ಬೆಂಗಳೂರು : ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅವರ ಬಂಧನ ಆಗಿದೆ. ಇದೀಗ ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷೆಯಲ್ಲಿ ಒಂದಷ್ಟು ಮಾಹಿತಿಗಳು ಲಭ್ಯವಾಗಿದೆ.
ರೇಣುಕಾಸ್ವಾಮಿ ದೇಹದ ಮೇಲೆ 15 ಕಡೆ ಗಾಯಗಳಾಗಿತ್ತು, ಮೂಗು, ಕಾಲು, ತಲೆ, ಬೆನ್ನು, ದವಡೆ ಸೇರಿದಂತೆ 15 ಕಡೆ ಗಾಯವಾಗಿತ್ತು ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ದೇಹದ 15 ಭಾಗಗಳಲ್ಲಿ ಹಲ್ಲೆಯಾಗಿರೋದು ಪತ್ತೆಯಾಗಿದ್ದು, ಮರ್ಮಾಂಗಕ್ಕೆ ಹೊಡೆದ ಬಗ್ಗೆ ವೈದ್ಯರು ವರದಿ ಸಿದ್ದ ಪಡಿಸುತ್ತಿದ್ದಾರೆ. ಕಬ್ಬಿಣ ಹಾಗೂ ಮರದ ತುಂಡುಗಳಿಂದ ಹಲ್ಲೆ ಮಾಡಿರುವ ಸಾಧ್ಯತೆಯಿದೆ.
ರೇಣುಕಾಸ್ವಾಮಿ ಶವ ಸತ್ವ ಅನುಗ್ರಹ ಅಪಾರ್ಟ್ ಮೆಂಟ್ ನ ಮುಂಭಾಗದಲ್ಲಿರುವ ಮೋರಿಯಲ್ಲಿ ಪತ್ತೆಯಾಗಿದೆ. ಅಪರಿಚಿತ ಶವ ಪತ್ತೆ ಸಂಬಂಧ ಅಪಾರ್ಟ್ ಮೆಂಟ್ ಸೆಕ್ಯೂರಿಟಿ ಗಾರ್ಡ್ ದೂರು ನೀಡಿದ್ದರು. 30 ರಿಂದ 35 ವರ್ಷದ ವ್ಯಕ್ತಿ ಶವ ಪತ್ತೆಯಾಗಿದೆ ಎಂದು ಸೆಕ್ಯೂರಿಟಿ ಗಾರ್ಡ್ ದೂರು ನೀಡಿದ್ದರು. ರೇಣುಕಾಸ್ವಾಮಿ ಕಿವಿಗೆ ಹಾಗೂ ತಲೆಗೆ ಗಂಭೀರ ಗಾಯ ಆಗಿತ್ತು. ಪೊಲೀಸರು ಮೃತ ವ್ಯಕ್ತಿಯ ಮರಣೋತ್ತರ ಪರೀಕ್ಷೆ ನಡೆಸಿ ವೈದ್ಯರ ವರದಿ ಪಡೆದಿದ್ದರು.
ಇದನ್ನೂ ಓದಿ : ಇವತ್ತಿಗೆ 12 ವರ್ಷದ ಹಿಂದೆ ಅರೆಸ್ಟ್ ಆಗಿದ್ದ ದರ್ಶನ್ : ಅಂದು ಏನಾಗಿತ್ತು?