ಬೆಂಗಳೂರು : ರೋಡ್ ರೇಜ್ ಮಾಡುವವರಿಗೆ ಸಂಚಾರಿ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಆಗಿದ್ದ ವಿಡೀಯೊ ಪರಿಶೀಲನೆ ನಡೆಸಿದ ಪೊಲೀಸರು ಸುಮೊಟೋ ಕೇಸ್ ದಾಖಲಿಸಿ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ. 30 ವರ್ಷದ ಉದಯನ್ ಬಂಧಿತ ಆರೋಪಿ.
ಬಂಧಿತ ಆರೋಪಿ ಉದಯನ್ ಮುಖ್ಯ ರಸ್ತೆಯಲ್ಲಿ ರಾಂಗ್ ಪಾರ್ಕಿಂಗ್ ಮಾಡಿದಲ್ಲದೆ, ಹೆಬ್ಬಾಳ, ಯಲಹಂಕ ಮುಖ್ಯರಸ್ತೆಯಲ್ಲಿ ಹಿಮ್ಮುಖ ಚಾಲನೆ ಮಾಡಿದ್ದನು. ನಂತರ ದ್ವಿಚಕ್ರವಾಹನ ಸವಾರನ ಮೇಲೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆಗೆ ನಡೆಸಿದ್ದನು.
ಸಂಚಾರ ನಿಯಮ ಉಲ್ಲಂಘಿಸಿದಲ್ಲದೆ ಹಲ್ಲೆ ನಡೆಸಿದ್ದ ಕಾರು ಚಾಲಕನ ದುರ್ವತನೆಗೆ ವ್ಯಾಪಕ ಟೀಕೆಗೊಳಗಾಗಿತ್ತು. ಈ ಹಿನ್ನಲೆ ಹೆಬ್ಬಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದೀಗ ಕಾರು ನಂಬರ್ ಆಧರಿಸಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಇದನ್ನೂ ಓದಿ : ಮಂಡ್ಯದಲ್ಲಿ ಚಾಲಕನ ಕಂಟ್ರೋಲ್ ತಪ್ಪಿ ಹಳ್ಳಕ್ಕೆ ಉರುಳಿದ KSRTC ಬಸ್ – 30 ಮಂದಿ ಗ್ರೇಟ್ ಎಸ್ಕೇಪ್..!
Post Views: 25