ಬೆಂಗಳೂರು : ಬೆಂಗಳೂರಿನ ರಾಮಮೂರ್ತಿನಗರ ಬಳಿ ಇರುವ ಫ್ಲೈ ಓವರ್ ಬಳಿ ಕಪ್ಪು ಬಣ್ಣದ ಬ್ಯಾಗ್ ಪತ್ತೆಯಾಗಿದೆ. ಅನುಮಾನಸ್ಪದ ಬ್ಯಾಗ್ ನೋಡಿ ಆತಂಕಗೊಂಡ ಸಾರ್ವಜನಿಕರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ರಾಮಮೂರ್ತಿನಗರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ, ಬ್ಯಾಗ್ನ್ನ ವಶಕ್ಕೆ ಪಡೆದಿದ್ದಾರೆ. ಇನ್ನೂ ಬ್ಯಾಗ್ ಯಾರದ್ದು ಅನ್ನೋ ಮಾಹಿತಿ ಪತ್ತೆಯಾಗಿಲ್ಲ. ಅನುಮಾನಸ್ಪದ ಕಪ್ಪು ಬ್ಯಾಗ್ನಲ್ಲಿ ಬಟ್ಟೆಗಳು ಸಿಕ್ಕಿವೆ. ಇದು ಕಿಡಿಗೇಡಿ ಕೃತ್ಯವೋ ಅಥವಾ ಮಹಿಳೆಗೆ ಸೇರಿದ ಬ್ಯಾಗ್ ಎಂಬ ಗೊಂದಲ ಸೃಷ್ಟಿಯಾಗಿದೆ. ಆದರೆ ಬ್ಯಾಗ್ನಲ್ಲಿ ಬಟ್ಟೆಗಳು ಇದ್ದಿದ್ದರಿಂದ ಪೊಲೀಸರು ನಿರಾಳರಾಗಿದ್ದಾರೆ.
ಇದನ್ನೂ ಓದಿ : ಬೀದರ್ : ಮಿಡ್ನೈಟ್ನಲ್ಲೇ ರೌಡಿಶೀಟರ್ ಮೇಲೆ ಪೊಲೀಸರ ಫೈರಿಂಗ್..!
Post Views: 151