Download Our App

Follow us

Home » ಮೆಟ್ರೋ » ಬೆಂಗಳೂರಿಗೆ ಡೇಂಜರ್​ ಆಗ್ತಿದೆ ಡೆಂಘೀ – ಒಂದಲ್ಲಾ.. ಎರಡಲ್ಲಾ.. 20 ದಿನದಲ್ಲಿ 1000 ಕೇಸ್​..!

ಬೆಂಗಳೂರಿಗೆ ಡೇಂಜರ್​ ಆಗ್ತಿದೆ ಡೆಂಘೀ – ಒಂದಲ್ಲಾ.. ಎರಡಲ್ಲಾ.. 20 ದಿನದಲ್ಲಿ 1000 ಕೇಸ್​..!

ಬೆಂಗಳೂರು : ಐಟಿ ಸಿಟಿ ಬೆಂಗಳೂರಿನಲ್ಲಿ ಡೆಂಘೀ ಜ್ವರದ ಹಾವಳಿ ಹೆಚ್ಚಾಗಿದೆ. ಕೇವಲ 20 ದಿನಗಳಲ್ಲಿ ಸಾವಿರಕ್ಕೂ ಹೆಚ್ಚು ಜನರಲ್ಲಿ ಈ ಕಾಯಿಲೆ ಆವರಿಸಿದ್ದು, ಹೆಚ್ಚಿನ ಆತಂಕಕ್ಕೆ ಕಾರಣವಾಗಿದೆ. ಕಳೆದ ಆರು ತಿಂಗಳಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ 2457 ಡೆಂಘೀ ಪ್ರಕರಣ ದಾಖಲಾಗಿದೆ.

ಬೆಂಗಳೂರಲ್ಲಿ ಕೇವಲ 20 ದಿನಗಳಲ್ಲಿ ಅಂದರೆ ಜೂನ್‌ 1ರಿಂದ ಜೂ.20ರವರೆಗೆ 1246 ಡೆಂಘೀ ಪ್ರಕರಣ ದಾಖಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಡೆಂಘೀ ಜ್ವರ ಶೇ.41ರಷ್ಟು ಹೆಚ್ಚಳವಾಗಿದೆ. ರಾಜ್ಯದಲ್ಲಿ ಒಟ್ಟು 4,886 ಜನರಿಗೆ ಡೆಂಘೀ ದೃಢಪಟ್ಟಿದೆ. ಆರೋಗ್ಯ ಇಲಾಖೆ ಈವರೆಗೆ 39,235 ಜನರ ರಕ್ತದ ಮಾದರಿ ಪರೀಕ್ಷೆ ಮಾಡಿದೆ.

ಇನ್ನು ಬೆಂಗಳುರಲ್ಲಿ ಜನವರಿಯಿಂದ ಇಲ್ಲಿವರೆಗೆ 109 ಜನರಲ್ಲಿ ಚಿಕೂನ್‌ಗುನ್ಯಾ ಹಾಗೂ ಐವರಲ್ಲಿ ಮಲೇರಿಯಾ ಪತ್ತೆಯಾಗಿದೆ. ನೆಗಡಿ, ಕೆಮ್ಮು ಜ್ವರ ಒಳಗೊಂಡ ವೈರಲ್‌ ಫೀವರ್‌ 1500ಕ್ಕೂ ಹೆಚ್ಚು ಜನರಲ್ಲಿ ಕೂಡ ಕಾಣಿಸಿಕೊಂಡಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ವಿಕ್ಟೋರಿಯಾ, ಬೌರಿಂಗ್​​, ಕೆಸಿ ಜನರಲ್​​​ ಸೇರಿ ಹಲವು ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಡೆಂಘೀ ಕೇಸ್​ ಹೆಚ್ಚಾಗುತ್ತಿದ್ದಂತೆ ರಾಜ್ಯ ಸರ್ಕಾರವೂ ಅಲರ್ಟ್​ ಆಗಿದ್ದು, ಇಂದು ಸಂಜೆ ಸಿಎಂ ಸಿದ್ದರಾಮಯ್ಯ ಮಹ್ವತದ ಮೀಟಿಂಗ್​ ಕರೆದಿದ್ದಾರೆ. ಸಂಜೆ 4.30ಕ್ಕೆ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮೀಟಿಂಗ್ ನಡೆಯಲಿದ್ದು, ಬಿಬಿಎಂಪಿ, ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಡೆಂಘೀ ನಿಯಂತ್ರಣ ಕ್ರಮಗಳ ಬಗ್ಗೆ ಸಿಎಂ ಸೂಚನೆ ನೀಡಲಿದ್ದಾರೆ.

 ಡೆಂಘೀ ಪ್ರಕರಣ ( ಜೂನ್‌1-ಜೂ.20)

  • ಮಹದೇವಪುರ ವಲಯ – 328 ಕೇಸ್​
  • ಬೊಮ್ಮನಹಳ್ಳಿ – 113
  • ಬೆಂಗಳೂರು ಪೂರ್ವ – 236
  • ಬೆಂಗಳೂರು ದಕ್ಷಿಣ -113
  • ಯಲಹಂಕ – 90
  • ಬೆಂಗಳೂರು ಪಶ್ಚಿಮ -77
  • ಆರ್​.ಆರ್​​.ನಗರ – 83

ಇದನ್ನೂ ಓದಿ : ರಾಜ್ಯದ ಜನರಿಗೆ ಮಿಲ್ಕ್​ ಶಾಕ್ ​​​: ನಂದಿನಿ ಹಾಲಿನ ದರ ಏರಿಕೆ – ಎಷ್ಟು ರೂ. ಗೊತ್ತಾ?

 

 

 

 

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here