ವಿಜಯಪುರ : ವಿಜಯಪುರ ಪಾಲಿಕೆ ಎಲೆಕ್ಷನ್ನಲ್ಲಿ ಯತ್ನಾಳ್ಗೆ ಹಿನ್ನಡೆಯಾಗಿದೆ. ಕಾಂಗ್ರೆಸ್ ವಿಜಯಪುರ ಪಾಲಿಕೆಯ ಅಧಿಕಾರ ಪಡೆದಿದೆ. ಇದೀಗ ಮೇಯರ್, ಉಪಮೇಯರ್ ಸ್ಥಾನ ಕಾಂಗ್ರೆಸ್ ಪಾಲಾಗಿದೆ.
22 ಮತಗಳಿಂದ ಗೆದ್ದು ಕಾಂಗ್ರೆಸ್ನ ಮೆಹಜಬಿನ್ ಮೇಯರ್, ದಿನೇಶ್ ಹಳ್ಳಿ ಉಪಮೇಯರ್ ಆಗಿ ಆಯ್ಕೆಯಾಗಿದ್ದಾರೆ. 17 ಸ್ಥಾನ ಗೆದ್ದರೂ ಬಿಜೆಪಿಗೆ ಪಾಲಿಕೆ ಆಡಳಿತ ಸಿಗಲಿಲ್ಲ.
2022ರ ಅಕ್ಟೋಬರ್ನಲ್ಲಿ ನಡೆದಿದ್ದ ಎಲೆಕ್ಷನ್ನಲ್ಲಿ ಬಿಜೆಪಿ-17, ಕಾಂಗ್ರೆಸ್-10, ಪಕ್ಷೇತರರು-5, ಎಐಎಂಐಎಂ-2, ಜೆಡಿಎಸ್ ಒಂದು ಸ್ಥಾನ ಗೆದ್ದಿದ್ದವು. ಮೀಸಲಾತಿ ವಿವಾದ ಹಿನ್ನೆಲೆ ಎಲೆಕ್ಷನ್ ಮುಂದಕ್ಕೆ ಹೋಗಿತ್ತು.
ಹಾಗಾಗಿ ಬಿಜೆಪಿ ಸದಸ್ಯರು ಕಲಬುರಗಿ ಹೈಕೋರ್ಟ್ ಮೊರೆ ಹೋಗಿದ್ದರು. ಕೋರ್ಟ್ನಲ್ಲಿ ವಿವಾದ ಅಂತ್ಯವಾದ ಹಿನ್ನೆಲೆಯಲ್ಲಿ ಇದೀಗ ಎಲೆಕ್ಷನ್ ನಡೆದಿದೆ. ವಿಜಯಪುರ ಮಹಾನಗರ ಪಾಲಿಕೆಗೆ ಒಟ್ಟು 35 ಸದಸ್ಯ ಬಲ ಸಿಕ್ಕಿದೆ. ಕಾಂಗ್ರೆಸ್ ಜೆಡಿಎಸ್ ಕಾರ್ಪೊರೇಟರ್ ಬೆಂಬಲ ಪಡೆದಿದೆ.
10 ಸದಸ್ಯರ ಬಲವನ್ನು ಮಾತ್ರ ಹೊಂದಿರುವ ಕಾಂಗ್ರೆಸ್ ಪರವಾಗಿ 5 ಪಕ್ಷೇತರರು, 2 ಎಐಎಂಐಎಂ ಹಾಗೂ 1 ಜೆಡಿಎಸ್ ಸದಸ್ಯರ ಬೆಂಬಲವನ್ನು ಎಂ.ಬಿ ಪಾಟೀಲ್ ಪಡೆದಿದ್ದಾರೆ.
ಇದರ ಜೊತೆಗೆ ಎಂ ಬಿ ಪಾಟೀಲ್ ಸಹಿತ ನಾಗಠಾಣ ಶಾಸಕ ವಿಠಲ ಕಟಕದೊಂಡ, ಇಬ್ಬರು ಪರಿಷತ್ ಸದಸ್ಯರಾದ ಸುನೀಲಗೌಡ ಪಾಟೀಲ್, ಪ್ರಕಾಸ ರಾಠೋಡ್ ಮತಗಳ ಬಲ ಕೈ ಪಡೆಗಿದೆ. ಹೀಗಾಗಿ ಒಟ್ಟು 22 ಮತಗಳ ಬಲವನ್ನು ಕಾಂಗ್ರೆಸ್ ಪಡೆದುಕೊಂಡಿದೆ.
ಇದನ್ನೂ ಓದಿ : ಅಂದರ್ ಬಾಹರ್ ಅಡ್ಡೆ ಮೇಲೆ CCB ರೇಡ್ ; 6 ಮಂದಿ ಅರೆಸ್ಟ್, 85.39 ಲಕ್ಷ ಹಣ ಸೀಜ್..