Download Our App

Follow us

Home » ಅಪರಾಧ » ಜೆಡಿಎಸ್​ MLC ಸೂರಜ್ ರೇವಣ್ಣಗೆ ಮತ್ತೆ ನ್ಯಾಯಾಂಗ ಬಂಧನ..!

ಜೆಡಿಎಸ್​ MLC ಸೂರಜ್ ರೇವಣ್ಣಗೆ ಮತ್ತೆ ನ್ಯಾಯಾಂಗ ಬಂಧನ..!

 ಬೆಂಗಳೂರು : ಸಲಿಂಗಕಾಮ ಪ್ರಕರಣ ಸಂಬಂಧವಾಗಿ ಜೆಡಿಎಸ್​ MLC ಸೂರಜ್ ರೇವಣ್ಣಗೆ ಕೋರ್ಟ್​ ಮತ್ತೆ ನ್ಯಾಯಾಂಗ ಬಂಧನ ವಿಧಿಸಿದೆ. ಇಂದು ಕಸ್ಟಡಿ ಅಂತ್ಯ ಹಿನ್ನೆಲೆ ಸೂರಜ್​​ನ್ನು ಪೊಲೀಸರು ಕೋರ್ಟ್​ಗೆ ಹಾಜರುಪಡಿಸಿದ್ದರು. ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯವು ಸೂರಜ್ ರೇವಣ್ಣಗೆ ಜುಲೈ 18ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಸೂರಜ್ ಮತ್ತೆ ಪರಪ್ಪನ ಅಗ್ರಹಾರ ಜೈಲು ಪಾಲಾಗಿದ್ದಾರೆ. ಸೂರಜ್ ರೇವಣ್ಣ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆಯನ್ನು ಕೋರ್ಟ್​ ನಾಳೆಗೆ ಮುಂದೂಡಿದೆ.

ಸಲಿಂಗಕಾಮ ಪ್ರಕರಣದಲ್ಲಿ ಪೊಲೀಸರು ಬಂಧಿಸಿ ಕೋರ್ಟ್​ಗೆ ಹಾಜರುಪಡಿಸಿದ್ದಾಗ ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಿದ್ದರು. ಬಳಿಕ ಈ ಪ್ರಕರಣದ ಬಗ್ಗೆ ತನಿಖೆ ನಡೆಸಲು ಆರೋಪಿ ಸೂರಜ್ ರೇವಣ್ಣನನ್ನು ತಮ್ಮ ವಶಕ್ಕೆ ನೀಡುವಂತೆ ಕೋರ್ಟ್​ಗೆ ಮನವಿ ಮಾಡಿದ್ದರು.

ಈ ಹಿನ್ನೆಲೆಯಲ್ಲಿ ಕೋರ್ಟ್, ನ್ಯಾಯಾಂಗ ಬಂಧನದಲ್ಲಿದ್ದ ಸೂರಜ್ ರೇವಣ್ಣನನ್ನು ಜುಲೈ 03ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿತ್ತು. ಅದರಂತೆ ಇಂದು ಕಸ್ಟಡಿ ಮುಗಿದಿದ್ದರಿಂದ ಸೂರಜ್​ನನ್ನು ಪೊಲೀಸರು ಕೋರ್ಟ್​ಗೆ ಹಾಜರುಪಡಿಸಿದ್ದು, ಇದೀಗ ಕೋರ್ಟ್​ ಜುಲೈ 18ರ ವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿದೆ. ಈಗಾಗಲೇ ಅವರ ಸಹೋದರ ಪ್ರಜ್ವಲ್ ಕೂಡ ಇದೇ ಜೈಲಿನಲ್ಲಿದ್ದಾರೆ.

ಇದನ್ನೂ ಓದಿ : ಭ್ರಷ್ಟಾಚಾರ ಮಟ್ಟ ಹಾಕಲೆಂದೇ ಬಂದಿದ್ದೇನೆ : ರಾಜ್ಯಸಭೆಯಲ್ಲಿ ಅಬ್ಬರಿಸಿದ ಪ್ರಧಾನಿ ಮೋದಿ..!

Leave a Comment

DG Ad

RELATED LATEST NEWS

Top Headlines

MLA ಮುನಿರತ್ನ ವಿರುದ್ಧ ರೇಪ್ ಆರೋಪದ ಬೆನ್ನಲ್ಲೇ ಮಾಜಿ ಕಾರ್ಪೊರೇಟರ್ ಪತಿಯ ಹನಿಟ್ರ್ಯಾಪ್ ವಿಡಿಯೋ ವೈರಲ್..!

ಬೆಂಗಳೂರು : ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಬಿಜೆಪಿ ಶಾಸಕ ಮುನಿರತ್ನ ಸೇರಿ ಏಳು ಮಂದಿಯ ವಿರುದ್ಧ ರಾಮನಗರ ಜಿಲ್ಲಾ ವ್ಯಾಪ್ತಿಯ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ

Live Cricket

Add Your Heading Text Here