Download Our App

Follow us

Home » ಮೆಟ್ರೋ » ಸಿಎಂ ಸಿದ್ದು ಪತ್ನಿ ವಿರುದ್ಧದ ಆರೋಪ ತಳ್ಳಿಹಾಕಿದ A.S ಪೊನ್ನಣ್ಣ..!

ಸಿಎಂ ಸಿದ್ದು ಪತ್ನಿ ವಿರುದ್ಧದ ಆರೋಪ ತಳ್ಳಿಹಾಕಿದ A.S ಪೊನ್ನಣ್ಣ..!

ಬೆಂಗಳೂರು : ಮೂಡಾ ಪ್ರಕರಣ ಸಂಬಂಧ ಸಿಎಂ ಸಿದ್ದು ಪತ್ನಿ ವಿರುದ್ಧದ ಎಲ್ಲಾ ಆರೋಪವನ್ನು ಶಾಸಕ ಹಾಗೂ ಸಿಎಂ ಕಾನೂನು ಸಲಹೆಗಾರ A.S.ಪೊನ್ನಣ್ಣ ಅವರು ತಳ್ಳಿಹಾಕಿದ್ದಾರೆ. ಈ ಸಂಬಂಧ A.S.ಪೊನ್ನಣ್ಣ ಪ್ರತಿಕ್ರಿಯಿಸಿ, ಯಾವುದೇ ಹಗರಣ ನಡೆದಿಲ್ಲ, ಎಲ್ಲವೂ ಪಾರದರ್ಶಕವಾಗಿದೆ, ಸಿಎಂ ಪತ್ನಿ ಪಾರ್ವತಿ ಅವ್ರಿಗೆ ಪರಿಹಾರ ಕೊಡುವಾಗ ಬಿಜೆಪಿ ಸರ್ಕಾರವೇ ಇತ್ತು. ಸಿಎಂ ಪತ್ನಿ ಪಾರ್ವತಿ 1,48,104 ಚದರ ಅಡಿ ಜಮೀನು ಕಳೆದುಕೊಂಡಿದ್ದಾರೆ, 38,284 ಚದರ ಅಡಿ ಪರಿಹಾರ ರೂಪದಲ್ಲಿ ಪಡೆದುಕೊಂಡಿದ್ದಾರೆ. ಕಳೆದುಕೊಂಡ ಜಮೀನಿನ ಮೌಲ್ಯವೇ 57 ಕೋಟಿ ಆಗುತ್ತೆ, ಆದ್ರೆ ಅವರಿಗೆ ಪರಿಹಾರ ರೂಪದಲ್ಲಿ ಸಿಕ್ಕ ಭೂಮಿ ಮೌಲ್ಯ 16 ಕೋಟಿ ಎಂದು ಹೇಳಿದ್ದಾರೆ.

ಈ ಬಗ್ಗೆ ಬೆಂಗಳೂರಿನಲ್ಲಿ A.S.ಪೊನ್ನಣ್ಣ ಮಾತನಾಡಿ, ಸಿಎಂ ಪತ್ನಿಗೆ ನೀಡಿರುವ ಪರಿಹಾರವನ್ನು ಬಿಜೆಪಿ ದೊಡ್ಡ ಹಗರಣ ಎನ್ನುತ್ತಿದೆ, ಬಿಜೆಪಿಯವರು ದುರುದ್ದೇಶದ ರಾಜಕಾರಣ ಮಾಡೋದನ್ನು ಬಿಡಲಿ. ಜನರು ಆಸ್ತಿಯನ್ನ ಕಳೆದುಕೊಂಡಾಗ ಅವರಿಗೆ ಪರಿಹಾರ ನೀಡಿದ್ದು ತಪ್ಪಾ..? ಸರ್ವೆ ನಂಬರ್ 416 ರಲ್ಲಿ 3.16 ಎಕರೆ ಜಾಗ ಮಲ್ಲಿಕಾರ್ಜುನ ಎಂಬುವರಿಗೆ ಸೇರಿದ್ದು. ಸಿಎಂ ಪತ್ನಿ ಸಹೋದರ ಈ ಭೂಮಿಯನ್ನು ಖರೀದಿ ಮಾಡಿದ್ದರು, ವ್ಯವಸಾಯಕ್ಕಾಗಿ ಭೂ ಪರಿವರ್ತನೆ ಮಾಡಿ ನಂತರ ಸೋದರಿಗೆ ದಾನವಾಗಿ ನೀಡಿದ್ರು ಎಂದಿದ್ದಾರೆ.

ಮುಡಾದವರು ಈ ಜಾಗವನ್ನು ಸೈಟ್​ ಹಂಚಿಕೆ ಉದ್ದೇಶಕ್ಕೆ ಬಳಸಿಕೊಂಡಿದ್ರು, ಭೂಮಿಗೆ ಪರಿಹಾರ ನೀಡಿ ಎಂದು ಪಾರ್ವತಿಯವರು ಮೂಡಾಗೆ ಪತ್ರ ಬರೆದಿದ್ದರು. ಪರಿಹಾರ ರೂಪದಲ್ಲಿ ಹಣ ಕೊಡುವ ಬದಲು ಸೈಟ್ ನೀಡಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ : ಯುವ​​-ಶ್ರೀದೇವಿ ಡಿವೋರ್ಸ್ ಕೇಸ್​ ವಿಚಾರಣೆ ಆ.23ಕ್ಕೆ ಮುಂದೂಡಿಕೆ..!

Leave a Comment

DG Ad

RELATED LATEST NEWS

Top Headlines

ಸಿಎಂ ಸಮ್ಮುಖದಲ್ಲೇ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ ನಕ್ಸಲರು – ಮುಂದಿನ ಕಾನೂನು ಪ್ರಕ್ರಿಯೆ ಏನಿರಲಿದೆ?

ಬೆಂಗಳೂರು: ‘ಬಂದೂಕಿನ ಮೂಲಕ ನ್ಯಾಯ’ ಪಡೆಯಲು ಪಶ್ಚಿಮ ಘಟ್ಟದಲ್ಲಿ ದಶಕಗಳ ಕಾಲ ಹೋರಾಟ ನಡೆಸಿದ್ದ 6 ನಕ್ಸಲರು ಶಸ್ತ್ರತ್ಯಾಗ ಮಾಡಿದ್ದಾರೆ. ಮುಖ್ಯವಾಹಿನಿಗೆ ಬರಲು ನಿರ್ಧರಿಸಿ ನಿನ್ನೆ ಸಿಎಂ

Live Cricket

Add Your Heading Text Here