ಬೆಂಗಳೂರು : ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಭರ್ಜರಿ ಭೇಟಿಯಾಡಿದೆ. ಹಗರಣದಲ್ಲಿ ಹೆಸರು ಕೇಳಿಬಂದ ಹಿನ್ನೆಲೆಯಲ್ಲಿ ಬಿ. ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಿ. ನಾಗೇಂದ್ರನನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಅವರು ನಾಗೇಂದ್ರನನ್ನು 6 ದಿನಗಳ ಕಾಲ ಇಡಿ ಕಸ್ಟಡಿಗೆ ವಹಿಸಿದ್ದಾರೆ.
ಇದೀಗ ಬಿ. ನಾಗೇಂದ್ರ ಬಳ್ಳಾರಿ ಎಲೆಕ್ಷನ್ಗೆ ವಾಲ್ಮೀಕಿ ನಿಗಮದ ಹಣ ಬಳಕೆ ಮಾಡಿರೋ ಅನುಮಾನ ಹುಟ್ಟಿಕೊಂಡಿದೆ. ಇಡಿ ತನಿಖೆಯಲ್ಲಿ 20 ಕೋಟಿ ರಹಸ್ಯ ಬಟಾ ಬಯಲಾಗಿದೆ. ಇಡಿ ವಿಶೇಷ ಕೋರ್ಟ್ಗೆ ಈ ಬಗ್ಗೆ ಇಡಿ ಅಧಿಕಾರಿಗಳು ಮಾಹಿತಿ ನೀಡಿದ್ದು, ವಾಲ್ಮೀಕಿ ನಿಗಮದ 20.19 ಕೋಟಿ ಹಣ ಎಲೆಕ್ಷನ್ಗೆ ಬಳಕೆ ಮಾಡಿದ್ದಾರೆ. ಚುನಾವಣೆ ವೆಚ್ಚಕ್ಕೆ ನಾಗೇಂದ್ರ ಹಣ ಡೈವರ್ಟ್ ಮಾಡಿದ್ದು, ಲೋಕಸಭೆ ಎಲೆಕ್ಷನ್ನಲ್ಲಿ ಬಳ್ಳಾರಿ ಕ್ಷೇತ್ರದಲ್ಲಿ ಹಣ ಹಂಚಿಕೆಯಾಗಿದೆ.
ಈ ಬಗ್ಗೆ ಇಡಿ ರಿಮ್ಯಾಂಡ್ ಕಾಪಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದು, ಇದೇ ಕಾರಣದಿಂದಾಗಿ ನಾಗೇಂದ್ರನನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. 20.19 ಕೋಟಿ ಹಣ ಎಲ್ಲೆಲ್ಲಿ..? ಹೇಗೆ ಹಂಚಿಕೆ ಮಾಡಲಾಗಿದೆ..? ಯಾರ್ಯಾರ ಅಕೌಂಟ್ಗಳಿಂದ ಈ ಹಣವನ್ನು ಡ್ರಾ ಮಾಡಲಾಯ್ತು..? ಹೇಗೆಲ್ಲಾ ಹಣವನ್ನು ವೆಚ್ಚ ಮಾಡಲಾಯ್ತು ಅನ್ನೋ ಬಗ್ಗೆ ವಿಚಾರಣೆ ನಡೆಯುತ್ತಿದೆ. ಯಾರಿಗೂ ಸಣ್ಣ ಸುಳಿವು ಸಿಗದಂತೆ ED ಅಧಿಕಾರಿಗಳು ಹೆಜ್ಜೆ ಇಡ್ತಿದೆ.
ರಿಮ್ಯಾಂಡ್ ಕಾಪಿಯಲ್ಲಿರುವ ಡಿಟೇಲ್ಸ್ :
- 187 ಕೋಟಿ ಹಗರಣದ ಮಾಸ್ಟರ್ ಮೈಂಡ್ ನಾಗೇಂದ್ರ..!
- ಮಾಜಿ ಸಚಿವ ನಾಗೇಂದ್ರಗೆ ಎಲ್ಲವೂ ಗೊತ್ತಿತ್ತು..!
- ನಾಗೇಂದ್ರ ಆಜ್ಞೆ ಮೇರೆಗೆ 187 ಕೋಟಿ ಹಣ ಲಪಟಾಯಿಸಲಾಗಿದೆ..!
- ಇಡೀ ಷಡ್ಯಂತ್ರದ ಹಿಂದೆ ನಾಗೇಂದ್ರ ಪಾತ್ರವಿದೆ
- ವಸಂತನಗರ ಶಾಖೆಯಿಂದ ಎಂಜಿ ರೋಡ್ ಶಾಖೆಗೆ ಅಕೌಂಟ್ ಶಿಫ್ಟ್ ಮಾಡಿಸಿದ್ದೇ ನಾಗೇಂದ್ರ..!
- ಶಾಂಗ್ರೀಲಾ ಹೊಟೇಲ್ ನಲ್ಲಿ ಸಭೆ ನಡೆಸಿದ್ದ ನಾಗೇಂದ್ರ
- ಸಭೆಯಲ್ಲಿ ನಿಗಮದ ಮಾಜಿ ಎಂಡಿ ಪದ್ಮನಾಭ ಹಾಗೂ ನಾಗೇಂದ್ರ ಆಪ್ತರು ಭಾಗಿ
- ಶಾಂಗ್ರೀಲಾ ಹೊಟೇಲ್ ಸಭೆಯಲ್ಲೇ ಸಂಚು ರೂಪಿಸಿದ್ದ ನಾಗೇಂದ್ರ
- ಸಭೆಯಲ್ಲಿ ನೆಕ್ಕಂಟಿ ನಾಗರಾಜು ಹಾಗೂ ನಾಗೇಶ್ವರ ರಾವ್ ಭಾಗಿ
- ಹೈದರಾಬಾದ್ನ ಆರ್ ಬಿಎಲ್ ಬ್ಯಾಂಕ್ ಬಂಜಾರ ಹಿಲ್ಸ್ ನಲ್ಲಿ 18 ನಕಲಿ ಅಕೌಂಟ್ ಓಪನ್..!11. ಯೂನಿಯನ್ ಬ್ಯಾಂಕ್ ನಿಂದ 18 ಅಕೌಂಟ್ ಗೆ ಕೋಟಿ ಕೋಟಿ ಹಣ ವರ್ಗ
- ಎಸ್ ಟಿ ಅಭಿವೃದ್ಧಿ ಹಣದ ಫಲಾನುಭವಿಯೇ ನಾಗೇಂದ್ರ ಹಾಗೂ ಆಪ್ತರು..!
- ನಿಗಮದ ಅಧಿಕಾರಿ ಚಂದ್ರಶೇಖರ್ ಆತ್ಮಹತ್ಯೆಯಿಂದ ಹಗರಣ ಬಹಿರಂಗ..!
- ಮೇ 23ರಂದೇ ಅಕ್ರಮ ಹಣ ವರ್ಗಾವಣೆಯ ಬಗ್ಗೆ ನಾಗೇಂದ್ರಗೆ ಮಾಹಿತಿ ನೀಡಿದ್ದ ಅಧಿಕಾರಿಗಳು..
- ಎಲ್ಲ ಹಣವನ್ನು ಹಿಂದಿರುಗಿಸುವ ವ್ಯವಸ್ಥೆ ಮಾಡುವುದಾಗಿ ನಾಗೇಂದ್ರ ಭರವಸೆ
- ಮೇ 29 ರಂದು ನಾಗೇಂದ್ರ ಕಾರ್ ನಲ್ಲೇ ಮೀಟಿಂಗ್
- ಏರೋ ಸ್ಪೇಸ್ ಪಾರ್ಕ್ ನಲ್ಲಿ ರಾತ್ರಿ 8ಕ್ಕೆ ಮೀಟಿಂಗ್
- ನಾಗೇಂದ್ರ , ಮಾಜಿ ಎಂಡಿ ಪದ್ಮನಾಭ , ಆರೋಪಿ ನೆಕ್ಕಂಟಿ ನಾಗರಾಜು ಭಾಗಿ
- ಯಾರೂ ತನ್ನ ಹೆಸರು ಹೇಳದಂತೆ ನಾಗೇಂದ್ರ ತಾಕೀತು
- ನನ್ನ ಹೆಸರು ಹೊರಗೆ ಬಂದರೆ ಅಧಿಕಾರ ಹೋಗುತ್ತೆ…
- ಅಧಿಕಾರದಲ್ಲಿ ಇದ್ದರೆ ಮಾತ್ರ ನಿಮ್ಮ ರಕ್ಷಣೆ ಮಾಡಲು ಸಾಧ್ಯ
- ನನ್ನ ಹೆಸರು ಹೊರಬರದಂತೆ ನೋಡಿಕೊಳ್ಳುವಂತೆ ತಾಕೀತು
- ಬಹುಕೋಟಿ ಹಣ ದೋಚಿದ್ದೇ ಮಾಜಿ ಸಚಿವ ನಾಗೇಂದ್ರ
- ನಾಗೇಂದ್ರ ಹೇಳಿದ್ದಕ್ಕೇ ಅಕೌಂಟ್ಗಳನ್ನು ತೆರೆದ ನಿಗಮದ ಸಿಬ್ಬಂದಿ
- ನಾಗೇಂದ್ರ ಮನೆ ಮೇಲೆ ಇಆ ರೇಡ್ ವೇಳೆ ಹಲವು ಮಹತ್ವದ ದಾಖಲೆ ಪತ್ತೆ
ಇದನ್ನೂ ಓದಿ : ಕಣ್ಮನ ಸೆಳೆಯುತ್ತಿದೆ ‘ಕಡಲೂರ ಕಣ್ಮಣಿ’ ಚಿತ್ರದ ಟ್ರೇಲರ್ : ಜು.19ಕ್ಕೆ ಸಿನಿಮಾ ರಿಲೀಸ್..!