ಬೆಂಗಳೂರು : ಅನಧಿಕೃತ CDR ತಗೆದು ಬಳಕೆ ಮಾಡಿದ ಪ್ರಕರಣ ಸಂಬಂಧ CCB, ವಿಜಯನಗರ ಉಪ ವಿಭಾಗದ ಪೊಲೀಸ್ ಕಾರ್ಯಾಚರಣೆ ನಡೆಸಿದ್ದಾರೆ. ಒಟ್ಟು 43 ಮೊಬೈಲ್ CDR ಪಡೆದಿದ್ದ 7 ಮಂದಿಯನ್ನು ಅರೆಸ್ಟ್ ಮಾಡಲಾಗಿದೆ.
ಅನುಮತಿ ಇಲ್ಲದೇ ಫೋನ್ ಕಾಲ್ ಡಿಟೇಲ್ ಸಂಗ್ರಹಿಸಿದ್ದು, ವಿಜಯನಗರ, ಗೋವಿಂದರಾಜನಗರದಲ್ಲಿ 3 ಕೇಸ್ ದಾಖಲಾಗಿದೆ. ಯಾವ ಉದ್ದೇಶಕ್ಕೆ CDR ಪಡೆದಿದ್ದಾರೆ..? ಹೇಗೆ ಪಡೆದಿದ್ದಾರೆ..? ಅನ್ನೊ ಬಗ್ಗೆ ನಡೆಯುತ್ತಿದೆ. CDR ನೀಡಿದ್ದರಲ್ಲಿ ಕೆಲ ಪೊಲೀಸ್ ಅಧಿಕಾರಿಗಳು ಭಾಗಿಯಾಗಿರುವ ಮಾಹಿತಿ ಲಭ್ಯವಾಗಿದ್ದು, ಪೊಲೀಸ್ ಕಮಿಷನರ್ ಬಿ.ದಯಾನಂದ್ ಕೇಸ್ನ್ನು CCBಗೆ ವರ್ಗಾವಣೆ ಮಾಡಿದ್ದಾರೆ.
ಆರೋಪಿಗಳ ತನಿಖೆಯಿಂದ 43 ಮೊಬೈಲ್ ಸಿಡಿಆರ್ ಸಂಗ್ರಹ ಪತ್ತೆಯಾಗಿದ್ದು, ಡಿಟೆಕ್ಟೀವ್ ಏಜೆನ್ಸಿ ಹೆಸರಲ್ಲಿ ಆರೋಪಿಗಳು CDR ಸಂಗ್ರಹ ಮಾಡಿದ್ದಾರೆ. ಪ್ರಕರಣದ ಸಂಪೂರ್ಣ ತನಿಖೆಯನ್ನು CCB ಮಾಡಲಿದೆ. ಯಾರು ಹೇಳಿದ್ದಕ್ಕೆ ಸಿಡಿಆರ್ ತಗೆದುಕೊಂಡಿದ್ರು ಅನ್ನೋದೂ ತನಿಖೆ ಆಗುತ್ತೆ ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಬಿ.ದಯಾನಂದ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಮಂಡ್ಯದಲ್ಲಿ ಎರಡು ಗುಂಪಿನ ನಡುವೆ ಘರ್ಷಣೆ : ಬೆಳ್ಳೂರಿನಲ್ಲಿ ಉದ್ವಿಗ್ನ ವಾತಾವರಣ..!