Download Our App

Follow us

Home » ರಾಜಕೀಯ » ಇಂದು ಬಿಜೆಪಿಯ ಮಹತ್ವದ ರಾಜ್ಯ ಕಾರ್ಯಕಾರಣಿ ಸಭೆ – ಹಿರಿಯ ನಾಯಕ ನಿತಿನ್​ ಗಡ್ಕರಿ ಸೇರಿ ಹಲವರು ಭಾಗಿ..!

ಇಂದು ಬಿಜೆಪಿಯ ಮಹತ್ವದ ರಾಜ್ಯ ಕಾರ್ಯಕಾರಣಿ ಸಭೆ – ಹಿರಿಯ ನಾಯಕ ನಿತಿನ್​ ಗಡ್ಕರಿ ಸೇರಿ ಹಲವರು ಭಾಗಿ..!

ಬೆಂಗಳೂರು : ಇಂದು ರಾಜ್ಯ ಬಿಜೆಪಿಯ ಮಹತ್ವದ ಕಾರ್ಯಕಾರಿಣಿ ಸಭೆ ನಡೆಯಲಿದ್ದು, ಬೆಂಗಳೂರಿನ ಅರಮನೆ ಮೈದಾನದ ವೈಟ್ ಪೆಟಲ್ಸ್‌ನಲ್ಲಿ ಬೆಳಗ್ಗೆ 10.30ರಿಂದ ಸಭೆ ಆರಂಭವಾಗಲಿದೆ. ಲೋಕಸಭೆ ಚುನಾವಣೆ ಬಳಿಕ ನಡೆಯುತ್ತಿರುವ ಮೊದಲ ಕಾರ್ಯಕಾರಣಿ ಸಭೆ ಇದಾಗಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಪಕ್ಷ ನಾಯಕ ಆರ್​​.ಅಶೋಕ್​​​​ ನೇತೃತ್ವದಲ್ಲಿ ಸಭೆ ನಡೆಯುತ್ತಿದೆ.

ಸಭೆಯಲ್ಲಿ ಹಿರಿಯ ನಾಯಕ ನಿತಿನ್​ ಗಡ್ಕರಿ ಸೇರಿ ರಾಜ್ಯ ಚುನಾವಣ ಉಸ್ತುವಾರಿ ರಾಧಾಮೋಹನ್‌ ದಾಸ್‌ ಅಗರ್ವಾಲ್‌, ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ಮಾಜಿ ಸಿಎಂ ಡಿ.ವಿ. ಸದಾನಂದ ಗೌಡ, ಮಾಜಿ ಸಿಎಂ ಯಡಿಯೂರಪ್ಪ, ಸಂಸದ ಬಸವರಾಜ ಬೊಮ್ಮಾಯಿ ಸೇರಿದಂತೆ ಪ್ರಮುಖ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.

ಈ ಸಭೆಯಲ್ಲಿ ಉತ್ತರ ಕರ್ನಾಟಕದಲ್ಲಿ ಬಿಜೆಪಿಗೆ ಆದ ಹಿನ್ನಡೆ ಬಗ್ಗೆ ನಾಯಕರು ಚರ್ಚಿಸಲಿದ್ದಾರೆ. ಅಂತೆಯೇ ಜಿಪಂ, ತಾಪಂ & BBMP ಎಲೆಕ್ಷನ್​ಗಳ ತಯಾರಿ ಬಗ್ಗೆ ರಣತಂತ್ರ ರೂಪಿಸಲಿದ್ದಾರೆ. ಇನ್ನು 3ನೇ ಬಾರಿಗೆ ಪ್ರಧಾನಿಯಾಗಿರುವ ಮೋದಿ & NDA ಮೈತ್ರಿ ಕೂಟಕ್ಕೆ ಅಭಿನಂದನಾ ನಿರ್ಣಯ ಮಂಡಿಸಲಾಗುತ್ತದೆ.

ಕಾರ್ಯಕಾರಣಿಯಲ್ಲಿ ನಾಯಕರು ರಾಜ್ಯ ಸರ್ಕಾರದ ವೈಫಲ್ಯ, ಬೆಲೆ ಏರಿಕೆ & ಭ್ರಷ್ಟಾಚಾರ ಖಂಡಿಸುವ ಕುರಿತು ನಿರ್ಣಯ ತೆಗೆದುಕೊಳ್ಳಲಿದ್ದಾರೆ. ರಾಜ್ಯ ಸರ್ಕಾರದ ವಿರುದ್ಧ ಹೋರಾಟ ನಡೆಸುವ ರೂಪುರೇಷೆಯ ಬಗ್ಗೆ ಚರ್ಚಿಸಲಿದ್ದಾರೆ ಎನ್ನಲಾಗಿದೆ. ವಿಧಾನಪರಿಷತ್​ ವಿಪಕ್ಷ ನಾಯಕನ ಆಯ್ಕೆ ಸಂಬಂಧವೂ ಚರ್ಚೆ ನಡೆಯುವ ಸಾಧ್ಯತೆಯಿದೆ. ಲೋಕಸಭೆಯ ಸೋಲು ಗೆಲುವಿನ ಕಾರಣಗಳ ಬಗ್ಗೆಯೂ ಮಹತ್ವದ ಚರ್ಚೆ ನಡೆಯಲಿದೆ. ಒಟ್ಟಾರೆಯಾಗಿ ಪಕ್ಷ ಸಂಘಟನ ವ್ಯವಸ್ಥೆ ಹೇಗಿರಬೇಕೆಂಬ ಬಗ್ಗೆ ಚರ್ಚೆ ನಡೆಯಲಿದೆ.

ಇದನ್ನೂ ಓದಿ : ತವರಿಗೆ ಬಂದ ವಿಶ್ವ ವಿಜೇತರಿಗೆ ಭವ್ಯ ಸ್ವಾಗತ – ಇಂದು ವಾಣಿಜ್ಯ ನಗರಿಯಲ್ಲಿ ವಿಜಯ ಯಾತ್ರೆ, ಟ್ರೋಫಿ ಜೊತೆಗೆ ಸಂಭ್ರಮಾಚರಣೆ..!

 

 

 

 

 

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here