ಬೆಂಗಳೂರು : ಅಕ್ಕ-ತಮ್ಮನ ಜಗಳದಿಂದಾಗಿ ಬಿಗ್ಬಾಸ್ ಖ್ಯಾತಿಯ ರಂಜಿತ್ ಕುಟುಂಬ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ತಂದೆಯವರ ಫ್ಲಾಟ್ನಲ್ಲಿ ಇಬ್ಬರಿಗೂ ಪಾಲು ಬೇಕು ಎಂದು ಪರಸ್ಪರ ದೂರು ನೀಡಿದ್ದಾರೆ.

ರಂಜಿತ್ ಹಾಗೂ ಅವರ ಅಕ್ಕ ಅಮೃತಹಳ್ಳಿ ಪೊಲೀಸ್ ಠಾಣೆಗೆ ಬಂದು ದೂರು ಕೊಟ್ಟಿದ್ದಾರೆ. ನಂತರ ಪೊಲೀಸರು ಎನ್ಸಿಆರ್ ದಾಖಲು ಮಾಡಿ ಕಳುಹಿಸಿದ್ದಾರೆ. ಫ್ಲಾಟ್ ವಿಚಾರವಾಗಿರುವುದರಿಂದ ಕೋರ್ಟ್ ಮೂಲಕ ಬಗೆಹರಿಸಿಕೊಳ್ಳುವಂತೆ ಸೂಚನೆ ನೀಡಿದ್ದಾರೆ.

ಈ ಹಿಂದೆ ಇಡೀ ಕುಟುಂಬ ಅದೇ ಫ್ಲಾಟ್ನಲ್ಲಿ ವಾಸವಿತ್ತು. ಇತ್ತೀಚೆಗೆ ಅಕ್ಕ ಬೇರೆ ಹೋಗಿದ್ದಾರೆ. ಈ ಮನೆಯಲ್ಲಿ ತನಗೂ ಪಾಲಿದೆ ಎಂದು ಇಬ್ಬರು ವಾದ ಮಾಡಿಕೊಂಡು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಇಬ್ಬರಿಗೂ ಬುದ್ಧಿ ಹೇಳಿ ಕೋರ್ಟ್ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಪೊಲೀಸರು ಸೂಚಿಸಿದ್ದಾರೆ.
ಇದನ್ನೂ ಓದಿ : ‘ಜಾಲಿ LLB 3’ ಸಿನಿಮಾ ಪ್ರದರ್ಶನ ತಡೆ ಕೋರಿದ್ದ ಅರ್ಜಿ ವಜಾ – 50 ಸಾವಿರ ದಂಡ ವಿಧಿಸಿದ ಹೈಕೋರ್ಟ್!
Author: Btv Kannada
Post Views: 464







