ಲಾಕಾಸ್ ಪಬ್ ಮ್ಯಾನೇಜರ್​ನಿಂದ ಬಾಲಕಿಗೆ ಸೆಕ್ಸ್ ಟಾರ್ಚರ್ – ಕ್ರಮ ಕೈಗೊಳ್ಳಲು ಬೆಳ್ಳಂದೂರು ಸಬ್ ಇನ್ಸ್​ಪೆಕ್ಟರ್ ಕಿಶನ್ ರಾಮಯ್ಯ ನಿರ್ಲಕ್ಷ್ಯ!

ಬೆಂಗಳೂರು : ಬೆಂಗಳೂರಿನ ಲಾಕಾಸ್ ಪಬ್ ಮ್ಯಾನೇಜರ್ ಎಳನೀರು ಮಾರಾಟ ಮಾಡುವ 13 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ. ಈ ಸಂಬಂಧ ಲಕಾಸ್ ಪಬ್ ಮ್ಯಾನೇಜರ್ ಜೋಸೆಫ್ ಎಂಬಾತನ ವಿರುದ್ದ ಬೆಳ್ಳಂದೂರು ಪೊಲೀಸ್​ ಠಾಣೆಗೆ ದೂರು ನೀಡಲಾಗಿದೆ.

ಮ್ಯಾನೇಜರ್ ಜೋಸೆಫ್ ವಿರುದ್ಧ ದೂರು ನೀಡಿದ್ರೂ ಕೂಡ ಪೊಲೀಸರು ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಘಟನೆ ಬಗ್ಗೆ ದೂರು ನೀಡಿ 24 ಗಂಟೆ ಕಳೆದರೂ ಬೆಳ್ಳಂದೂರು ಸಬ್ ಇನ್ಸ್​​ಪೆಕ್ಟರ್​​ ಕಿಶನ್ ರಾಮಯ್ಯ ಆಕ್ಷನ್​ ತಗೆದುಕೊಳ್ಳದೇ ನಿರ್ಲಕ್ಷ್ಯ ತೋರಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಬೆಳ್ಳಂದೂರು ಸಬ್ ಇನ್ಸ್​​ಪೆಕ್ಟರ್​​ ಕಿಶನ್ ರಾಮಯ್ಯ
ಬೆಳ್ಳಂದೂರು ಸಬ್ ಇನ್ಸ್​​ಪೆಕ್ಟರ್​​ ಕಿಶನ್ ರಾಮಯ್ಯ

ಸಬ್​​ ಇನ್ಸ್​ಪೆಕ್ಟರ್ ಕಿಶನ್ ರಾಮಯ್ಯ ವಿರುದ್ಧ ಮಹಿಳಾ ವಕೀಲೆ ಗಿರಿಜಾ ಗಂಭೀರ ಆರೋಪ ಮಾಡಿದ್ದು, ಈ ಕೂಡಲೇ  ಪಬ್ ಮ್ಯಾನೇಜರ್ ಜೋಸೆಫ್​​ನನ್ನು ಬಂಧಿಸಿ ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ.

ವಕೀಲೆ ಗಿರಿಜಾ
ವಕೀಲೆ ಗಿರಿಜಾ

ಇದನ್ನೂ ಓದಿ : ಕೋಟಿ ಕೋಟಿ ಲೂಟಿ ಮಾಡಿದ PES ಶಿಕ್ಷಣ ಸಂಸ್ಥೆ ಮೇಲೆ ಬೆಳ್ಳಂಬೆಳಗ್ಗೆ IT ದಾಳಿ!

Btv Kannada
Author: Btv Kannada

Read More