ಬೆಂಗಳೂರು : ಕ್ಷುಲ್ಲಕ ಕಾರಣಕ್ಕೆ ಎರಡು ಕುಟುಂಬಗಳ ಮಧ್ಯೆ ಗಲಾಟೆ ನಡೆದಿದ್ದು, ಸಿನಿಮಾ ಸ್ಟೈಲ್ನಲ್ಲಿ ಎರಡು ಕುಟುಂಬಗಳು ಪರಸ್ಪರ ಹೊಡೆದಾಡಿಕೊಂಡ ಘಟನೆ ಕುಂಬಳಗೋಡು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಎರಡು ಕುಟುಂಬಗಳ ಗಲಾಟೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅರ್ಚನಾ ಎಂಬುವರ ಕುಟುಂಬದ ಮೇಲೆ ಹಲ್ಲೆ ನಡೆದಿದ್ದು, ಶಿವರಾಜು ಎಂಬುವರ ಕುಟುಂಬ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಗಲಾಟೆ ಯಾವ ಕಾರಣಕ್ಕೆ ನಡೆದಿದೆ ಎಂಬ ನಿಖರ ಮಾಹಿತಿ ಇನ್ನು ತಿಳಿದು ಬಂದಿಲ್ಲ.
ಈ ಬಗ್ಗೆ ಅರ್ಚನಾ ದೂರು ನೀಡಲು ಪೊಲೀಸ್ ಠಾಣೆಗೆ ಹೋದ್ರೆ ಠಾಣಾಧಿಕಾರಿ ನಿರ್ಲಕ್ಷ್ಯ ತೋರಿ, ದರ್ಪ ತೋರಿರುವ ಆರೋಪ ಕೇಳಿ ಬಂದಿದೆ. ಠಾಣೆಗೆ ಹೋದ್ರೆ ನ್ಯಾಯ ಸಿಕ್ಕಿಲ್ಲ ಅಂತಾ ಮಹಿಳಾ ಆಯೋಗಕ್ಕೆ ಅರ್ಚನಾ ದೂರು ನೀಡಿದ್ದಾರೆ. ಪೊಲೀಸರು, ಹಲ್ಲೆ ಮಾಡಿದವರ ವಿರುದ್ಧ ಅರ್ಚನಾ ಆಯೋಗಕ್ಕೆ ದೂರು ನೀಡಿದ್ದಾರೆ. ಆಡಿಯೋ, ವಿಡಿಯೋ ಫುಟೇಜ್ ಸಮೇತ ಅರ್ಚನಾ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ. ಮಹಿಳಾ ಆಯೋಗ ಘಟನೆ ಸಂಬಂಧ ದೂರು ದಾಖಲಿಸಿದೆ.
ಇದನ್ನು ಓದಿ : ಭವಾನಿ ರೇವಣ್ಣ ಬೇಲ್ ಅರ್ಜಿ ಭವಿಷ್ಯ ಇಂದೇ ನಿರ್ಧಾರ..!