ಕಲಬುರಗಿ : ಜಿಲ್ಲೆಯ ಸೇಡಂ ಪುರಸಭೆಯಲ್ಲಿ ಕಿರಿಯ ಇಂಜನಿಯರ್ ಆಗಿದ್ದಅಶೋಕ್ ಪುಟಪಾರ್ ಅವರು 6 ತಿಂಗಳ ಹಿಂದೆಯೇ ಮೃತಪಟ್ಟಿದ್ದರು. ಆದರೆ ರಾಜ್ಯ ಸರ್ಕಾರ ಅವರನ್ನು ಕೊಡಗಿಗೆ ವರ್ಗಾವಣೆ ಮಾಡಿ ಜುಲೈ 9ರಂದು ಆದೇಶ ಹೊರಡಿಸಿ ಯಡವಟ್ಟು ಮಾಡಿಕೊಂಡಿದೆ.
ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ದಿಗ್ಗಾಂವ್ ಗ್ರಾಮದ ನಿವಾಸಿ ಅಶೋಕ್ ಪುಟಪಾರ್ ಕಳೆದ ಜನವರಿ 12 ರಂದು ಮೃತಪಟ್ಟಿದ್ದರು. ಇದೀಗ ಸತ್ತೋದ ಅಧಿಕಾರಿಗೆ ಟ್ರಾನ್ಸ್ಫರ್ ಭಾಗ್ಯ ಕೊಟ್ಟು ಸರ್ಕಾರ ಮತ್ತು ಪೌರಾಡಳಿತ ಇಲಾಖೆ ಯಡವಟ್ಟು ಮಾಡಿಕೊಂಡಿದೆ.
ಇಲಾಖೆಯ ನೌಕರ ಮೃತಪಟ್ಟ ವಿಚಾರ ಗೊತ್ತಿಲ್ಲದೆ ವರ್ಗಾವಣೆ ಮಾಡಿದ್ಯಾ..? ಅಶೋಕ್ ಮೃತಪಟ್ಟ ಬಗ್ಗೆ ಇಲಾಖೆಗೆ ಮಾಹಿತಿ ಇರಲಿಲ್ವಾ..? ಸಾವಿನ ಬಗ್ಗೆ ಮಾಹಿತಿ ಇಲ್ಲದೆ ವರ್ಗಾವಣೆ ಮಾಡಿದ್ಯಾ ಸರ್ಕಾರ..? ಎಂಬ ಚರ್ಚೆ ನಡೆಯುತ್ತಿದೆ.
ಇದನ್ನೂ ಓದಿ : ಬಾಗಲಕೋಟೆ : ಮೈ-ಕೈ ನೋವು ಅಂತ ಬರೋ ಭಕ್ತರಿಗೆ ಕೊಡಲಿ ಏಟು ಕೊಡ್ತಿದ್ದ ಪೂಜಾರಿ ಅರೆಸ್ಟ್..!
Post Views: 100