Download Our App

Follow us

Home » ಅಪರಾಧ » ಸದ್ಯಕ್ಕೆ ನನ್ನನ್ನು ಏನೂ ಕೇಳಬೇಡಿ – ತಲೆ ಮೇಲೆ ಕೈಹೊತ್ತು ಕುಳಿತ ಪ್ರಜ್ವಲ್‌ ರೇವಣ್ಣ..!

ಸದ್ಯಕ್ಕೆ ನನ್ನನ್ನು ಏನೂ ಕೇಳಬೇಡಿ – ತಲೆ ಮೇಲೆ ಕೈಹೊತ್ತು ಕುಳಿತ ಪ್ರಜ್ವಲ್‌ ರೇವಣ್ಣ..!

ಬೆಂಗಳೂರು : ಹಾಸನ ಅಶ್ಲೀಲ ವಿಡಿಯೋ ಬೆಳಕಿಗೆ ಬಂದು ಬರೋಬ್ಬರಿ ಒಂದು ತಿಂಗಳು ಕಳೆದ ನಂತರ ಪ್ರಜ್ವಲ್​ ರೇವಣ್ಣರ ಬಂಧನವಾಗಿದೆ. ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಪ್ರಜ್ವಲ್ ರೇವಣ್ಣ 34 ದಿನಗಳ ಬಳಿಕ ಬೆಂಗಳೂರು ಏರ್​ಪೋರ್ಟ್​​ಗೆ ಬಂದಿಳಿಯುತ್ತಿದ್ದಂತೆಯೇ SIT ಮಹಿಳಾ ಅಧಿಕಾರಿಗಳು ಅರೆಸ್ಟ್​ ಮಾಡಿದ್ದಾರೆ.

ಇದೀಗ ಪ್ರಜ್ವಲ್‌ ರೇವಣ್ಣ ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ. ನನ್ನನ್ನ ಸ್ವಲ್ಪ ಹೊತ್ತು ಸುಮ್ಮನೆ ಬಿಟ್ಟುಬಿಡಿ, ನಾನು ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದೇನೆ. ಈಗಾಗಲೆ‌ ನಾನು ಡಿಪ್ರೆಷನ್​ಗೆ ಹೋಗಿದ್ದೆ‌, ಸದ್ಯಕ್ಕೆ ನನ್ನನ್ನು ಏನೂ ಕೇಳಬೇಡಿ. ನಾನು ಏನನ್ನೂ ಹೇಳುವ ಸ್ಥಿತಿಯಲ್ಲಿ ಇಲ್ಲ, ಸ್ವಲ್ಪ ಸಮಯ ಕೊಡಿ ನಿಮ್ಮ ತನಿಖೆಗೆ ಸಹಕಾರ ಕೊಡ್ತೀನಿ ಎಂದು SIT ಸೆಲ್​​ನಲ್ಲಿ ಪ್ರಜ್ವಲ್​​ ರೇವಣ್ಣ ಚಿಂತಾಕ್ರಾಂತರಾಗಿ ಕುಳಿತಿದ್ದಾರೆ.

ತಮ್ಮನ್ನು ಭೇಟಿಯಾದ ವಕೀಲರ ಬಳಿ ಪ್ರಜ್ವಲ್ ಮಾತ್ನಾಡಿ,  ​ನಾನು ತನಿಖೆಗೆ ಸಂಪೂರ್ಣ ಸಹಕಾರ ನೀಡಿದ್ದೇನೆ. ಅಷ್ಟು ದೂರದಿಂದ ಜರ್ನಿ ಮಾಡಿ ಬಳಲಿದ್ದೇನೆ, ಎಲ್ಲಾ ರೀತಿಯಲ್ಲೂ ಸ್ಪಂದಿಸಲು ಸಿದ್ದ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಪ್ರಜ್ವಲ್​ ಅರೆಸ್ಟ್ ಆಗ್ತಿದ್ದಂತೆ ಹೊಸ ಮೊಬೈಲ್​ ವಶಕ್ಕೆ ಪಡೆದ SIT : ಹಾಗಾದ್ರೆ ಪ್ರಜ್ವಲ್​​​ ಹಳೆ ಮೊಬೈಲ್​​​ ಏನಾಯ್ತು?

Leave a Comment

DG Ad

RELATED LATEST NEWS

Top Headlines

ಬೆಂಗಳೂರು ಕಟ್ಟಡ ದುರಂತ – ಮೃತರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ ಸಿದ್ದು..!

ಬೆಂಗಳೂರು : ಬೆಂಗಳೂರಿನ ಬಾಬುಸಾಪಾಳ್ಯದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತದಿಂದ 8ಜನ ಮೃತಪಟ್ಟಿದ್ದಾರೆ. ಇದೀಗ ಸಿಎಂ ಸಿದ್ದರಾಮಯ್ಯ ದುರಂತ ಸ್ಥಳಕ್ಕೆ ಭೇಟಿ ನೀಡಿ ಮೃತರ ಕುಟುಂಬಕ್ಕೆ ತಲಾ

Live Cricket

Add Your Heading Text Here