ಬೆಂಗಳೂರು : ಸತತ ಬೆಲೆ ಏರಿಕೆಯಿಂದ ತತ್ತರಿಸಿರುವ ರಾಜ್ಯದ ಜನತೆಗೆ ಸರ್ಕಾರ ಮತ್ತೊಂದು ಆಘಾತ ನೀಡಿದೆ. ನಂದಿನಿ ಹಾಲಿನ ದರ ಹೆಚ್ಚಿಸಿ ಕೆಎಂಎಫ್ (KMF) ಮಹತ್ವದ ನಿರ್ಧಾರ ಪ್ರಕಟಿಸಿದೆ. ಕೆಎಂಎಫ್ ಮುಖ್ಯ ಕಚೇರಿಯಲ್ಲಿ ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ ಸುದ್ದಿಗೋಷ್ಠಿ ನಡೆಸಿ ದರ ಹೆಚ್ಚಳದ ಬಗ್ಗೆ ಮಾಹಿತಿ ನೀಡಿದ್ದಾರೆ.
ಒಂದು ಲೀಟರ್ ನಂದಿನಿ ಹಾಲಿನ ಪ್ಯಾಕೆಟ್ಗೆ 50 ಎಂಎಲ್ ಹಾಲು ಹೆಚ್ಚುವರಿಯಾಗಿ ಸೇರಿಸಲಾಗುವುದು. ಸದ್ಯ ಲೀಟರ್ ಹಾಲಿಗೆ ಇರುವ 42 ರೂಪಾಯಿ ಇರುವ ದರವನ್ನು 2 ರೂಪಾಯಿ ಹೆಚ್ಚಳ ಮಾಡಲಾಗುವುದು. ನಾಳೆಯಿಂದ ಈ ದರ ನಾಳೆಯಿಂದ ಅನ್ವಯವಾಗಲಿದೆ ಎಂದು ಭೀಮಾನಾಯ್ಕ್ ತಿಳಿಸಿದರು. ಕೆಎಂಎಫ್ ಎಂಡಿ ಎಂಕೆ ಜಗದೀಶ್, ಆಡಳಿತ ಮಂಡಳಿ ಸದಸ್ಯರು ಸಹ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದರು.
ಹಾಲಿನ ಹೊಸ ದರ ಹೀಗಿದೆ..
- ನೀಲಿ ಪ್ಯಾಕೆಟ್ ಹಾಲು – 42 ರಿಂದ 44ಕ್ಕೆ ಏರಿಕೆ
- ನೀಲಿ ಪ್ಯಾಕೆಟ್ (ಟೋನ್ಡ್ ಹಾಲು) – 43 ರಿಂದ 45ಕ್ಕೆ ಏರಿಕೆ
- ಆರೆಂಜ್ ಪ್ಯಾಕೆಟ್ ಹಾಲು – 46ರಿಂದ 48ಕ್ಕೆ ಏರಿಕೆ
- ಆರೆಂಜ್ ಸ್ಪೆಷಲ್ ಹಾಲು – 48 ರಿಂದ 50ಕ್ಕೆ ಏರಿಕೆ
- ಗ್ರೀನ್ (ಸ್ಪೆಷಲ್) – 48 ರಿಂದ 50ಕ್ಕೆ ಏರಿಕೆ
- ಸಮೃದ್ದಿ ಹಾಲು – 51ರಿಂದ 53ಕ್ಕೆ ಏರಿಕೆ
- ಶುಭಂ ಗೋಲ್ಡ್ ಹಾಲು – 49 ರೂ.ನಿಂದ 51ಕ್ಕೆ ಏರಿಕೆ
- ಸಂತೃಪ್ತಿ ಹಾಲು – 55 ರಿಂದ 57ಕ್ಕೆ ಏರಿಕೆ
- ಶುಭಂ ಡಬಲ್ ಟೋನ್ಡ್ ಹಾಲು – 41 ರಿಂದ 43ಕ್ಕೆ ಏರಿಕೆ
ಇದನ್ನೂ ಓದಿ : ಉಮಾಪತಿಗೌಡಗೆ ಬೆದರಿಕೆ ಹಾಕಿದ್ದ ಡೇಂಜರ್ ಗ್ಯಾಂಗ್ನ ಮೆಂಬರ್ ಚೇತನ್ ಅರೆಸ್ಟ್..!
Post Views: 363