ಬೆಂಗಳೂರು : ಸದಾ ತಮ್ಮ ಸೌಂದರ್ಯದ ಬಗ್ಗೆ ಕಾಳಜಿ ವಹಿಸುವ ಹೆಣ್ಣು ಮಕ್ಕಳಿಗೆ ಬ್ಯೂಟಿ ಪ್ರಾಡಕ್ಟ್ ಅಂದ್ರೆ ಎಲ್ಲಿಲ್ಲದ ಒಲವು. ಹಾದಿ ಬೀದಿಯಲ್ಲಿ ಕಡಿಮೆ ಬೆಲೆಗೆ ಸಿಗುವ ಕಾಸ್ಮೆಟಿಕ್ ಇದ್ರೆ ಕೆಲ ಹೆಣ್ಣು ಮಕ್ಜಳು ಹಿಂದೆ-ಮುಂದೆ ಯೋಚಿಸದೇ ಖರೀದಿಸುತ್ತಾರೆ. ಆದ್ರೆ ಚೀಪ್ ಕಾಸ್ಮೆಟಿಕ್ ಬಳಸುವ ಹೆಂಗಳೆಯರಿಗೆ ಇದೀಗ ಶಾಕ್ ಎದುರಾಗಿದೆ. ರಸ್ತೆ ಬದಿಯಲ್ಲಿ ಮಾರಾಟವಾಗ್ತಿರೋ ಚೀಪ್ ಕಾಸ್ಮೆಟಿಕ್ ಬಳಸಿದರೆ ಸ್ಕಿನ್ ಕ್ಯಾನ್ಸರ್ ಬರೋ ಸಾಧ್ಯತೆಯಿದೆ.
ಹೌದು.. ಗಾಂಧಿನಗರ, ಉಪ್ಪಾರಲೇಟೆ, ಮಲ್ಲೇಶ್ವರಂ ಸೇರಿದಂತೆ ಕೆಲವು ಏರಿಯಾಗಳಲ್ಲಿ ಬ್ರಾಂಡೆಡ್ ಹೆಸರಲ್ಲಿ ಚೀಪ್ ಬ್ಯೂಟಿ ಪ್ರಾಡಕ್ಟ್ಗಳ ಮಾರಾಟವಾಗ್ತಿದೆ. ಈ ಪ್ರಾಡಕ್ಟ್ಗಳು ಸ್ಕಿನ್ಗೆ ಹಾನಿಕಾರಕ ಅಷ್ಟೇ ಅಲ್ಲದೇ ಇದರಿಂದ ಸ್ಕಿನ್ ಕ್ಯಾನ್ಸರ್ ಬರುವ ಸಾಧ್ಯತೆಯಿದೆ.
ರಸ್ತೆಯಲ್ಲಿ ಅರ್ದ ಬೆಲೆಗೆ ಸಿಗುವ ಕಾಜಲ್, ಐ-ಲೈನರ್, ಫೌಂಡೇಶನ್, ಕ್ರೀಮ್, ಲಿಪ್ ಸ್ಟಿಕ್, ಬ್ಲಷ್ ಯೂಸ್ ಮಾಡಿದಲ್ಲಿ ಕ್ಯಾನ್ಸರ್ ಬರುವ ಚಾನ್ಸ್ ಇದೆ. ಹೈಫೈ ಬ್ರಾಂಡ್ಗಳ ಅಚ್ಚು ಕಾಪಿಯಂತೆ ಕಂಡರು ಇವು ಅಸಲಿ ಬ್ರ್ಯಾಂಡ್ಗಳಲ್ಲ. ಪೊಲೀಸರು, ಆರೋಗ್ಯ ಇಲಾಖೆ ಈ ಬಗ್ಗೆ ಕೇರ್ ಲೆಸ್ ಮಾಡಿದ್ದಾರೆ. ನೀವೂ ಕಡಿಮೆ ಬೆಲೆಗೆ ಬ್ರಾಂಡೆಡ್ ಬ್ಯೂಟಿ ಪ್ರಾಡಕ್ಟ್ ಖರೀದಿ ಮಾಡ್ತಿದ್ರೆ ಹುಷಾರ್ ಆಗಿರಿ.
ಇದನ್ನೂ ಓದಿ : ರಾಜ್ಯದಲ್ಲಿ ರಣಕೇಕೆ ಹಾಕ್ತಿದೆ ಡೇಂಜರ್ ಡೆಂಘೀ – 12 ದಿನದಲ್ಲಿ 4000ಕ್ಕೂ ಹೆಚ್ಚು ಕೇಸ್ ಪತ್ತೆ..!