Download Our App

Follow us

Home » ಸಿನಿಮಾ » ಅಬ್ಬಬ್ಬಾ ಮತ್ತೆ ಡಾಲಿ ಅಬ್ಬರ.. ಧನು-ಪರಮ್​​ ಕನಸಿನ ‘ಕೋಟಿ’ಯಲ್ಲಿ ಸತ್ಯಘಟನೆ..! 

ಅಬ್ಬಬ್ಬಾ ಮತ್ತೆ ಡಾಲಿ ಅಬ್ಬರ.. ಧನು-ಪರಮ್​​ ಕನಸಿನ ‘ಕೋಟಿ’ಯಲ್ಲಿ ಸತ್ಯಘಟನೆ..! 

ಸೌತ್​ನಿಂದ ತೆರೆ ಮೇಲೆ ಒಬ್ಬ ಹುಡುಗ ಬರ್ತಿದ್ದಾನೆ. ಅವನು ಹೆಸರು ಕೋಟಿ ಅಂತ, ಗುರಿ ಮತ್ತು ಗುಂಡಿಗೆ ಇರೋ ನಟ ರಾಕ್ಷಸ ಬಿಗ್​ ಸ್ಕ್ರೀನ್​ ಅಬ್ಬರಿಸೋಕೆ ಕೌಂಟ್​ ಡೌನ್​ ಶುರು ಮಾಡಿದ್ದಾನೆ. ಇದ್ರ ಬೆನ್ನಲೇ ಡಾಲಿ ನಟಿಸಿರೋ ಮೋಸ್ಟ್ ಅವೈಟೆಡ್​ ಕೋಟಿ ಸಿನಿಮಾದ ಪ್ರಮೋಷನ್​ ಸಹ ಜೋರಾಗಿದೆ. ರಿಲೀಸ್​ಗೂ ಮೊದಲೇ ಕೋಟಿ ಸಿನಿಮಾ ಕೋಟಿ ಹೃದಯಗಳಲ್ಲಿ ಸೆನ್ಸೇಷನ್​ ಕ್ರಿಯೇಟ್​ ಮಾಡ್ತಿದೆ.

ಡಾಲಿ ಧನಂಜಯ್​ ಸ್ಯಾಂಡಲ್​​ವುಡ್​ನ ಹ್ಯಾಂಡ್ಸಮ್​​ ಹೀರೋ, ಖಡಕ್​​ ಲುಕ್​​​, ಖದರ್​​ ಡೈಲಾಗ್​ನಿಂದಲೇ ಅದ್ಯಾವಾಗ ಡಾಲಿ ಆಗಿ ಮಿಂಚಿದ್ರೋ ನೋಡಿ. ಧನಂಜಯ್​ ಅದೃಷ್ಟವೇ ಚೇಂಜ್​​ ಆಯ್ತು. ‘ಟಗರು’ ಸಕ್ಸಸ್​ ನಂತ್ರ ಧನಂಜಯ್​ಗೆ ಸಾಲು ಸಾಲು ಸಿನಿಮಾಗಳ ಆಫರ್​​ ಬಂತು. ನಿರ್ಮಾಪಕರು ಡಾಲಿ ಕಾಲ್​ಶೀಟ್​ಗಾಗಿ ಕಾಯ್ತಿದ್ರು. ಆದ್ರೆ ಧನಂಜಯ್​ ಮಾತ್ರ ಅದ್ಯಾಕೋ ಗೊತ್ತಿಲ್ಲ, ಹೀರೋಕ್ಕಿಂತ ಜಾಸ್ತಿ ವಿಲನ್​ ಆಗಿ ಅಬ್ಬರಿಸಿದ್ರು.

ಅಬ್ಬಬ್ಬಾ ಡಾಲಿ ಒಂದು ಕಡೆ ಕೆಲ ಸಿನಿಮಾಗಳಲ್ಲಿ ಹೀರೋ ಆಗಿ ಮಿಂಚಿದ್ರೆ, ಇನ್ನೊಂದು ಕಡೆ ಖಡಕ್​​ ವಿಲನ್​ ಆಗಿ ಅಬ್ಬರಿಸಿದ್ರು. ಮತ್ತೊಂದು ಕಡೆ ಖಾಕಿ ತೊಟ್ಟು ಪೊಲೀಸ್​ ಆಫೀಸರ್​​​ ಆಗಿ ಆರ್ಭಟಿಸಿದ್ರು ಹೀಗೆ ಡಿಫರೆಂಟ್​ ಡಿಫರೆಂಟ್​​ ರೋಲ್​​​ನಲ್ಲಿ ಡಾಲಿ ಸ್ಯಾಂಡಲ್​​ವುಡ್​​ನಲ್ಲಿ ತನ್ನದೇ ವಿಭಿನ್ನ ಛಾಪು ಮೂಡಿಸಿ, ಪರಭಾಷಾ ಸಿನಿಮಾಗಳಲ್ಲಿ ಛಾನ್ಸ್​​ ಗಿಟ್ಟಿಸಿಕೊಂಡ್ರು. ಬಣ್ಣದ ಲೋಕದಲ್ಲಿ ಡಾಲಿ ಧನಂಜಯ್​​ ಉದಯೋನ್ಮಖ ನಟ ಅಲ್ಲ. ಉದಯವಾಗಿರೋ ನಟ, ಖಡಕ್​​ ಆ್ಯಕ್ಟಿಂಗ್​​​​, ರಗಡ್​ ಲುಕ್​​​, ಖದರ್​ ಡೈಲಾಗ್​ ಮೂಲಕವೇ ಸಿನಿಪ್ರಿಯರ ಮನ ಗೆದ್ದು ನಟ ರಾಕ್ಷಸ ಅಂತಲೇ ಮಿಂಚುತ್ತಿದ್ದಾರೆ. ನೆಗೆಟಿವ್ ಶೇಡ್​ನಿಂದ ಪಾಸಿಟಿವ್ ಶೇಡ್​ಗೆ ಬಂದು, ಈಗ ನಾಯಕನಟನಾಗಿ ಮಿಂಚತೊಡಗಿದ್ದಾರೆ. ಸಾಕಷ್ಟು ಪ್ರಾಜೆಕ್ಟ್​​​​​ನಲ್ಲಿ ಕ್ಲಿಕ್​ ಆಗಿರೋ ಧನು ಸಿನಿಮಾ ದುನಿಯಾದಲ್ಲಿ ಪರ್ಮನೆಂಟಾಗಿ, ಗಟ್ಟಿಯಾಗಿ ಸೆಟ್ಲ್ ಆಗ್ತಿದ್ದಾರೆ, ಹವಾ ಕ್ರಿಯೇಟ್​  ಮಾಡ್ತಿದ್ದಾರೆ. ಈಗ ಕೋಟಿ ಸಿನಿಮಾ ಮೂಲಕ ಗಾಂಧಿನಗರದಲ್ಲಿ ಹೊಸ ಅಲೆ ಸೃಷ್ಟಿಸೋಕೆ ರೆಡಿಯಾಗಿದ್ದಾರೆ.

ಯೆಸ್​​​ ಡಾಲಿ ಧನಂಜಯ್​​ ನಟನೆಯ ಮೋಸ್ಟ್​ ಅವೈಟೆಡ್​ ಸಿನಿಮಾ ಕೋಟಿ. ಇನ್ನು ಕನ್ನಡ ಸಿನಿಮಾ ಮಾರುಕಟ್ಟೆಗೆ ದೇಶದ ಪ್ರಮುಖ ನಿರ್ಮಾಣ ಸಂಸ್ಥೆ ಜಿಯೋ ಸ್ಟುಡಿಯೋಸ್ ‘ಕೋಟಿ’ ಸಿನಿಮಾ ಮೂಲಕ ಕಾಲಿಟ್ಟಿದೆ. ಇಷ್ಟೇ ಅಲ್ಲಾ ಕಿರುತೆರೆ ಲೋಕದಲ್ಲಿ ತನ್ನದೇ ಚಾಪು ಮೂಡಿಸಿರೋ ಪರಮೇಶ್ವರ್​ ಗುಂಡ್​ಕಲ್​ ಅಲಿಯಾಸ್​ ಪರಮ್ ಇದೇ ಮೊದಲ ಬಾರಿಗೆ ಡೈರೆಕ್ಟರ್​​​ ಕ್ಯಾಪ್ ತೊಟ್ಟು, ಕೋಟಿ ಸಿನಿಮಾಕ್ಕೆ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ಇತ್ತಿಚೆಗೆ ಕೋಟಿ ಸಿನಿಮಾದ ಟೀಸರ್ ಹಾಗೂ ಕಲರ್​ಫುಲ್​​​​​ ಸಾಂಗ್​ಗಳು ಕೆಲ ದಿನಗಳ ಹಿಂದಷ್ಟೆ ರಿಲೀಸ್​ ಆಗಿ ಸದ್ದು ಮಾಡಿತ್ತು. ಇದೀಗ ಕೋಟಿ ಸಿನಿಮಾದ ಟ್ರೇಲರ್​ ರಿಲೀಸ್​ ಆಗಿ ಸಖತ್​ ಗ್ರ್ಯಾಂಡ್​ ಆಗಿ ರಿಲೀಸ್​ ಆಗಿದೆ. ಈ ಬ್ಯೂಟಿಫುಲ್​ ಈವೆಂಟ್​ಗೆ ಡಾಲಿ ಧನಂಜಯ್​​​, ಪರಮೇಶ್ವರ್​ ಗುಂಡ್​ಕಲ್​ ಸೇರಿದಂತೆ ಇಡೀ ಚಿತ್ರತಂಡ ಹಾಗೂ ಸ್ಯಾಂಡಲ್​ವುಡ್​ ಗಣ್ಯರು ಭಾಗಿಯಾಗಿ ಶುಭ ಹಾರೈಸಿದ್ದಾರೆ.

ಇದೊಂದು ಮಿಡಲ್ ಕ್ಲಾಸ್ ಸಾಮಾನ್ಯ ವ್ಯಕ್ತಿಯ ಕಥೆ. ಎಲ್ಲರಿಗೂ ಕನೆಕ್ಟ್ ಆಗುವ ಪ್ಯಾಮಿಲಿ ಎಂಟರ್​​ಟೈನರ್​​​ ಸ್ಟೋರಿನೇ ಕೋಟಿ. ಡಾಲಿ ‘ಕೋಟಿ’ ಎಂಬ ಒಬ್ಬ ಸಾಮಾನ್ಯ ಡ್ರೈವರ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಯಾರಿಗೂ ಮೋಸ ಮಾಡದೇ, ನೋವು ನೀಡದೇ ಒಂದು ಕೋಟಿ ರೂಪಾಯಿ ದುಡಿದು ತನ್ನ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳುವ ಬಯಕೆ ಈತನದ್ದು. ಕೋಟಿ ಪಯಣದ ಒಂದು ಸಣ್ಣ ನೋಟ ಟ್ರೇಲರ್​​ನಲ್ಲಿ ತುಂಬಾ ಅದ್ಭುತವಾಗಿ ಕಾಣಿಸುತ್ತದೆ. ಡಾಲಿ ಧನಂಜಯ್ ಜೊತೆ ನಾಯಕಿಯಾಗಿ ಮೋಕ್ಷಾ ಕುಶಾಲ್‌ ಮತ್ತು ಖಳನಾಯಕನಾಗಿ ರಮೇಶ್ ಇಂದಿರಾ ಅಭಿನಯಿಸಿದ್ದಾರೆ. ಉಳಿದಂತೆ ಹಿರಿಯ ನಟರಾದ ರಂಗಾಯಣ ರಘು, ತಾರಾ, ಸರ್ದಾರ್‌ ಸತ್ಯ, ಪೃಥ್ವಿ ಶಾಮನೂರು, ತನುಜಾ ವೆಂಕಟೇಶ್, ಸೇರಿದಂತೆ ದೊಡ್ಡ ದೊಡ್ಡ ಕಲಾವಿದರು ಚಿತ್ರದ ತಾರಾ ಬಳಗದಲ್ಲಿದ್ದಾರೆ.

ಇನ್ನು ಈ ಸಿನಿಮಾದಲ್ಲಿ ಐದು ಹಾಡುಗಳಿದ್ದು, ವಾಸುಕಿ ವೈಭವ್‌ ರಾಗ ಸಂಯೋಜಿಸಿದ್ದಾರೆ. ಹಾಡುಗಳಿಗೆ ಯೋಗರಾಜ್‌ ಭಟ್‌ ಮತ್ತು ವಾಸುಕಿ ವೈಭವ್‌ ಸಾಹಿತ್ಯ ರಚಿಸಿದ್ದಾರೆ. ಹಿನ್ನೆಲೆ ಸಂಗೀತದ ಜವಾಬ್ದಾರಿಯನ್ನು 777 ಚಾರ್ಲಿ ಖ್ಯಾತಿಯ ನೊಬಿನ್‌ ಪೌಲ್‌ ಹೊತ್ತಿದ್ದಾರೆ. ಕಾಂತಾರ ಸಿನಿಮಾದ ಕೆಲಸಕ್ಕೆ ಪ್ರಶಂಸೆಗಳಿಸಿದ್ದ ಪ್ರತೀಕ್‌ ಶೆಟ್ಟಿ  ‘ಕೋಟಿ’ಯ ಸಂಕಲನಕಾರರಾದರೆ, ಟೆಲಿವಿಷನ್‌ನ ಖ್ಯಾತ ಛಾಯಾಗ್ರಾಹಕ ಅರುಣ್ ಈ ಸಿನಿಮಾದ ಛಾಯಾಗ್ರಾಹಕ.

ಅಂದ್ಹಾಗೆ ಕೋಟಿ ಚಿತ್ರವನ್ನು ಜಿಯೋ ಸ್ಟುಡಿಯೋಸ್ ನಿರ್ಮಾಣ ಮಾಡಿದ್ದು, ಕಲರ್ಸ್ ಕನ್ನಡವನ್ನು ದಶಕಗಳ ಕಾಲ ಮುನ್ನಡೆಸಿದ್ದ ಪರಮ್‌ ಅವರು ಬರೆದು ನಿರ್ದೇಶಿಸಿದ್ದಾರೆ. ಜೂನ್‌ 14ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದ್ದು, ಪ್ರೇಕ್ಷಕರನ್ನು ಗೆಲ್ಲುವ ವಿಶ್ವಾಸ ಚಿತ್ರ ತಂಡಕ್ಕಿದೆ. ಅಪ್ಪಟ ಕನ್ನಡ ಮಣ್ಣಿನ ಕಥೆಯಾದ ‘ಕೋಟಿ’ ಈಗಾಗಲೇ ಟೀಸರ್ ಮತ್ತು ಹಾಡುಗಳ ಮೂಲಕ ಪ್ರೇಕ್ಷಕರ ಗಮನ ಸೆಳೆದಿದೆ. ವರ್ಷದ ಮೊದಲಾರ್ಧದಲ್ಲಿ ಯಾವುದೇ ದೊಡ್ಡ ಗೆಲುವು ಕಾಣದೇ ಕಂಗೆಟ್ಟಿರುವ ಕನ್ನಡ ಸಿನಿಮಾ ಇಂಡಸ್ಟ್ರಿಗೆ ‘ಕೋಟಿ’ ಗೆಲ್ಲುವ ಭರವಸೆ ಮೂಡಿಸಿದೆ.

ಇದನ್ನೂ ಓದಿ : ರೇಣುಕಾಸ್ವಾಮಿ ಮರ್ಡರ್​ಗೆ ಬಳಸಿದ್ದ ದರ್ಶನ್ ಜೀಪ್, ಕಾರ್​​ಗಳು ಸೀಜ್..!

 

Leave a Comment

DG Ad

RELATED LATEST NEWS

Top Headlines

ಗಂಡು ಮಗುವಿಗೆ ಜನ್ಮ ನೀಡಿದ ಕಿರುತೆರೆ ನಟಿ ಕವಿತಾ ಗೌಡ – ಮಗನ ಕಾಲಿನ ವಿಡಿಯೋ ಹಂಚಿಕೊಂಡ ಚಂದನ್..!

ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ಕನ್ನಡದ ಕಿರುತೆರೆ ನಟಿ ಕವಿತಾ ಗೌಡ ಹಾಗೂ ಚಂದನ್ ಕುಮಾರ್​ಗೆ ಗಂಡು ಮಗು ಜನಿಸಿದೆ. ಇದೀಗ ಮಗುವಿನ ಕಾಲಿನ ಒಂದು ವಿಡಿಯೋ ಶೇರ್

Live Cricket

Add Your Heading Text Here