Download Our App

Follow us

Home » ಮೆಟ್ರೋ » ನಮ್ಮ ಮೆಟ್ರೋದಲ್ಲಿ ಅಪರ್ಣಾ ಧ್ವನಿ ಎಂದೆಂದೂ ಜೀವಂತ.. ಹೆಮ್ಮೆಯ ಕನ್ನಡತಿಗೆ BMRCLನಿಂದ ಸಂತಾಪ..!

ನಮ್ಮ ಮೆಟ್ರೋದಲ್ಲಿ ಅಪರ್ಣಾ ಧ್ವನಿ ಎಂದೆಂದೂ ಜೀವಂತ.. ಹೆಮ್ಮೆಯ ಕನ್ನಡತಿಗೆ BMRCLನಿಂದ ಸಂತಾಪ..!

ಬೆಂಗಳೂರೂ : ಕನ್ನಡದ ಖ್ಯಾತ ನಿರೂಪಕಿ, ನಟಿ ಅಪರ್ಣಾ ಜು.11ರಂದು ಬನಶಂಕರಿಯಲ್ಲಿರುವ ತಮ್ಮ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ. ಯಶಸ್ವಿ ನಿರೂಪಕಿಯಾಗಿ 3 ದಶಕಗಳ ವರೆಗೆ ಕನ್ನಡ ಸೇವೆ ಸಲ್ಲಿಸಿದ ಅಪರ್ಣಾ, 2014 ರಲ್ಲಿ ಬೆಂಗಳೂರಿನ “ನಮ್ಮ ಮೆಟ್ರೋ”ದಲ್ಲಿ ಘೋಷಣೆಯಾಗುವ ‘ಪ್ರಯಾಣಿಕರು ಹತ್ತುವ, ಮತ್ತು ಇಳಿಯುವ ಸೂಚನೆʼಗೆ ಧ್ವನಿ ಗೂಡಿಸಿದ್ದರು.

ಅಪರ್ಣಾ ನೀಡಿದ ಈ ಧ್ವನಿ ಮೆಟ್ರೋ ಪ್ರಯಾಣಿಕರ ಕಿವಿ ಹಾಗೂ ಮನಸ್ಸಿಗೆ ತಟ್ಟಿತ್ತು. ನಮ್ಮ ಮೆಟ್ರೋ ಅನೌನ್ಸ್​ಮೆಂಟ್​ ಸೇರಿದಂತೆ ಅನೇಕ ಪ್ರಕಟಣೆಗಳಿಗೆ ಅಪರ್ಣಾ ಅವರು ಧ್ವನಿ ನೀಡಿದ್ದರು. ಇಂದಿಗೂ ಮೆಟ್ರೋ ನಿಲ್ದಾಣ ಮತ್ತು ರೈಲುಗಳಲ್ಲಿ ಸೂಚನೆಗಳು ಅಪರ್ಣಾ ಅವರು ಧ್ವನಿಯಲ್ಲಿ ನಾವು ಕೇಳುತ್ತವೆ. “ರೈಲು ಈಗ ನಾಡಪ್ರಭು ಕೆಂಪೇಗೌಡ ನಿಲ್ದಾಣ ಮೆಜಸ್ಟಿಕ್​ಗೆ ತಲುಪಲಿದೆ​​, ಬಾಗಿಲುಗಳು ಎಡಕ್ಕೆ ತೆರೆಯಲಿವೆ” ಎಂಬ ಧ್ವನಿ ಅಪರ್ಣಾ ಅವರದ್ದು. ಇದೀಗ ಅಪರ್ಣಾರ ಧ್ವನಿ ಇದ್ದು, ಶರೀರ ಇಹಲೋಕ ತ್ಯಜಿಸಿದೆ. ನಿರೂಪಕಿ ಅಪರ್ಣಾ ಅವರಿಗೆ ಬಿಎಂಆರ್​ಸಿಎಲ್​ ಅಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.

ನಮ್ಮ ಮೆಟ್ರೋದಲ್ಲಿ ವಾಯ್ಸ್ ಅನೌನ್ಸ್ ಮಾಡವ ಮೂಲಕ ಗೌರವದ ಸಂತಾಪ ಸೂಚಿಸಿದ್ದಾರೆ. ಮೊದಲ ಬಾರಿಗೆ 2011ರ ಅಕ್ಟೋಬರ್ 20 ರಂದು ಎಂಜಿ ರೋಡ್​ನಿಂದ ಬೈಯ್ಯಪ್ಪನಹಳ್ಳಿ ಮೆಟ್ರೋ ಸಂಚಾರ ಆರಂಭಿಸಿದಾಗಿನಿಂದ ಇತ್ತೀಚೆಗೆ 2023ರ ಅಕ್ಟೋಬರ್​ 9 ರಂದು ಉದ್ಘಾಟನೆಗೊಂಡ ಕೆಂಗೇರಿಯಿಂದ ಚಲ್ಲಘಟ್ಟ, ಕೆ.ಆರ್ ಪುರನಿಂದ ಬೈಯ್ಯಪ್ಪನಹಳ್ಳಿ ಮೆಟ್ರೋ ರೈಲು ಮತ್ತು ನಿಲ್ದಾಣಗಳಲ್ಲಿ ನಟಿ ಅಪರ್ಣಾ ಧ್ವನಿ ನೀಡಿದ್ದರು.

ಈ ಹಿನ್ನೆಲೆಯಲ್ಲಿ ಬಿಎಂಆರ್​ಸಿಎಲ್​ ಅಧಿಕಾರಿಗಳು ಇಂದು ಅಪರ್ಣಾ ಅವರ ಮನೆಗೆ ತೆರಳಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಅಂತೆಯೇ ಎಲ್ಲ ಮೆಟ್ರೋ ರೈಲು ಮತ್ತು ನಿಲ್ದಾಣಗಳಲ್ಲಿ ಅಪರ್ಣಾ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಸ್ಥಳೀಯ ಅಧಿಕಾರಿಗಳಿಗೆ ಬಿಎಂಆರ್​ಸಿಎಲ್​ ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ ರಾವ್ ಸೂಚಿಸಿದ್ದಾರೆ.

ಇದನ್ನೂ ಓದಿ : ಮೌನಕ್ಕೆ ಜಾರಿದ ಮಾತುಗಾತಿಗೆ ಅಶ್ರುತರ್ಪಣ – ಕವನದ ಮೂಲಕ ಅಪರ್ಣಾಗೆ ಭಾವುಕ ವಿದಾಯ ಹೇಳಿದ ಪತಿ..!

Leave a Comment

DG Ad

RELATED LATEST NEWS

Top Headlines

ತೆರೆಮೇಲೆ ಅಬ್ಬರಿಸಿದ “ಬಘೀರ” – ಸೂಪರ್ ಹೀರೋ ಆದ ರೋರಿಂಗ್ ಸ್ಟಾರ್ ಶ್ರೀಮುರಳಿ..!

ರೋರಿಂಗ್ ಸ್ಟಾರ್ ಶ್ರೀಮುರಳಿ ನಟನೆಯ ಬಘೀರ ಸಿನಿಮಾ ಇಂದು ರಾಜ್ಯಾದ್ಯಂತ ಬಿಡುಗಡೆ ಆಗಿದೆ. ಹೊಂಬಾಳೆ ಫಿಲಂಸ್‌ ಬ್ಯಾನರ್‌ನಲ್ಲಿ ಮೂಡಿಬಂದ ಈ ಚಿತ್ರಕ್ಕೆ ಡಾ. ಸೂರಿ ನಿರ್ದೇಶನ ಮಾಡಿದ್ದಾರೆ.

Live Cricket

Add Your Heading Text Here