ಬೆಂಗಳೂರು : ಬೆಂಗಳೂರಿನ ಬಾಬುಸಾಪಾಳ್ಯದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತದಿಂದ 8ಜನ ಮೃತಪಟ್ಟಿದ್ದಾರೆ. ಇದೀಗ ಸಿಎಂ ಸಿದ್ದರಾಮಯ್ಯ ದುರಂತ ಸ್ಥಳಕ್ಕೆ ಭೇಟಿ ನೀಡಿ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ. ಹಾಗೆಯೇ ಗಾಯಾಳುಗಳಿಗೆ ಚಿಕಿತ್ಸಾ ವೆಚ್ಚದ ಜೊತೆ ಪರಿಹಾರ ಕೊಡುತ್ತೇವೆ ಎಂದಿದ್ದಾರೆ.
ಈ ವೇಳೆ ಸಚಿವರಾದ ಬೈರತಿ ಸುರೇಶ್, ಶಾಸಕ ಬೈರತಿ ಬಸವರಾಜ್, ಬಿಬಿಎಂಪಿ ಕಮಿಷನರ್ ತುಷಾರ್ ಗಿರಿನಾಥ್, ಡಿಸಿಪಿ ದೇವರಾಜ್, ಅಗ್ನಿ ಶಾಮಕ ದಳ ಡಿಐಜಿ ರವಿ ಡಿ ಚನ್ನಣ್ಣನವರ್, ಸ್ಥಳೀಯರ ಕಾಂಗ್ರೆಸ್ ಮುಖಂಡರು ಸಿಎಂಗೆ ಸಾಥ್ ಕೊಟ್ಟಿದ್ದಾರೆ. ಸುಮಾರು ಒಂದು ಗಂಟೆಗಳ ಕಾಲ ಸಿಎಂ ದುರಂತ ಸ್ಥಳ ವೀಕ್ಷಿಸಿದ್ದಾರೆ.
ಇದೇ ವೇಳೆ ಸಿಎಂ ಸಿದ್ದು BBMP ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಭಾಗದ IAS ಅಧಿಕಾರಿಗೆ ನೋಟಿಸ್ ಕೊಡಲು ಹೇಳಿದ್ದೇನೆ, ಬೆಂಗಳೂರಿನಲ್ಲಿ ಅಕ್ರಮ ಕಟ್ಟಡಗಳಿಗೆ ಕಡಿವಾಣ ಹಾಕ್ಬೇಕು. ಅನಧಿಕೃತ ಕಟ್ಟಡ ಕಟ್ಟಲು ಬಿಟ್ಟರೆ ಆಯಾ ಭಾಗದ ಅಧಿಕಾರಿಗಳೇ ಹೊಣೆ, ಆಯಾ ವಲಯದ ಅಧಿಕಾರಿಗಳನ್ನೇ ಜವಾಬ್ದಾರಿ ಮಾಡ್ತೇವೆ. ಯಾವುದೇ ಅಕ್ರಮ ಕಟ್ಟಡ ನಿರ್ಮಾಣ ಆಗಲು ಬಿಡಬಾರದು, ಕಳಪೆ ಕಾಮಗಾರಿ ಮತ್ತು ನಿಯಮ ಉಲ್ಲಂಘನೆಯಿಂದ ಕಟ್ಟಡ ಬಿದ್ದಿದೆ ಎಂದಿದ್ದಾರೆ.
ಇಂಥಾ ದುರಂತ ಬೆಂಗಳೂರಿನಲ್ಲಿ ಮತ್ತೆ ಮರುಕಳಿಸಬಾರದು, ಪಾಲಿಕೆ ಝೋನಲ್ ಆಫೀಸರ್, EEಗೆ ನೋಟಿಸ್ ಕೊಡಲು ಸೂಚಿಸಿದ್ದೇನೆ. ರಾಜಕಾಲುವೆ ಒತ್ತುವರಿ ತೆರವಿಗೂ ಹಿಂದೆ ಮುಂದೆ ನೋಡ್ಬೇಕು ಎಂದು 8 ಮಂದಿ ಬಲಿ ಪಡೆದ ಕಟ್ಟಡ ವೀಕ್ಷಿಸಿ ಸಿಎಂ ಸಿದ್ದು ಗರಂ ಆಗಿದ್ದಾರೆ.
ಇದನ್ನೂ ಓದಿ : ‘ಎಲ್ಲೋ ಜೋಗಪ್ಪ ನಿನ್ನರಮನೆ’ ಚಿತ್ರದ ‘ಜಾಣಮರಿ’ ಸಾಂಗ್ ರಿಲೀಸ್..!