ಬೆಂಗಳೂರಲ್ಲಿ ಹಿಟ್ ಅಂಡ್ ರನ್​​ಗೆ ವಿದ್ಯಾರ್ಥಿನಿ ಬಲಿ!

ಬೆಂಗಳೂರು : ಬೆಂಗಳೂರಲ್ಲಿ ಹಿಟ್ ಅಂಡ್ ರನ್​​ಗೆ ವಿದ್ಯಾರ್ಥಿನಿ ಬಲಿಯಾಗಿದ್ದಾಳೆ. ಧನುಶ್ರೀ (22) ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ ಯುವತಿ.

ನಾರಾಯಣ ಮಠದ ನಿವಾಸಿಯಾಗಿರುವ ಮೃತ ಧನುಶ್ರೀ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿಕಾಂ ಓದುತ್ತಿದ್ದಳು. ಇಂದು ಬೆಳಗ್ಗೆ ಕಾಲೇಜಿಗೆ ಬೈಕ್​ನಲ್ಲಿ ತೆರಳುತ್ತಿದ್ದಾಗ ಈ ಭೀಕರ ಅಪಘಾತ ಸಂಭವಿಸಿದೆ. ರಸ್ತೆ ಗುಂಡಿಯನ್ನು ತಪ್ಪಿಸಲು ಹೋಗಿ ಟಿಪ್ಪರ್​ಗೆ ಡಿಕ್ಕಿ ಹೊಡೆದ ಶಂಕೆ ವ್ಯಕ್ತವಾಗಿದ್ದು, ಬೈಕ್​ನಿಂದ ಕೆಳಗೆ ಬಿದ್ದಾಗ ಧನುಶ್ರೀ ಮೇಲೆ ಟಿಪ್ಪರ್ ಹರಿದು ಸಾವನ್ನಪ್ಪಿದ್ದಾಳೆ.

ಧನುಶ್ರೀ ಮೇಲೆ ಟಿಪ್ಪರ್ ಹರಿಸಿ ಚಾಲಕ ಎಲ್ಲೂ ನಿಲ್ಲಿಸದೇ ಎಸ್ಕೇಪ್ ಆಗಿದ್ದು, ಘಟನಾ ಸ್ಥಳದಲ್ಲಿ ಕೆ.ಆರ್.ಪುರಂ ಟ್ರಾಫಿಕ್ & ಆವಲಹಳ್ಳಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ರಸ್ತೆಯಲ್ಲಿ ಗುಂಡಿ ಸಮಸ್ಯೆ ಹಿನ್ನೆಲೆ ಅಪಘಾತ ನಡೆದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು, ಈ ಸಂಬಂಧ ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ರಂಗಭೂಮಿ ಕಲಾವಿದ, ನಟ ಯಶವಂತ ಸರದೇಶಪಾಂಡೆ ವಿಧಿವಶ!

Btv Kannada
Author: Btv Kannada

Read More