹತ್ವದ ಸಾಕ್ಷ್ಯಗಳು ಸಿಐಡಿಗೆ ಸಿಕ್ಕಿದೆ. ಅಕ್ರಮದಿಂದ ಬಂದ ಹಣದಲ್ಲಿ ವೀರಯ್ಯ ಅವರು ಕೆಂಗೇರಿ ವ್ಯಾಪ್ತಿಯ ಉಲ್ಲಾಳದಲ್ಲಿ ಒಂದು ಸೈಟ್ ಖರೀದಿಸಿದ್ದಾರೆ.
ಡಿಡಿಯುಟಿಟಿಎಲ್‌ನಿಂದ 2021ರಿಂದ 2023ರ ನಡುವೆ 821 ಕಾಮಗಾರಿ ನಡೆಸಲು ಅನುಮತಿ ನೀಡಲಾಗಿತ್ತು. ಅದರಲ್ಲಿ 153 ಕಾಮಗಾರಿ ಮಾತ್ರ ಮುಕ್ತಾಯವಾಗಿತ್ತು. ಉಳಿದ 668 ಕಾಮಗಾರಿಗಳನ್ನು ನಡೆಸದೇ ನಕಲಿ ಬಿಲ್ ಸೃಷ್ಟಿಸಿ 39.42 ಕೋಟಿಯನ್ನು ಗುತ್ತಿಗೆ ಏಜೆನ್ಸಿಗಳಿಗೆ ರಿಲೀಸ್ ಮಾಡಲಾಗಿತ್ತು.
ಮೆಸರ್ಸ್ SS ಎಂಟರ್ ಪ್ರೈಸರ್ಸ್, ವೆನಿಶಾ ಎಂಟರ್ ಪ್ರೈಸರ್ಸ್, ಮಯೂರ್ ಅಡ್ವರ್ಟೈಸರ್ಸ್ ಕಾಂಟ್ರಾಕ್ಟರ್ಗಳಿಗೆ ಹಣ ಪಾವತಿಯಾಗಿತ್ತು. ಕಾಮಗಾರಿ ನಡೆಸದೇ ಇರುವವರು ವೀರಯ್ಯ ಅಕೌಂಟ್ಗೆ ಹಂತ ಹಂತವಾಗಿ ಹಣ ಹಾಕಿದ್ದರು, ನೇರವಾಗಿ ಹಣ ಹಾಕಿರುವ ದಾಖಲೆ ಸೀಜ್ ಮಾಡಿ CID ತನಿಖೆ ನಡೆಸುತ್ತಿದೆ.