Download Our App

Follow us

Home » ಅಪರಾಧ » ಬಗೆದಷ್ಟೂ ಬಯಲಾಗ್ತಿದೆ ವಾಲ್ಮೀಕಿ ನಿಗಮದ ಹಗರಣ : ಲೂಟಿಯಾಗಿದ್ದು 87 ಕೋಟಿಯಲ್ಲ 94.73 ಕೋಟಿ..!

ಬಗೆದಷ್ಟೂ ಬಯಲಾಗ್ತಿದೆ ವಾಲ್ಮೀಕಿ ನಿಗಮದ ಹಗರಣ : ಲೂಟಿಯಾಗಿದ್ದು 87 ಕೋಟಿಯಲ್ಲ 94.73 ಕೋಟಿ..!

ಬೆಂಗಳೂರು : ವಾಲ್ಮೀಕಿ ನಿಗಮ ಹಗರಣಕ್ಕೆ ಇದೀಗ ಮತ್ತೊಂದು ಮೆಗಾ ಟ್ವಿಸ್ಟ್​ ಸಿಕ್ಕಿದೆ. ನಿಗಮದ ಬಹುಕೋಟಿ ಗೋಲ್ಮಾಲ್ ಬಗೆದಷ್ಟೂ ಬಯಲಾಗ್ತಿದೆ.​​ ಈ ಮೊದಲು ವಾಲ್ಮೀಕಿ ನಿಗಮದಲ್ಲಿ 87 ಕೋಟಿ ಲೂಟಿಯಾಗಿದೆ ಎಂದು ಹೇಳಲಾಗುತ್ತಿತ್ತು ಆದರೆ ಇದೀಗ 94.73 ಕೋಟಿ ಹಗರಣ ನಡೆದಿರುವುದು ಬಯಲಾಗಿದೆ.

ಮಹರ್ಷಿ ವಾಲ್ಮೀಕಿ ನಿಗಮದ ಪ್ರಧಾನ ವ್ಯವಸ್ಥಾಪಕರಿಂದಲೇ 94.73 ಕೋಟಿ ಸೀಕ್ರೆಟ್​ ಬಯಲಾಗಿದೆ. ನಿಗಮದ ಜನರಲ್​ ಮ್ಯಾನೇಜರ್ ರಾಜಶೇಖರ್​ ಈ ಬಗ್ಗೆ ಹೈಗ್ರೌಂಡ್ ಠಾಣೆಗೆ ದೂರು ನೀಡಿದ್ದಾರೆ. ರಾಜಶೇಖರ್​​ ದೂರು ಆಧರಿಸಿ ಪೊಲೀಸರು ನಿನ್ನೆ FIR ದಾಖಲು ಮಾಡಿದ್ದಾರೆ. ನಿಗಮ ಯೂನಿಯಲ್​​ ಬ್ಯಾಂಕ್​​ನಲ್ಲಿ ಅಕೌಂಟ್ ಓಪನ್​ ಮಾಡಿತ್ತು, 2024ರ ಫೆಬ್ರವರಿ 19ರಂದು MG ರಸ್ತೆ ಬ್ರ್ಯಾಂಚ್​ಗೆ ಅಕೌಂಟ್​ ವರ್ಗಾವಣೆ ಮಾಡಿದ್ದರು. ನಿಗಮದ ಪರವಾಗಿ 520141001659653 ಅಕೌಂಟ್​ಗೆ ಹಣ ವರ್ಗಾವಣೆ ಮಾಡಲಾಗಿತ್ತು.

ಮಾರ್ಚ್​4ರಂದು 25 ಕೋಟಿ, ಮಾರ್ಚ್​ 6ರಂದು 25 ಕೋಟಿ, ಮಾರ್ಚ್​ 21ರಂದು 44 ಕೋಟಿ, ಮೇ 21ರಂದು 50 ಕೋಟಿ, ಮೇ 22ರಂದು 33 ಕೋಟಿ ಸೇರಿ ಒಟ್ಟು 187.33 ಕೋಟಿ ಹಣ ಇತ್ತು. ಬ್ಯಾಂಕ್​​ನಿಂದ ನಿಗಮದ ಜೊತೆ ಯಾವುದೇ ಪತ್ರ ವ್ಯವಹಾರ ನಡೆದಿಲ್ಲ. ಖಾತೆಗೆ ಸಂಬಂಧಿಸಿದ ಪಾಸ್ ಬುಕ್, ಚೆಕ್ ಬುಕ್ ಕೂಡ ನೀಡಿಲ್ಲ. ನಿಗಮದ ಅಕೌಂಟ್​ ಸೂಪರಿಂಟೆಂಡೆಂಟ್​ ಚಂದ್ರಶೇಖರನ್​​ ಇದೆಲ್ಲಾ ನೋಡ್ತಿದ್ದರು. ನಿಗಮದ ಬ್ಯಾಂಕ್ ಧೃಡೀಕರಣ ಚೆಕ್, RTGS, ಸ್ಟೇಟ್ಮೆಂಟ್​ ಸಮನ್ವಯ ಮಾಡ್ತಿದ್ದರು.

ಚಂದ್ರಶೇಖರನ್​ ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ ಈ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ. ನಕಲಿ ದಾಖಲೆ ಸೃಷ್ಟಿಸಿ ಹಣ ವರ್ಗಾಯಿಸಿ ದೊಡ್ಡ ನಷ್ಟ ಮಾಡಿರೋ ಆರೋಪ ವ್ಯಕ್ತವಾಗಿದೆ. ಈ ಸಂಬಂಧ ಬ್ಯಾಂಕ್​​ನ 6 ಮಂದಿ ಅಧಿಕಾರಿಗಳ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.

ಇದನ್ನೂ ಓದಿ : ಪ್ರಜ್ವಲ್​ನನ್ನು​ ಅರೆಸ್ಟ್ ಮಾಡದೇ ಬೇರೆ ದಾರಿಯೇ ಇಲ್ಲ- ಡಾ.ಜಿ.ಪರಮೇಶ್ವರ್..!

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here