ತುಮಕೂರು : ಪೊಲೀಸರು ಅಂತಾ ಹೇಳಿಕೊಂಡು ಮಹಿಳೆಯ ಮಾಂಗಲ್ಯ ಸರವನ್ನ ಖದೀಮರು ಎಗರಿಸಿರುವ ಘಟನೆ ಜಿಲ್ಲೆಯ ಶಿರಾ ನಗರದಲ್ಲಿ ನಡೆದಿದೆ. ಮಹಿಳೆಯೊಬ್ಬರು 1.50 ಲಕ್ಷ ರೂ. ಮೌಲ್ಯದ 48 ಗ್ರಾಂ ತೂಕದ ಮಾಂಗಲ್ಯ ಸರವನ್ನು ಕಳೆದುಕೊಂಡಿದ್ದಾರೆ.
ತಾಲೂಕಿನ ಕಡವಿಗೆರೆ ಗ್ರಾಮದ ಅಶ್ವತ್ಥಮ್ಮ ಮಾಂಗಲ್ಯ ಸರ ಕಳೆದುಕೊಂಡವರು. ಅನಾರೋಗ್ಯದ ಹಿನ್ನೆಲೆಯಲ್ಲಿ ಮಾತ್ರೆಗಳನ್ನು ತೆಗೆದುಕೊಂಡು ಸ್ಥಳೀಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಮುಂಭಾಗ ಹೋಗುತ್ತಿರುವ ವೇಳೆ ಮಹಿಳೆಯನ್ನ ತಡೆದ ಕಳ್ಳರು ನಾವು ಪೊಲೀಸರು ಮುಂದೆ ಗಲಾಟೆ ನಡಿತಾಯಿದೆ.
ನಿಮ್ಮ ಸರವನ್ನ ಬ್ಯಾಗ್ನಲ್ಲಿ ಇಟ್ಟುಕೊಳ್ಳಿ ಎಂದು ಪುಸಲಾಯಿಸಿ ಪೇಪರ್ ನಲ್ಲಿ ಸರ ಸುತ್ತಿಕೊಡುವ ನೆಪ ಮಾಡಿ ಮಹಿಳೆಯ ಗಮನ ಬೇರೆ ಕಡೆ ಹರಿಸಿ ಮಾಂಗಲ್ಯದೊಂದಿಗೆ ಎಸ್ಕೇಪ್ ಆಗಿದ್ದಾರೆ. ಸ್ವಲ್ಪ ಹೊತ್ತಿನ ಬಳಿಕ ಮೊಸ ಹೊಗಿದ್ದು ಅರಿವಾದ ಅಶ್ವಥಮ್ಮ ಶಿರಾ ನಗರ ಠಾಣೆಯಲ್ಲಿ ಈ ಬಗ್ಗೆ ದೂರು ನೀಡಿದ್ದಾರೆ.
ಇದನ್ನೂ ಓದಿ : ತುಮಕೂರು : ವಿವಾಹಿತ ಪುರುಷನೊಂದಿಗೆ ನಾಪತ್ತೆಯಾಗಿದ್ದ ಕಾಲೇಜು ವಿದ್ಯಾರ್ಥಿನಿಯ ಶವ ಕೆರೆಯಲ್ಲಿ ಪತ್ತೆ..!