ಬೆಂಗಳೂರು : ದಾಸರಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಡುವ ಏಷ್ಯಾ ಖಂಡದ 2ನೇ ಅತಿ ದೊಡ್ಡ ಕೈಗಾರಿಕಾ ಪ್ರದೇಶವಾದ ಪೀಣ್ಯ ಕೈಗಾರಿಕಾ ಪ್ರದೇಶದ ರಸ್ತೆಗಳು ಸುಮಾರು 30 ವರ್ಷಗಳಿಂದ ಅಭಿವೃದ್ಧಿ ಕಂಡಿರಲಿಲ್ಲ. ಈ ಹಿನ್ನೆಲೆ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಆರ್.ಮಂಜುನಾಥ್ ಅವರು ತಮ್ಮ ಅವಧಿಯಲ್ಲಿ ಕೈಗಾರಿಕಾ ಪ್ರದೇಶವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ KSSIDC ವತಿಯಿಂದ ಸರ್ಕಾರದ ಮೇಲೆ ಒತ್ತಡ ತಂದು 2022ರಲ್ಲಿಯೇ 49.53ರೂ ಕೋಟಿ ಅನುದಾನವನ್ನು ಬಿಡುಗಡೆಗೊಳಿಸಿದ್ದರು.
ರಸ್ತೆಗಳಿಗೆ ಡಾಂಬರೀಕರಣ, ಕಾಂಕ್ರೀಟ್ ರಸ್ತೆ, ಒಳಚರಂಡಿ ಅಭಿವೃದ್ಧಿ, ಕಲ್ವರ್ಟ್, ಪುಟ್ ಪಾತ್, ಬೀದಿ ದೀಪಗಳ ಅಳವಡಿಕೆ ಹಾಗೂ ಇನ್ನಿತರ ಅಭಿವೃದ್ಧಿ ಕಾಮಗಾರಿಗಳಿಗೆ ಅಂದೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿದ್ದರು. ಆದರೆ, ಪೀಣ್ಯ ಕೈಗಾರಿಕಾ ಪ್ರದೇಶದ ಅಭಿವೃದ್ಧಿಗಾಗಿ ಬಿಡುಗಡೆಯಾದ ರೂ. 49.53 ಕೋಟಿ ಅನುದಾನವು ಬಳಕೆಯಾಗದಂತೆ ರಾಜಕೀಯ ದ್ವೇಷದಿಂದ ಕಳೆದ 4 ವರ್ಷಗಳು ಕಾಮಗಾರಿ ನಡೆಯದಂತೆ ನಿರಂತರವಾಗಿ ತಡೆ ಒಡ್ಡಲಾಗಿತ್ತು. ಇನ್ನೊಂದೆಡೆ ಕಾಮಗಾರಿಗಳನ್ನು ಪ್ರಾರಂಭಿಸಲು ಚುನಾವಣಾ ನೀತಿಸಂಹಿತೆ ಜಾರಿಯಾಗಿದ್ದವು.
ಆದರೆ ಪ್ರಸ್ತುತ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ನಡೆಯುತ್ತಿರುವ ಎಲ್ಲಾ ಅಭಿವೃದ್ಧಿ ಕಾಮಗಾರಿಗಳು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಆರ್.ಮಂಜುನಾಥ್ ಅವರು ತಮ್ಮ ಅವಧಿಯಲ್ಲಿ ಬಿಡುಗಡೆಗೊಳಿಸಿದ ಅನುದಾನದಿಂದ ಎಂಬುದು ಹೆಮ್ಮೆಯ ವಿಚಾರ. ಆರ್.ಮಂಜುನಾಥ್ ಪರಿಶ್ರಮದಿಂದಲೇ ಪೀಣ್ಯ ಕೈಗಾರಿಕಾ ಪ್ರದೇಶದ ಫೇಸ್-4ರ ಈ ಕೆಳಕಂಡ ವಿವಿಧ ಪ್ರದೇಶಗಳ ರಸ್ತೆಗಳು ಸಮಗ್ರ ಅಭಿವೃದ್ಧಿ ಕಾಣುತ್ತಿವೆ. ಇನ್ನು, ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಆರ್.ಮಂಜುನಾಥ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಅಭಿವೃದ್ಧಿಯಾಗುತ್ತಿರುವ ಸ್ಥಳಗಳಿವು..
- NTTF ಜಂಕ್ಷನ್ ನಿಂದ 14ನೇ ಕ್ರಾಸ್ ಜಂಕ್ಷನ್ ನವರಿಗೆ ಮುಖ್ಯರಸ್ತೆಯ ಅಭಿವೃದ್ಧಿ.
- ಪೀಣ್ಯ ಕೈಗಾರಿಕಾ ಪ್ರದೇಶದ 4ನೇ ಫೇಸ್ ಗೆ ಒಳಪಡುವ 6,7,8,9,10,11, 12,13,14ನೇ ಮುಖ್ಯರಸ್ತೆ ಮತ್ತು ಇದಕ್ಕೆ ಹೊಂದಿ ಕೊಂಡಿರುವ ಎಲ್ಲಾ ಅಡ್ಡ ರಸ್ತೆಗಳ ಅಭಿವೃದ್ಧಿ.
- ನಾರಾಯಣಪುರ ಬಸ್ ನಿಲ್ದಾಣ ಮತ್ತು ರೋಲಿಂಗ್ ಮಿಲ್ ಬಸ್ ನಿಲ್ದಾಣದ ಮಾರ್ಗವಾಗಿ ಗಣಪತಿ ನಗರ ಹಾಗೂ ರಾಜಗೋಪಾಲ ನಗರ ಮುಖ್ಯರಸ್ತೆಗೆ ಸಂಪರ್ಕಿಸುವ ಎಲ್ಲಾ ಅಡ್ಡರಸ್ತೆಗಳ ಅಭಿವೃದ್ಧಿ.
- ರೋಟರಿ ಉದ್ಯೋಗ್ ರಸ್ತೆ ಮತ್ತು ಬೃಂದಾವನ ರಸ್ತೆಯ ಡಾಂಬರೀಕರಣ ಮತ್ತು ಅಭಿವೃದ್ಧಿ.
- 14ನೇ ಕ್ರಾಸ್ ಜಂಕ್ಷನ್ ನಿಂದ ಪೀಣ್ಯ ಸಬ್ ರಿಜಿಸ್ಟರ್ ಕಚೇರಿಗೆ ಹೊಂದಿಕೊಂಡಿರುವ ಮುಖ್ಯರಸ್ತೆಯ ಡಾಂಬರೀಕರಣ ಮತ್ತು ಅಭಿವೃದ್ಧಿ.
- 14ನೇ ಕ್ರಾಸ್ ಜಂಕ್ಷನ್ ನಿಂದ ಭಟ್ರು ಹೋಟೆಲ್ ರಸ್ತೆ ಮಾರ್ಗವಾಗಿ ಹಾಗೂ ಶಿವಪುರ ಕೆರೆ ರಸ್ತೆ ಮಾರ್ಗವಾಗಿ BMTC ಬಸ್ ಡಿಪೋ-9ಕ್ಕೆ ಸಂಪರ್ಕಿಸುವ ರಸ್ತೆಗಳ ಡಾಂಬರೀಕರಣ ಮತ್ತು ಅಭಿವೃದ್ಧಿ.
- ಪೀಣ್ಯ ಕೈಗಾರಿಕಾ ಪ್ರದೇಶದ 4ನೇ ಫೇಸ್ ಗೆ ಒಳಪಡುವ ಇನ್ನಿತರೇ ಎಲ್ಲಾ ರಸ್ತೆಗಳ ಅಭಿವೃದ್ಧಿ.
ಇದನ್ನೂ ಓದಿ : ತಮಿಳುನಾಡಿಗೆ ಪ್ರತಿದಿನ 1TMC ನೀರು ಬಿಡಲು ಶಿಫಾರಸ್ಸು – ಸಿಎಂ ನೇತೃತ್ವದಲ್ಲಿ ತುರ್ತು ಸಭೆ ಕರೆದ ಡಿಕೆಶಿ..!