ಹಾಸನ : ಒಂಟಿ ಸಲಗವೊಂದು ವ್ಯಕ್ತಿಯ ಮೇಲೆ ಡೆಡ್ಲಿ ಅಟ್ಯಾಕ್ ಮಾಡಿದ ಘಟನೆ ಜಿಲ್ಲೆಯ ಬೇಲೂರು ತಾಲ್ಲೂಕಿನ ಕಡೆಗರ್ಜೆ ಗ್ರಾಮದಲ್ಲಿ ನಡೆದಿದೆ. ಕೂದಲೆಳೆ ಅಂತರದಲ್ಲಿ ವ್ಯಕ್ತಿ ಪ್ರಾಣಾಪಾಯದಿಂದ ಪಾರಗಿದ್ದಾನೆ.
ಮಹೇಶ್‌ಗೌಡ ಎಂಬತಾ ಇಂದು ಬೆಳಿಗ್ಗೆ ತನ್ನ ಮನೆಯಿಂದ ಕಾಫಿ ತೋಟಕ್ಕೆ ಹೊರಟ್ಟಿದ್ದನು. ಕಾಫಿ ತೋಟದೊಳಗೆ ನಡೆದುಕೊಂಡು ಹೋಗುವಾಗ ಹೊತ್ತಲ್ಲೇ ಏಕಾಎಕಿ ಒಂಟಿ ಸಲಗವೊಂದು ಘೀಳಿಟ್ಟುಕೊಂಡು ಮಹೇಶ್ನನ್ನು ಅಟ್ಟಾಡಿಸಿ ಅಟ್ಯಾಕ್ ಮಾಡಲು ಮುಂದಾಗಿದೆ.
ಆನೆ ದಾಳಿಯಿಂದ ತಪ್ಪಿಸಿಕೊಂಡು ಓಡಿ ಹೋದ ಮಹೇಶ್‌ಗೌಡ, ಅಲ್ಲೆ ಪಕ್ಕದಲ್ಲಿದ್ದ ಮನೆಯ ಮಹಡಿ ಮೆಟ್ಟಿಲು ಹತ್ತಿದ್ದಾನೆ. ಆದ್ರೆ ಆನೆ ಮಾತ್ರ ಮನೆಯ ಮುಂದೆಯೇ ಬರೋಬ್ಬರಿ 10 ನಿಮಿಷ ಕಾದು ನಿಂತಿತ್ತು.
ಮಹೇಶ್‌ಗೌಡ ಕೆಳಗೆ ಬಂದ ಕೂಡಲೇ ಮತ್ತೆ ದಾಳಿ ನಡೆಸಲು ಕಾಲಿನಿಂದ ಮಣ್ಣು ಕೆರೆಯುತ್ತಾ ಘೀಳಿಡುತ್ತಾ ಕಾದು ನಿಂತ್ತಿತ್ತು. ಸುಮಾರು ಹೊತ್ತಿನ ನಂತ್ರ ಆನೆ ಕಾಫಿ ತೋಟಕ್ಕೆ ವಪಾಸ್ ಹೊಗಿದೆ. ಬದುಕಿದೆ ಬಡಜೀವ ಅಂತಾ ಮಹೇಶ್ ಗೌಡ ನಿಟ್ಟುಸಿರು ಬಿಟ್ಟಿದ್ದಾನೆ. ಈ ಎಲ್ಲಾ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇದನ್ನೂ ಓದಿ : ವಾಲ್ಮೀಕಿ ಹಗರಣ ಕೇಸ್ನಲ್ಲಿ ಬ್ಯಾಂಕ್ ಅಧಿಕಾರಿಗಳು ನಾಪತ್ತೆ : SIT, ED, CBIನಿಂದ ತೀವ್ರ ಶೋಧ..!