ಬೆಂಗಳೂರು : ಸಾಫ್ಟ್ ಡ್ರಿಂಕ್ಸ್ ಸೇವಿಸಿ ಮಗು ಅಸ್ವಸ್ಥಗೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. MAAZA ಸಾಫ್ಟ್ ಡ್ರಿಂಕ್ಸ್ ಸೇವಿಸಿ ಮಗು ಅಸ್ವಸ್ಥಗೊಂಡಿದೆ ಎಂಬ ಆರೋಪ ಕೇಳಿಬಂದಿದೆ. ಸೋಷಿಯಲ್ ಮೀಡಿಯಾದಲ್ಲಿ ಜ್ಯೂಸ್ ವಿಡಿಯೋ ವೈರಲ್ ಆಗಿದ್ದು, ಈ ಘಟನೆ ಶ್ರೀರಾಂಪುರದಲ್ಲಿ ನಡೆದಿದೆ ಎನ್ನಲಾಗಿದೆ.
ಪೋಷಕರು ಪ್ಯಾಕೇಟ್ ಪರಿಶೀಲಿಸಿದಾಗ ಕಪ್ಪು ಬಣ್ಣ ಮಿಶ್ರಿತ ವಸ್ತು ಪತ್ತೆಯಾಗಿದೆ. ಇದ್ರಿಂದಲೇ ಮಗು ಅಸ್ವಸ್ಥ ಎಂದು ತಂದೆ ಸುರೇಂದ್ರ ಆರೋಪ ಮಾಡಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ ನಂತರ ಮಗು ಚೇತರಿಸಿಕೊಂಡಿದೆ.
ವೈದ್ಯರು ಗುಣಮಟ್ಟ ಪರೀಕ್ಷೆಗಾಗಿ ಪಾಕೆಟ್ನ್ನು ಪರೀಕ್ಷೆ ಮಾಡಿಸುತ್ತಿದ್ದಾರೆ. ಫುಡ್ ಡಿಪಾರ್ಟ್ಮೆಂಟ್ನಲ್ಲಿ MAAZA ಡ್ರಿಂಕ್ಸ್ ಪ್ಯಾಕೇಟ್ ಪರೀಕ್ಷೆ ನಡೆಯಲಿದೆ.
ಇದನ್ನೂ ಓದಿ : ಹಣ ಡಬ್ಲಿಂಗ್ ಪ್ರಕರಣ : ಕೋಟಿ ಕೋಟಿ ವಂಚನೆ ಮಾಡಿದ್ದ ಆರೋಪಿಗಳು ಕೋರ್ಟ್ ಮುಂದೆ ಶರಣು..!
Post Views: 104