ಕ್ರೈಂ ರೇಟ್ ಇಳಿಕೆ.. ಜನರಲ್ಲಿ ಸುರಕ್ಷತಾ ಭಾವ, ಹೆಚ್ಚಾಯ್ತು ‘ಖಾಕಿ’ ಬೀಟ್.. ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಆಡಳಿತದಲ್ಲಿ ಬೆಂಗಳೂರು ಸೇಫ್ ಸಿಟಿ!

ಬೆಂಗಳೂರು : ರಾಜಧಾನಿ ಬೆಂಗಳೂರಿನ ಕಾಲೇಜು ಕ್ಯಾಂಪಸ್‌ಗಳು, ಟೆಕ್ ಹಬ್‌ಗಳು, ಜನ ಕಿಕ್ಕಿರಿದು ಸೇರುವ ಬಜಾರ್‌ಗಳು ಮತ್ತು ವಾಸಸ್ಥಳಗಳಲ್ಲಿ ನಾಗರಿಕರು ಸುರಕ್ಷತೆಯ ಬಗ್ಗೆ ಈಗೀಗಾ ಹೊಸ ನಂಬಿಕೆ ಬೆಳೆಸಿಕೊಂಡಿದ್ದಾರೆ. ಈ ಬದಲಾವಣೆಯ ಹಿಂದಿನ ಮುಖ್ಯ ಶಕ್ತಿ ಎಂದರೇ ಅದುವೇ ಖಡಕ್​ ಐಪಿಎಸ್ ಅಧಿಕಾರಿ, ಪ್ರಸ್ತುತ ಬೆಂಗಳೂರು ನಗರ ಪೊಲೀಸ್ ಕಮಿಷನರ್​ ಆಗಿರುವ ಸೀಮಂತ್ ಕುಮಾರ್ ಸಿಂಗ್.

ಬೆಂಗಳೂರು ನಗರ ಪೊಲೀಸ್ ಕಮಿಷನರ್​ ಸೀಮಂತ್ ಕುಮಾರ್ ಸಿಂಗ್
ಬೆಂಗಳೂರು ನಗರ ಪೊಲೀಸ್ ಕಮಿಷನರ್​ ಸೀಮಂತ್ ಕುಮಾರ್ ಸಿಂಗ್

ಹೌದು.. ನಗರ ಪೊಲೀಸ್ ಕಮಿಷನರ್​ ಆಗಿರುವ ಸೀಮಂತ್ ಕುಮಾರ್ ಸಿಂಗ್​ ಅವರ ನಾಯಕತ್ವದಲ್ಲಿ, ನಗರದ ಕಾನೂನು ಮತ್ತು ಸುವ್ಯವಸ್ಥೆ ದೃಢವಾಗಿ ಬದಲಾಗಿದೆ. ಕಮಿಷನರ್​ ಸೀಮಂತ್ ಕುಮಾರ್ ಸಿಂಗ್ ಅಧಿಕಾರ ಸ್ವೀಕರಿಸಿದ ಬಳಿಕ ಸಿಲಿಕಾನ್​​ ಸಿಟಿ ಬೆಂಗಳೂರಿನಲ್ಲಿ ವಿವಿಧ ಅಪರಾಧ ವಿಭಾಗಗಳಲ್ಲಿ ಇಳಿಕೆ ಕಂಡುಬಂದಿದ್ದು, ಡ್ರಗ್ಸ್​​ ಮಾಫಿಯಾ, ಚೈನ್ ಸ್ನಾಚಿಂಗ್, ಸಣ್ಣಪುಟ್ಟ ಕಳ್ಳತನಗಳು ಮತ್ತು ಸಾರ್ವಜನಿಕ ಗಲಭೆಗಳು ಹೀಗೆ ಎಲ್ಲಾ ರೀತಿಯ ಅಪರಾಧಗಳು ಕೃತ್ಯಗಳು ಕಡಿಮೆಯಾಗಿವೆ. ಈ ಮೂಲಕ ಕಳೆದ ಕೆಲವು ತಿಂಗಳುಗಳಲ್ಲಿ ಬೆಂಗಳೂರು ನಗರವು ಸ್ಪಷ್ಟವಾದ ಪರಿವರ್ತನೆಯನ್ನು ಕಂಡಿದೆ ಎಂದರೆ ತಪ್ಪಾಗಲಾರದು.

ಕಮಿಷನರ್​​ ಸೀಮಂತ್ ಕುಮಾರ್ ಸಿಂಗ್ ಮಧ್ಯರಾತ್ರಿ ಗಸ್ತು ಕಾರ್ಯಚರಣೆ
ಕಮಿಷನರ್​​ ಸೀಮಂತ್ ಕುಮಾರ್ ಸಿಂಗ್ ಮಧ್ಯರಾತ್ರಿ ಗಸ್ತು ಕಾರ್ಯಚರಣೆ

ಅಷ್ಟೇ ಅಲ್ಲದೇ, ಕಮಿಷನರ್​ ಸೀಮಂತ್ ಕುಮಾರ್ ಸಿಂಗ್ ಅವರ ಆಡಳಿತದಲ್ಲಿ ಜನಕೇಂದ್ರಿತ ಪೊಲೀಸ್ ಕ್ರಮಗಳು, ಮಾದಕವಸ್ತು ವಿರೋಧಿ ಅಭಿಯಾನಗಳು, ಹಾಗೂ ನಿಷ್ಠೆಯ ಗಸ್ತು ಕಾರ್ಯಗಳು ನಗರವನ್ನು ಹೊಸ ದಿಕ್ಕಿನಲ್ಲಿ ಮುನ್ನಡೆಸುತ್ತಿವೆ. ಆಂತರಿಕವಾಗಿ ನಗರದಲ್ಲಿ ಕಮಿಷನರ್​ ಸೀಮಂತ್ ಕುಮಾರ್ ಸಿಂಗ್ ಅವರು ಜವಾಬ್ದಾರಿಯ ಸಂಸ್ಕೃತಿಯನ್ನು ರೂಪಿಸಿದ್ದಾರೆ.

ಮತ್ತೊಂದೆಡೆ ಸಿಲಿಕಾನ್​​ ಸಿಟಿ ಮಂದಿಯಲ್ಲಿ ಒಂದು ಸಾಮಾನ್ಯ ಭಾವನೆ ಬೆಳೆದಿದೆ. ಅದು ಏನಂದ್ರೆ, ಬೆಂಗಳೂರು ಇಷ್ಟು ವರ್ಷಗಳಲ್ಲಿ ಎಂದಿಗೂ ಇಷ್ಟು ಸುರಕ್ಷಿತವಾಗಿರಲಿಲ್ಲ ಎಂಬುವುದು. ಕಮಿಷನರ್​ ಸೀಮಂತ್ ಕುಮಾರ್ ಸಿಂಗ್ ಅವರ ಆಡಳಿತವು ಜನರವ ಸುರಕ್ಷತೆಗೆ ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದು, ನಗರದ ಅಗತ್ಯಗಳಿಗೆ ಕೂಡಲೇ ಸ್ಪಂದಿಸುತ್ತಿದೆ.

ಇದನ್ನೂ ಓದಿ : ಹಿರಿಯ ಸಾಹಿತಿ ಎಸ್​​.ಎಲ್​​​ ಭೈರಪ್ಪ ನಿಧನಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಂಬನಿ!

Btv Kannada
Author: Btv Kannada

Read More