Download Our App

Follow us

Home » ಅಪರಾಧ » ಅಪೆಕ್ಸ್​ ಬ್ಯಾಂಕ್​​ನಲ್ಲಿ ಬರೋಬ್ಬರಿ 2 ಸಾವಿರ ಕೋಟಿ ಹಗರಣ – ಸಚಿವ ಕೆ.ಎನ್. ರಾಜಣ್ಣಗೆ ಢವಢವ..!

ಅಪೆಕ್ಸ್​ ಬ್ಯಾಂಕ್​​ನಲ್ಲಿ ಬರೋಬ್ಬರಿ 2 ಸಾವಿರ ಕೋಟಿ ಹಗರಣ – ಸಚಿವ ಕೆ.ಎನ್. ರಾಜಣ್ಣಗೆ ಢವಢವ..!

ಬೆಂಗಳೂರು : ಅಪೆಕ್ಸ್​ ಬ್ಯಾಂಕ್​ನಲ್ಲಿ ನಡೆದ ಅವ್ಯವಹಾರದಲ್ಲಿ ಸಚಿವ ರಾಜಣ್ಣಗೆ ಢವಢವ ಶುರುವಾಗಿದೆ. ಇದು ಒಂದೆರಡು ಕೋಟಿಯದ್ದಲ್ಲ, ಬರೋಬ್ಬರಿ 2 ಸಾವಿರ ಕೋಟಿ ಹಗರಣವಾಗಿದೆ. ನಾಗೇಂದ್ರ ಬಳಿಕ ಕೆ.ಎನ್. ರಾಜಣ್ಣಗೂ ಸ್ಕ್ಯಾಮ್​​​​ ಕಂಟಕ ಎದುರಾಗುವ ಸಾಧ್ಯತೆಯಿದೆ. ಅಪೆಕ್ಸ್​ ಬ್ಯಾಂಕ್ ಎಂಡಿ ನೇಮಕಾತಿಯಲ್ಲಿ ಭಾರೀ ಅವ್ಯವಹಾರದ ಆರೋಪ ಕೇಳಿಬಂದಿದೆ. ಇದೀಗ ಅಪೆಕ್ಸ್​ ಬ್ಯಾಂಕ್ ಹಗರಣದ ತನಿಖೆಗೆ ಹೈಕೋರ್ಟ್​ ಸೂಚನೆ ನೀಡಿದೆ.

2 ಸಾವಿರ ಕೋಟಿ ರೂಪಾಯಿ ಅವ್ಯವಹಾರ ನಡೆದ ಆರೋಪ ಪ್ರಕರಣ ಸಂಬಂಧ ಸಚಿವ ಕೆ. ಎನ್​. ರಾಜಣ್ಣಗೆ ಸಂಕಷ್ಟ ಶುರುವಾಗುವ ಸಾಧ್ಯತೆಯಿದೆ. ಅಪೆಕ್ಸ್​​ ಬ್ಯಾಂಕ್​​ಗೆ ಸಂಬಂಧ ಇಲ್ಲದಿರೋರಿಗೆ ಸಾಲ, ನಿಯಮ ಮೀರಿ ಸಕ್ಕರೆ ಕಾರ್ಖಾನೆ, ರಿಯಲ್ ಎಸ್ಟೇಟ್​, ಚಿನ್ನದಂಗಡಿಗೆ ಸಾಲ ನೀಡಿರುವ ಆರೋಪ ಕೇಳಿಬಂದಿದೆ. ಈ ಸಂಬಂಧ ದೂರುದಾರ ದಿನೇಶ್ ಕಲ್ಲಹಳ್ಳಿ ಹೈಕೋರ್ಟ್​ ಮೆಟ್ಟಿಲೇರಿದ್ದು, ಈ ಬೆನ್ನಲ್ಲೇ 3 ತಿಂಗಳೊಳಗೆ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ಸರ್ಕಾರಕ್ಕೆ ಸೂಚನೆ ನೀಡಿದ್ದಾರೆ. ಇದೇ ಪ್ರಕರಣದಲ್ಲಿ ಸಚಿವ ಕೆ.ಎನ್. ರಾಜಣ್ಣಗೆ ಸಂಕಷ್ಟ ಫಿಕ್ಸ್ ಆಗಲಿದೆ. 2 ಸಾವಿರ ಕೋಟಿ ಹಗರಣದ ತನಿಖೆಗೆ ಹೈಕೋರ್ಟ್​ ಕಟ್ಟಾಜ್ಞೆ ನೀಡಿದೆ.

ಸಾಮಾಜಿಕ ಕಾರ್ಯಕರ್ತ ದಿನೇಶ್​ ಕಲ್ಲಹಳ್ಳಿ ನೀಡಿದ ದೂರು ಆಧರಿಸಿ ಸರ್ಕಾರದ ಸಿಎಸ್​ ಗೌರ್ನರ್​ ಕಚೇರಿಯಿಂದ ಪತ್ರ ಬರೆದಿದ್ದಾರೆ. ಕಲ್ಲಹಳ್ಳಿ ದೂರಿನ ಸಂಬಂಧ ಕ್ರಮ ಜರುಗಿಸುವಂತೆ ಗೌರ್ನರ್​​ ಶಿಫಾರಸು ಮಾಡಿದ್ದು, ಕೋರ್ಟ್​ನಲ್ಲಿ ದೂರು ದಾಖಲಿಸಲು ಕಲ್ಲಹಳ್ಳಿ ಅನುಮತಿ ಕೋರಿ ಪತ್ರ ಬರೆದಿದ್ದಾರೆ. ಆನಂತರ ದಿನೇಶ್​ ಕಲ್ಲಹಳ್ಳಿ ಹೈಕೋರ್ಟ್​ನಲ್ಲೂ ಅರ್ಜಿ ಸಲ್ಲಿಕೆ ಮಾಡಿದ್ದರು.

ಇದನ್ನೂ ಓದಿ : ಶಿವಣ್ಣನ ಜನ್ಮದಿನಕ್ಕೆ 131ನೇ ಸಿನಿಮಾದ ಮೊದಲ ಝಲಕ್ ರಿಲೀಸ್ : ‘ಐ ಆಮ್ ಕಮಿಂಗ್’ ಎಂದ ಕರುನಾಡ ಕಿಂಗ್..!

Leave a Comment

DG Ad

RELATED LATEST NEWS

Top Headlines

ನಕಲಿ ನಕ್ಷೆ ಸೃಷ್ಟಿಸಿ ಕಟ್ಟಡ ನಿರ್ಮಾಣ – ಮಾಲೀಕನ ವಿರುದ್ಧ FIR ದಾಖಲು..!

ಬೆಂಗಳೂರು : ಬಾಬುಸಾಬ್ ಪಾಳ್ಯ ಕಟ್ಟಡ ಕುಸಿತ ದುರಂತದ ಬೆನ್ನಲ್ಲೇ ಬಿಬಿಎಂಪಿ ಎಚ್ಚೆತ್ತುಕೊಂಡಿದೆ. ನಕಲಿ ನಕ್ಷೆ ತಯಾರಿಸಿ ಕಟ್ಟಡ ನಿರ್ಮಿಸಿರುವ ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ರಾಜರಾಜೇಶ್ವರಿನಗರ

Live Cricket

Add Your Heading Text Here