ಬೆಂಗಳೂರು : ರಾಜ್ಯದಲ್ಲಿ ಪಟಾಕಿ ದುರಂತದಿಂದ 17 ಜನರು ಬಲಿಯಾದರೂ ಸರ್ಕಾರ ಇನ್ನೂ ಎಚ್ಚೆತ್ತುಕೊಂಡಿಲ್ಲ. ಬೆಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ 8 ದಿನಗಳಲ್ಲಿ 250 ಕೋಟಿ ರೂ. ವಹಿವಾಟು ನಡೆಯಲಿದ್ದು, ಇದರಿಂದ ರಾಜ್ಯ ಸರ್ಕಾರಕ್ಕೆ ಒಂದು ರೂಪಾಯಿ ಆದಾಯವೂ ಇಲ್ಲ, ಬದಲಿಗೆ 34 ಕೋಟಿ ರೂ. ಆದಾಯ ನಷ್ಟವಾಗುತ್ತಿದೆ.
ಕನ್ನಡಿಗರ ಹಣ ತಮಿಳುನಾಡಿನ ಸರ್ಕಾರಕ್ಕೆ ಭರ್ಜರಿ ಆದಾಯ ತರುತ್ತಿದೆ. ಬೆಂಗಳೂರಿನಲ್ಲಿ ಕೇವಲ 30 ಪಟಾಕಿ ಮಾರಾಟದ ಅಂಗಡಿಗಳಿಗೆ ಮಾತ್ರ ಅನುಮತಿ ನೀಡಲಾಗಿದೆ. ಪಟಾಕಿ ಮಾರಾಟ ಮಳಿಗೆ ಮಾಲಿಕರು ಮತ್ತು ರಾಜ್ಯ ಸರ್ಕಾರದ ನಡುವೆ ಹೈಕೋರ್ಟ್‌ನಲ್ಲಿ ಪ್ರಕರಣವಿದ್ದು, ಹೈಕೋರ್ಟ್ ಮುಂದಿನ ವಿಚಾರಣೆಯ ದಿನಾಂಕದವರೆಗೆ ಪಟಾಕಿ ಮಾರಾಟಕ್ಕೆ ಅನುಮತಿ ನೀಡಿದೆ. ಸೆ.29 ರಂದು ಹೈಕೋರ್ಟ್ ಆದೇಶವಿತ್ತು, ಆದರೆ ಅಂದು ವಿಚಾರಣೆ ನಡೆಯದ ಕಾರಣ ಮುಂದಿನ ವಿಚಾರಣೆಯ ದಿನಾಂಕ ನಿಗದಿಪಡಿಸಲಾಗಿದೆ.
ಇನ್ನು ಪಟಾಕಿ ಮಾರಾಟ ಮಳಿಗೆಗಳಿಂದಾಗಿ ಬೆಂಗಳೂರಿನಲ್ಲಿ ವಾಯು ಮಾಲಿನ್ಯ ಹೆಚ್ಚಾಗುವ ಸಾಧ್ಯತೆ ಮತ್ತು ಬೆಂಗಳೂರು-ಹೊಸೂರು ರಸ್ತೆಯಲ್ಲಿ ಗಂಟೆಗಟ್ಟಲೆ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಕರ್ನಾಟಕ ಗಡಿಗೆ ಹೊಂದಿಕೊಂಡಂತೆ ಪಟಾಕಿ ಅಂಗಡಿಗಳ ನಿರ್ಮಾಣವಾಗಿದ್ದು, ಟೆಂಪೋ ಗೂಡ್ಸ್ ವಾಹನಗಳಲ್ಲಿ ಅಕ್ರಮವಾಗಿ ಪಟಾಕಿ ಸಾಗಾಣಿಕೆ ನಡೆಯುತ್ತಿದ್ದರೂ ಪೊಲೀಸ್, ಜಿಎಸ್‌ಟಿ ಮತ್ತು ಕಂದಾಯ ಇಲಾಖೆಗಳು ಕಣ್ಣುಮುಚ್ಚಿ ಕುಳಿತಿವೆ.
ಇದನ್ನೂ ಓದಿ : ಡಿಕೆಶಿ ಕಾರ್ಯಕ್ರಮದಲ್ಲಿ ಭಾರೀ ಹೈಡ್ರಾಮಾ.. ಏಯ್ ಕರಿ ಟೋಪಿ MLA ಬಾರಯ್ಯ ಇಲ್ಲಿ – ಗಣವೇಷಧಾರಿ ಮುನಿರತ್ನರನ್ನ ಕರೆದ ಡಿಸಿಎಂ!







