Download Our App

Follow us

Home » ಸಿನಿಮಾ » ರೋಹಿತ್ ಚೊಚ್ಚಲ ಕನಸಿಗೆ ವಿಜಯ್ ರಾಘವೇಂದ್ರ ಸಾಥ್​ – “ರಕ್ತಾಕ್ಷ” ಚಿತ್ರದ ರಿಲೀಸ್​ ಡೇಟ್​ ಅನೌನ್ಸ್​..!

ರೋಹಿತ್ ಚೊಚ್ಚಲ ಕನಸಿಗೆ ವಿಜಯ್ ರಾಘವೇಂದ್ರ ಸಾಥ್​ – “ರಕ್ತಾಕ್ಷ” ಚಿತ್ರದ ರಿಲೀಸ್​ ಡೇಟ್​ ಅನೌನ್ಸ್​..!

ಕನ್ನಡ ಚಿತ್ರರಂಗದಲ್ಲಿ ಹೊಸ ಹೊಸ ಪ್ರಯೋಗಗಳು ನಡೆಯುತ್ತಲೇ ಇರುತ್ತವೆ. ಕೆಲವು ಪ್ರಯತ್ನಗಳು ಯಶಸ್ವಿಯಾದರೆ, ಕೆಲವು ಬಿಗ್ ಬಜೆಟ್ ಸಿನಿಮಾಗಳ ನಡುವೆ ಕಳೆದು ಹೋಗುತ್ತವೆ. ಹೊಸತನಕ್ಕೆ ಬೆಂಬಲ ಸಿಗಲಿ, ಸಿಗದೇ ಇರಲಿ ಆದರೆ ಪ್ರಯತ್ನಗಳಂತೂ ನಿಂತಿಲ್ಲ ಎಂಬುದು ಕನ್ನಡ ಸಿನಿಮಾ ಪ್ರೇಮಿಗಳಿಗೆ ಖುಷಿಯ ಸಂಗತಿ.

ಇದೀಗ ಸಿನಿಮಾ ಬಗ್ಗೆ ಅತೀವ ಪ್ರೀತಿ ಹೊಂದಿರುವ ಯುವ ಪ್ರತಿಭೆ ರೋಹಿತ್ ಮೊದಲ‌ ಕೂಸು “ರಕ್ತಾಕ್ಷ” ಸಿನಿಮಾ ತೆರೆಗೆ ಬರಲು ರೆಡಿಯಾಗಿದೆ. ಈ ಚಿತ್ರದ ಟ್ರೇಲರ್ ಅನಾವರಣಗೊಂಡಿದ್ದು, ಸಿನಿಮಾ ಮೇಲಿನ ಕುತೂಹಲ ಹೆಚ್ಚಿಸಿದೆ. ರಕ್ತಾಕ್ಷ ಟ್ರೇಲರ್ ಬಹಳ ಇಂಪ್ರೆಸಿಂಗ್ ಆಗಿ‌ ಮೂಡಿಬಂದಿದ್ದು, ಮಾಸ್ ಜೊತೆಗೆ ಥ್ರಿಲ್ಲಿಂಗ್ ಅಂಶಗಳು ಚಿತ್ರದಲ್ಲಿದೆ. ಪ್ರೇಕ್ಷಕರನ್ನು ಸೀಟಿನ ತುದಿಗೆ ಕುರಿಸುವುದು ಪಕ್ಕ. ಟ್ರೇಲರ್ ಬಿಡುಗಡೆ ಮಾಡುವ ಮೂಲಕ ಪ್ರಚಾರ ಕಾರ್ಯ ಶುರು ಮಾಡಿರುವ ಚಿತ್ರತಂಡ ಜುಲೈ 26ಕ್ಕೆ ಸಿನಿಮಾವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡಲು ಸಜ್ಜಾಗಿದೆ.

ಚಿತ್ರದ ನಾಯಕ ರೋಹಿತ್ ಈಗಾಗಲೇ ಮಾಡೆಲಿಂಗ್ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ‘ರಕ್ತಾಕ್ಷ’ ಸಿನಿಮಾ ಮೂಲಕ ನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ಹೀರೋ ಆಗಿರುವ ಜೊತೆಗೆ ತಮ್ಮದೇ ಸಾಯಿ ಪ್ರೊಡಕ್ಷನ್ ಹೌಸ್ ನಿರ್ಮಾಣ ಸಂಸ್ಥೆಯ ಮೂಲಕ ‘ರಕ್ತಾಕ್ಷ’ ಸಿನಿಮಾವನ್ನು ನಿರ್ಮಾಣ ಸಹ ಮಾಡಿದ್ದಾರೆ.

ವಾಸುದೇವ ಎಸ್.ಎನ್ ‘ರಕ್ತಾಕ್ಷ’ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ರೋಹಿತ್​ ರೀತಿಯಲ್ಲಿಯೇ ವಾಸುದೇವ್ ಅವರಿಗೂ ಇದು ಮೊದಲ ಸಿನಿಮಾ. ರೋಹಿತ್, ವಾಸುದೇವ್ ಜೊತೆಗೆ ಇನ್ನೊಂದಿಷ್ಟು ಹೊಸ ಪ್ರತಿಭೆಗಳು ಸೇರಿ ಈ ಸಿನಿಮಾವನ್ನು ಮಾಡಿವೆ. ಧೀರೇಂದ್ರ ಡಾಸ್ ಈ ಸಿನಿಮಾಕ್ಕೆ ಸಂಗೀತ ನೀಡಿದ್ದಾರೆ. ಚಿತ್ರಕ್ಕೆ ಸುಜಿತ್ ವೆಂಕಟರಾಮಯ್ಯ ಸಾಹಿತ್ಯ ಬರೆದಿದ್ದಾರೆ, ಸಂಗೀತವನ್ನು ಧೀರೇಂದ್ರ ಡಾಸ್ ನೀಡಿದ್ದಾರೆ. ಕೆಜಿಎಫ್ ಸಿನಿಮಾದಲ್ಲಿ ನಟಿಸಿರುವ ರೂಪಾ ರಾಯಪ್ಪ, ಅರ್ಚನಾ ಕೊಟ್ಟಿಗೆ, ರಚನಾ ದಶರತ್, ನಿವೀಕ್ಷ ನಾಯ್ಡು, ಗುರುದೇವ ನಾಗರಾಜ, ಪ್ರಭು, ವಿಶ್ವ, ಭದ್ರಿ ನಾರಾಯಣ,, ಬಸವರಾಜ ಆದಾಪುರ ನಟಿಸಿದ್ದಾರೆ. ಖಳನಾಯಕ ಪಾತ್ರದಲ್ಲಿ ನಟ ಪ್ರಮೋದ್ ಶೆಟ್ಟಿ ನಟಿಸಿದ್ದಾರೆ.

ಇತ್ತೀಚೆಗಷ್ಟೇ ಬೆಂಗಳೂರಿನ ಎಂಎಂಬಿ ಲೆಗಸಿಯಲ್ಲಿ ರಕ್ತಾಕ್ಷ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ನಡೆದಿದೆ. ನಟ ವಿಜಯ್ ರಾಘವೇಂದ್ರ, ನಟಿ ಸುಮನ್ ನಗರ್ಕರ್ ಟ್ರೇಲರ್ ಬಿಡುಗಡೆ ಮಾಡಿ ಹೊಸಬರ ಪ್ರಯತ್ನಕ್ಕೆ ಬೆನ್ನುತಟ್ಟಿದ್ದಾರೆ.

ಇನ್ನು ಈ ಕಾರ್ಯಕ್ರಮದಲ್ಲಿ ನಟ ವಿಜಯ್ ರಾಘವೇಂದ್ರ ಅವರು ಚಿತ್ರತಂಡಕ್ಕೆ ಶುಭಕೋರಿದ್ದಾರೆ. “ಕಥೆ ಬಗ್ಗೆ ಕಡಿಮೆ ಗೊತ್ತಿದ್ದರೆ ಒಳ್ಳೆದು. ಕಥೆ ಹೆಚ್ಚು ಬಿಟ್ಟು ಕೊಟ್ಟರೂ ಕಷ್ಟ. ಕಥೆಯ ಸುಳಿವೇ ಇಲ್ಲದೇ ಊಹಾಪೋಹ ಮಾಡಿಕೊಂಡು ಥಿಯೇಟರ್​​ಗೆ ಬರುವ ತರ ಮಾಡಿದರು ಕಷ್ಟ. ಯಾಕೆಂದರೆ ಜನ ಈಗ ಎಷ್ಟರ ಮಟ್ಟಿಗೆ ಮುಂದುವರೆದಿದ್ದಾರೆ ಎಂದರೆ ಸಣ್ಣ ಟ್ರೇಲರ್ , ಟೀಸರ್ ತಮ್ಮದೇ ಕಲ್ಪನೆ‌ ಮೂಲಕ ಥಿಯೇಟರ್​ಗೆ ಬರ್ತಾರೆ. ಕಥೆ ಅವರದ್ದು ಆದರೆ ಒಪ್ಪಿಕೊಳ್ಳುತ್ತಾರೆ. ಕಥೆ ಬೇರೆಯದದ್ದಾರೆ ನಾವು ಅಂದುಕೊಂಡು ಬಂದ ಕಥೆಯಲ್ಲ ಎಂದು ಬೇಜಾರು ಆಗುತ್ತಾರೆ. ಆದರೆ ಸಣ್ಣ ಎಳೆ, ಜನರ ನಂಬಿಕೆ ವಿಶ್ವಾಸ ಗೆಲ್ಲುವುದು ಸಿನಿಮಾದ ಮುಖಾಂತರ ಗೆಲ್ಲುವುದು ಸಾಹಸ. ಅಂತಹ ಸಾಹಸಕ್ಕೆ ರೋಹಿತ್ ಕೈ ಹಾಕಿದ್ದಾರೆ. ಬಹಳ ಚೆನ್ನಾಗಿ ಟ್ರೇಲರ್ ಮೂಡಿಬಂದಿದೆ. ಕುತೂಹಲ ಕೆರಳಿಸುತ್ತದೆ. ಆಕ್ಷನ್ ಇದೆ. ಥ್ರಿಲ್ಲರ್ ಎಲಿಮೆಂಟ್ ಇದೆ. ನನಗೂ ಆಡಿಯನ್ಸ್ ಆಗಿ ಕ್ಯೂರಿಯಾಸಿಟಿ ಹೆಚ್ಚುವಂತೆ ಮಾಡಿದೆ. ಬಹಳ ಕಷ್ಟಪಟ್ಟಿದ್ದಾರೆ ರೋಹಿತ್. ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ.

ಹಿರಿಯ ನಟಿ ಸುಮನ್ ನಗರ್ಕರ್ ಚಿತ್ರತಂಡಕ್ಕೆ ಶುಭಕೋರಿ, ಟ್ರೇಲರ್ ತುಂಬಾ ಇಂಟ್ರೆಸ್ಟಿಂಗ್ ಆಗಿದೆ. ಕಷ್ಟಪಟ್ಟು ಸಿನಿಮಾ ಮಾಡಿದ್ದಾರೆ. ಪ್ರೋತ್ಸಾಹ ಸಿಗಬೇಕು ಎಲ್ಲರೂ ಪ್ರೋತ್ಸಾಹ ಕೊಡಬೇಕು. ಜನ ಥಿಯೇಟರ್​ಗೆ ಬರಬೇಕು. ಅವರು ನಾವು ಮಾಡುವ ಕೆಲಸ ನೋಡಬೇಕು. ಈ ರೀತಿಯ ಮಿಸ್ಟ್ರೀ ಸ್ಟೋರಿಯನ್ನು ಥಿಯೇಟರ್​ನಲ್ಲಿ ನೋಡಿ‌ ಎಂದು ಹೇಳಿದರು.

ವಕೀಲರಾದ ಹರ್ಷ ಮುತಾಲಿಕ್ ಮಾತಾನಾಡಿ, ರೋಹಿತ್ ನೋಡಿದರೆ ಹೆಮ್ಮೆ ಎನಿಸುತ್ತದೆ. ಚಿಕ್ಕ ವಯಸ್ಸಿನಲ್ಲೇ ಮಾಡೆಲಿಂಗ್ ಮಾಡಿ ಅಲ್ಲಿ ಒಂದು ರೀತಿ ಸಾಧನೆ ಮಾಡಿ ಅದನ್ನು ಸಿನಿಮಾ ಮೂಲಕ ಬರಬೇಕು ಮಾಡಿದ್ದಾನೆ. ನನ್ನ ಊರಿನ ಹುಡುಗ ಅದು ವಿಶೇಷ. ಇಷ್ಟು ಎತ್ತರಕ್ಕೆ ಬೆಳೆಯುತ್ತಾನೆ. ಹಿರಿಯ ನಟರ ಹೊಗಳಿಕೆ ಪಾತ್ರರಾಗುತ್ತಾನೆ ಎಂದರೆ ನಮಗೆ, ನಮ್ಮ ಜಿಲ್ಲೆಗೂ ಹೆಮ್ಮೆ ಎಂದರು.

ನಟ ರೋಹಿತ್ ಮಾತನಾಡಿ, ಹಾರ್ಡ್ ವರ್ಕ್ ಮಾಡಿ‌ ಇಲ್ಲಿಗೆ ಬಂದಿದ್ದೇನೆ. ಥಿಯೇಟರ್ಸ್ ಮಾಡಿದೆ ಅಲ್ಲಿ‌ ಒಳ್ಳೆ ಪರ್ಫಾಮರ್ ಅಂತಾ ಹೆಸರು ಬಂತು. ಭಿಕ್ಷುಕ ರೋಲ್ ಮಾಡಿದೆ. ಅದೇ ರೋಲ್ ಹಿಟ್ ಆಯ್ತು. ಕನ್ನಡ ಚಿತ್ರರಂಗ ಒಂದು ಹೆಮ್ಮರ. ಈ ಹೆಮ್ಮರದಲ್ಲಿ ನಾನು ಒಂದು ಚಿಕ್ಕ ಹಸಿರು ಎಲೆಯಾಗಿದ್ದರೆ ನನ್ನ ಲೈಫ್ ಸಾರ್ಥಕ. ಉತ್ತರ ಕರ್ನಾಟಕಕ್ಕೆ ನೂರಾರು ವರ್ಷಗಳ ಕಲೆ ಇತಿಹಾಸವಿದೆ. ಬಹಳಷ್ಟು ಕಲಾವಿದರು ಬಂದಿದ್ದಾರೆ . ನಮ್ಮಲ್ಲಿ ಯಾರು ಹೀರೋ ಇಲ್ಲ ಎಂಬ ಕೊರಗು ಇದೆ. ಬಹಳಷ್ಟು ಕಲೆ ಇದೆ. ದಾರಿ ಗೊತ್ತಿಲ್ಲ. ನನ್ನಿಂದ ಹತ್ತಾರು ಜನರಿಗೆ ಆ ದಾರಿ ಕ್ರಿಯೇಟ್ ಆಯಿತು ಎಂದರೆ ನನ್ನ ಜೀವನದ ಆಯಶ ಎಂದುಅಭಿಪ್ರಾಯಪಟ್ಟರು.

ಇದನ್ನೂ ಓದಿ : ರಾಜ್ಯದಲ್ಲಿ ರಣಕೇಕೆ ಹಾಕ್ತಿದೆ ಡೇಂಜರ್​ ಡೆಂಘೀ – 12 ದಿನದಲ್ಲಿ 4000ಕ್ಕೂ ಹೆಚ್ಚು ಕೇಸ್ ಪತ್ತೆ..!

 

 

 

 

 

Leave a Comment

DG Ad

RELATED LATEST NEWS

Top Headlines

ನಕಲಿ ನಕ್ಷೆ ಸೃಷ್ಟಿಸಿ ಕಟ್ಟಡ ನಿರ್ಮಾಣ – ಮಾಲೀಕನ ವಿರುದ್ಧ FIR ದಾಖಲು..!

ಬೆಂಗಳೂರು : ಬಾಬುಸಾಬ್ ಪಾಳ್ಯ ಕಟ್ಟಡ ಕುಸಿತ ದುರಂತದ ಬೆನ್ನಲ್ಲೇ ಬಿಬಿಎಂಪಿ ಎಚ್ಚೆತ್ತುಕೊಂಡಿದೆ. ನಕಲಿ ನಕ್ಷೆ ತಯಾರಿಸಿ ಕಟ್ಟಡ ನಿರ್ಮಿಸಿರುವ ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ರಾಜರಾಜೇಶ್ವರಿನಗರ

Live Cricket

Add Your Heading Text Here