Download Our App

Follow us

Home » ಮೆಟ್ರೋ » ರೀಲ್ಸ್​ನಿಂದಲೇ ಫಜೀತಿಗೆ ಸಿಲುಕಿದ ನಾನು ನಂದಿನಿ ಖ್ಯಾತಿಯ ವಿಕಿಪೀಡಿಯ ವಿಕಾಸ್..!

ರೀಲ್ಸ್​ನಿಂದಲೇ ಫಜೀತಿಗೆ ಸಿಲುಕಿದ ನಾನು ನಂದಿನಿ ಖ್ಯಾತಿಯ ವಿಕಿಪೀಡಿಯ ವಿಕಾಸ್..!

ಬೆಂಗಳೂರು : ಸೋಶಿಯಲ್ ಮೀಡಿಯಾದಲ್ಲಿ ವಿಭಿನ್ನ ವಿಡಿಯೋವನ್ನು ಶೇರ್ ಮಾಡಿಕೊಂಡು ಸಖತ್​ ಸುದ್ದಿಯಲ್ಲಿ ಇರುತ್ತಿದ್ದ ಕಂಟೆಂಟ್ ಕ್ರಿಯೇಟರ್ ವಿಕ್ಕಿಪೀಡಿಯಾ ವಿಕಾಸ್​ಗೆ ಪೊಲೀಸರು ಶಾಕ್ ಕೊಟ್ಟಿದ್ದಾರೆ. ವಿಕ್ಕಿಪೀಡಿಯಾ ವಿಕಾಸ್ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಡ್ರಗ್ಸ್ ಪದ ಬಳಸಿದ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದರು. ಇದೇ ರೀಲ್ಸ್​ ಈಗ ಪೊಲೀಸ್ ಠಾಣೆ ಮೆಟ್ಟಿಲೇರುವಂತೆ ಮಾಡಿದೆ.

 

ವಿಡಿಯೋದಲ್ಲಿ ಡ್ರಗ್ಸ್ ಪದ ಬಳಕೆ ಮಾಡಿದ್ದಕ್ಕೆ ಸಾರ್ವಜನಿಕರೊಬ್ಬರ ಆಕ್ಷೇಪ ವ್ಯಕ್ತಪಡಿಸಿದ್ದರು. ಕಾಮೆಂಟ್ ಮಾಡಿ ಡ್ರಗ್ಸ್ ಪದ ಬಳಕೆಗೆ ಆಕ್ಷೇಪಿಸಿದ್ದರು. ಹಾಗಾಗಿ ಈ ಬಗ್ಗೆ ಬಿಸಿಪಿ ಸೋಷಿಯಲ್ ಮೀಡಿಯಾ ವಿಂಗ್ ನಿಂದ ಪರಿಶೀಲನೆ ಮಾಡಿದ್ದಾರೆ. ನಂತರ ಬೈಯ್ಯಪ್ಪನಹಳ್ಳಿ ಪೊಲೀಸರಿಗೆ ವಿಡಿಯೋ ಪರಿಶೀಲನೆ ನಡೆಸಿ ತೆಗೆಯುವಂತೆ ಸೂಚನೆ ನೀಡಿದೆ. ಹಾಗಾಗಿ ಪೊಲೀಸರು ಪೋನ್ ಮೂಲಕ ಸೂಚನೆ ನೀಡಿ ವಿಡಿಯೋ ತೆಗೆಸಿದ್ದಾರೆ.

ನಾನು ನಂದಿನಿ ಬೆಂಗಳೂರಿಗೆ ಬಂದೀನಿ ಸಾಂಗ್ ಮೂಲಕ ಫೇಮಸ್ ಆಗಿದ್ದರು ವಿಕಾಸ್. ವಿಭಿನ್ನ ಶೈಲಿಯಲ್ಲಿ ಕಂಟೆಂಟ್ ಕ್ರಿಯೇಟ್ ಮಾಡಿ ರೀಲ್ಸ್ ಮಾಡುತ್ತಿದ್ದರು. ವಿಕಾಸ್​ಗೆ ಇನ್​ಸ್ಟಾಗ್ರಾಮ್​​ ಖಾತೆಯಲ್ಲಿ 7 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಅನ್ನು ಹೊಂದಿದ್ದಾರೆ.

ಇದನ್ನೂ ಓದಿ : ವಾಲ್ಮೀಕಿ ಹಗರಣ ಕೇಸ್ – ಶಾಸಕ ದದ್ದಲ್​ ಮಾಜಿ PA ಪಂಪಣ್ಣ ಅರೆಸ್ಟ್..!

Leave a Comment

DG Ad

RELATED LATEST NEWS

Top Headlines

ಬಾಬುಸಾಬ್​​​​​​​​​​ಪಾಳ್ಯ ಕಟ್ಟಡ ದುರಂತ ಪ್ರಕರಣ – AE ವಿನಯ್​​ ಅಮಾನತು ಮಾಡಿ BBMP ಕಮಿಷನರ್​​ ಆದೇಶ..!

ಬೆಂಗಳೂರು : ಬಾಬುಸಾಬ್​​​​​​​​​​ಪಾಳ್ಯ ಕಟ್ಟಡ ದುರಂತ ಕೇಸ್​​ನಲ್ಲಿ ಮೊದಲ ತಲೆದಂಡವಾಗಿದೆ. ಹೊರಮಾವು ವಿಭಾಗ ಸಹಾಯಕ ಕಾರ್ಯ ನಿರ್ವಹಕ ಕೆ.ವಿನಯ್ ಅಮಾನತು ಮಾಡಿ BBMP ಕಮಿಷನರ್​​ ಆದೇಶ ಹೊರಡಿಸಿದ್ದಾರೆ.

Live Cricket

Add Your Heading Text Here