ಬೆಂಗಳೂರು : ಆಟೋ ಚಾಲಕನೋರ್ವ ರ‍್ಯಾಶ್ ಡ್ರೈವಿಂಗ್ ಮಾಡಿ ಬೈಕ್ ಹಾಗೂ ರಸ್ತೆ ಬದಿ ಹೊಗುತ್ತಿದ್ದ ಪಾದಚಾರಿಗಳಿಗೆ ಡಿಕ್ಕಿ ಹೊಡೆದು ಎಸ್ಕೇಪ್ ಆಗಿರುವ ಘಟನೆ ಡೈರಿ ಸರ್ಕಲ್ ಬಳಿಯ ಕ್ರೈಸ್ಟ್ ಯೂನಿವರ್ಸಿಟಿ ಬಳಿ ನಡೆದಿದೆ.
ಈ ಹಿಟ್ ಆ್ಯಂಡ್ ರನ್ ದೃಶ್ಯ ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಜುಲೈ 11ರಂದು ರಾತ್ರಿ 9.07ರ ಸುಮಾರಿಗೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾದ ವಿಡಿಯೋವನ್ನು ಎಕ್ಸ್ನಲ್ಲಿ ಶೇರ್ ಮಾಡಿ ಬೆಂಗಳೂರು ಸಿಟಿ ಪೊಲೀಸರಿಗೆ ಟ್ಯಾಗ್ ಮಾಡಲಾಗಿದ್ದು, ಆಟೋ ಚಾಲಕನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ.
ಆಟೋ ಚಾಲಕ ವೇಗವಾಗಿ ಬಂದು ಕಾರನ್ನ ಓವರ್ ಟೇಕ್ ಮಾಡಿ, ನಂತರ ರಸ್ತೆ ಬದಿ ನಡೆದುಕೊಂಡು ಹೋಗ್ತಿದ್ದ ಇಬ್ಬರು ಪಾದಚಾರಿಗಳು ಹಾಗೂ ಬೈಕ್ಗೆ ಡಿಕ್ಕಿ ಹೊಡೆದು ಪರಾರಿ ಆಗಿದ್ದಾನೆ. ತಕ್ಷಣವೇ ರಸ್ತೆಯಲ್ಲಿ ಬಿದ್ದವರ ಸಹಾಯಕ್ಕೆ ಸ್ಥಳೀಯರು ಧಾವಿಸಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಪಾಯವಾಗಿಲ್ಲ. ಆಟೋ ನಂಬರ್ ಪ್ಲೇಟ್ ಆಧಾರಿಸಿ ಸಂಚಾರಿ ಪೊಲೀಸರಿಂದ ಶೋಧಕಾರ್ಯ ನಡೆಯುತ್ತಿದೆ. ಬೆಂಗಳೂರ ಸಿಟಿ ಪೊಲೀಸರು ಸೂಕ್ತ ಕ್ರಮದ ಭರವಸೆ ನೀಡಿದ್ದಾರೆ.
ಇದನ್ನೂ ಓದಿ : ಹಾವೇರಿ : ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಕಾರು : ಇಬ್ಬರು ಸ್ಥಳದಲ್ಲೇ ಸಾ*ವು..!